AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಚೇತನ ಸಹೋದರಿಯರಿಗೆ ಸ್ಥಳದ ವ್ಯವಸ್ಥೆ ಮಾಡುವರೆಗೆ ಭಾಷಣ ಮಾಡಲ್ಲ, ಹೃದಯ ಗೆದ್ದ ಮೋದಿ

ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದಲ್ಲ ಒಂದು ವಿಶೇಷ ವಿಚಾರಕ್ಕೆ ಸಾಕ್ಷಿಯಾಗುತ್ತಿದ್ದಾರೆ. ರೋಡ್​ ಶೋ ವೇಳೆ ಪುಟ್ಟ ಮಗುವನ್ನು ಎತ್ತಿಕೊಂಡು ಆಡಿಸಿರುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಅಲ್ಲದೇ ಸಮಾವೇಶಕ್ಕೆ ಆಗಮಿಸಿದ್ದ ಪುಟ್ಟ ಬಾಲಕಿಗೆ ಆಟೋಗ್ರಾಫ್ ನೀಡಿದ್ದರು. ಇದೀಗ ತೆಲಾಂಗಣದಲ್ಲಿ ಸಮಾವೇಶಕ್ಕೆ ಬಂದಿದ್ದ ವಿಶೇಷ ಚೇತನರಿಗೆ ಮೊದಲ ಕೂಡಲು ಜಾಗ ಮಾಡಿಕೊಂಡಿ ಎಂದು ಹೇಳುವ ಮೂಲಕ ಮೋದಿ ಜನರ ಮನಸ್ಸು ಗೆದ್ದಿದ್ದಾರೆ. ಹಾಗಾದ್ರೆ, ಮೋದಿ ಇದನ್ನು ಎಲ್ಲಿ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ರಮೇಶ್ ಬಿ. ಜವಳಗೇರಾ
| Updated By: ವಿವೇಕ ಬಿರಾದಾರ|

Updated on:May 11, 2024 | 11:34 AM

Share

ಹೈದರಾಬಾದ್, (ಮೇ 10): ತೆಲಂಗಾಣದಲ್ಲಿ ನಡೆದ ಲೋಕಸಭಾ ಚುನವಣಾ (Loksabha Elections 2024) ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi)  ಜನರ ಹೃದಯ ಗೆದ್ದಿದ್ದಾರೆ. ಲೋಕಸಭಾ ಚುನಾವಣೆ ನಿಮಿತ್ತ ಇಂದು(ಮೇ 10) ತೆಲಂಗಾಣದ ಮಹೆಬೂಬ್ ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ  ಭಾಗಿಯಾಗಿದ್ದರು. ಈ ವೇಳೆ ಸಮಾವೇಶಕ್ಕೆ ಬಂದಿದ್ದ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಕೂಡಲು ಆಸನದ ವ್ಯವಸ್ಥೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು.. ವಿಶೇಷ ಚೇತನ ಸಹೋದರಿಯರು ನನಗೆ ಆಶೀರ್ವಾದ ನೀಡಲು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಮುಂದೆ ಬರಲು ಅವಕಾಶ ಮಾಡಿಕೊಡಿ. ಮುಂದೆ ನಿಂತಿರುವ ಪ್ರೀತಿಯ ಜನಗಳೇ ಅವರಿಗೆ ದಾರಿ ಬಿಡಿ. ವಿಶೇಷ ಚೇತನರು ಹಲವು ಗಂಟೆಗಳಿಂದ ಕಷ್ಟ ಪಡುತ್ತಿದ್ದಾರೆ. ಅವರ ನೋವು ನೋಡಲು ಸಾಧ್ಯವಿಲ್ಲ. ಅವರಿಗೆ ಸಭೆಯ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಿ. ವಿಶೇಷ ಚೇತನರಿಗೆ ವ್ಯವಸ್ಥೆ ಕಲ್ಪಿಸುವವರಗೆ ನಾನು ಭಾಷಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆ ತಕ್ಷಣವೇ ಸಮಾವೇಶದಲ್ಲಿ ನೆರದಿದ್ದ ಜನರು ವಿಶೇಷ ಚೇತನಿಗೆ ದಾರಿ ಮಾಡಿಕೊಟ್ಟಿದ್ದಾರೆ.  ಅಲ್ಲದೇ ವಿಶೇಷ ಚೇತರನ್ನು ಎತ್ತಿಕೊಂಡು ಬಂದು ವ್ಹೀಲ್​ ಚೇರ್​ನಲ್ಲಿ ಸಮಾವೇಶದಲ್ಲಿ ಮುಂಭಾಗದಲ್ಲಿ ಕರೆದುಕೊಂಡು ಬಂದು ಕೂಡಿಸಿದ್ದಾರೆ.  ಇನ್ನು ಮೋದಿಯವರ ವಿಶೇಷ ಚೇತನರ ಬಗೆಗಿನ ಕಾಳಜಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಪ್ಪಾಳೆ, ಶಿಳ್ಳೆ ಹಾಕಿದರು.

ಇದನ್ನೂ ಓದಿ: ಹಿಂದೂ ನಂಬಿಕೆಯನ್ನು ತೊಡೆದುಹಾಕಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ: ಮಹಾರಾಷ್ಟ್ರದಲ್ಲಿ ಮೋದಿ ವಾಗ್ದಾಳಿ

ಮೋದಿ ಈ ಮಾತುಗು ಹೇಳುತ್ತಿದ್ದಂತೆ ಹಿಂಭಾಗದಲ್ಲಿದ್ದ ವಿಶೇಷ ಚೇತನ ಯುವತಿಯರನ್ನು ಸಿಬ್ಬಂದಿ ಮುಂಭಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಿ ಕೊಟ್ಟರು. ಮೋದಿ ತಮ್ಮನ್ನು ಗುರುತಿಸಿ ಮುಂಭಾಗದಲ್ಲಿ ಆಸನ ವ್ಯವಸ್ಥೆ ಕಲ್ಪಿಸಿದ ಧನ್ಯತಾ ಭಾವ ಈ ವಿಶೇಷ ಚೇತನರಲ್ಲಿ ಎದ್ದುಕಾಣುತ್ತಿತ್ತು. ಇನ್ನು ವಿಶೇಷ ಚೇತನರ ಬಗ್ಗೆ ಮೋದಿಯ ಕಾಳಜಿ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೋದಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಮೋದಿ ಭಾರತದ ಅವತಾರ ಪುರುಷ ಎಂದು ಬಣ್ಣಿಸಿದ್ದಾರೆ. ಮೋದಿ ಜನ ನಾಯಕ, ಜನರ ಪ್ರಧಾನಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Fri, 10 May 24