ಹೋಟೆಲ್​​ನಲ್ಲಿ ಇಬ್ಬರು ಪ್ರೇಮಿಗಳೊಂದಿಗೆ ವೈದ್ಯೆಯ ರೊಮ್ಯಾನ್ಸ್, ಫಿಲ್ಮಿ ಸ್ಟೈಲ್​​ನಲ್ಲಿ ಎಂಟ್ರಿ ಕೊಟ್ಟ ಪತಿ

ವೈದ್ಯೆಯೊಬ್ಬರು ಇಬ್ಬರು ಪ್ರೇಮಿಗಳೊಂದಿಗೆ ಹೋಟೆಲ್​​​ವೊಂದರಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ವೈದ್ಯೆಯ ಪತಿಯ ಎಂಟ್ರಿಯಾಗಿದೆ. ಇದರಿಂದ ಅಘಾತಗೊಂಡ ಪತಿ, ಪತ್ನಿ ಹಾಗೂ ಇಬ್ಬರು ಪ್ರೇಮಿಗಳಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ.

ಹೋಟೆಲ್​​ನಲ್ಲಿ ಇಬ್ಬರು ಪ್ರೇಮಿಗಳೊಂದಿಗೆ ವೈದ್ಯೆಯ ರೊಮ್ಯಾನ್ಸ್, ಫಿಲ್ಮಿ ಸ್ಟೈಲ್​​ನಲ್ಲಿ ಎಂಟ್ರಿ ಕೊಟ್ಟ ಪತಿ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 11, 2024 | 10:43 AM

ಉತ್ತರ ಪ್ರದೇಶದ (uttar pradesh) ಕಾಸ್‌ಗಂಜ್‌ನಲ್ಲಿರುವ ಹೋಟೆಲ್​​ವೊಂದರಲ್ಲಿ ವೈದ್ಯೆಯೊಬ್ಬಳು ತನ್ನ ಇಬ್ಬರು ಪ್ರೇಮಿಗಳೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಆಕೆಯ ಗಂಡ ಎಂಟ್ರಿ ನೀಡಿದ್ದಾನೆ. ತನ್ನ ಹೆಂಡತಿಯನ್ನು ಇತರ ಪುರುಷರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ ಪತಿ ಆಘಾತಕ್ಕೊಳಗಾಗಿದ್ದಾನೆ. ಇದನ್ನು ನೋಡಲಾದೆ ಪತಿ ವೈದ್ಯೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆಕೆ ಜತೆಗೆ ಇದ್ದ ಇಬ್ಬರು ವ್ಯಕ್ತಿಗಳಿಗೂ ಹೊಡೆದಿದ್ದಾನೆ ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಹೋಟೆಲ್​​​ಗೆ ವೈದ್ಯೆಯ ಗಂಡನ ಜತೆಗೆ ಆತನ ಕುಟುಂಬದವರು ಕೂಡ ಬಂದಿದ್ದಾರೆ. ಈ ವೇಳೆ ಈ ಮೂರವರಿಗೆ ಎಲ್ಲರೂ ಸೇರಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಮಹಿಳೆ ಮತ್ತು ಇಬ್ಬರು ಪ್ರೇಮಿಗಳನ್ನು ಬಂಧಿಸಿದ್ದಾರೆ. ಪೊಲೀಸರು ತಿಳಿಸಿರುವ ಪ್ರಕಾರ, ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಕಳೆದ ಎರಡು ವರ್ಷಗಳಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈ ಕಾರಣಕ್ಕಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಬ್ಬರು ಕೂಡ ವೈದ್ಯ ವೃತ್ತಿಯನ್ನು ಮಾಡುತ್ತಿದ್ದರು.

ವೈದ್ಯರ ಪತ್ನಿ ಕಾಸ್ಗಂಜ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸುಮಾರು ದಿನಗಳಿಂದ ಪತ್ನಿಯ ಮೇಲೆ ಈ ರೀತಿಯ ಅನುಮಾನಗಳು ಇತ್ತು ಎಂದು ಪತಿ ಪೊಲೀಸರಿಗೆ ಹೇಳಿದ್ದಾನೆ. ಪತ್ನಿಯ ನಡವಳಿಕೆಯನ್ನು ಪತ್ತೆ ಮಾಡಲು ಬುಧವಾರ ಹೋಟೆಲ್​​​​ಗೆ ಬಂದಿದ್ದಾನೆ. ಆಗಾ ವೈದ್ಯೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಈ ವಿಚಾರ ಆತನ ಕುಟುಂಬಕ್ಕೂ ತಿಳಿದು ಹೋಟೆಲ್​​​ಗೆ ಬಂದಿದ್ದಾರೆ. ಈ ವೇಳೆ ಅಲ್ಲಿ ತೀವ್ರ ವಾಗ್ವಾದ ನಡೆದು ಕೈ-ಕೈ ಮಿಲಾಯಿಸಿದ್ದಾರೆ.

ಇದನ್ನೂ ಓದಿ: ಜಮ್ಮು – ಕಾಶ್ಮೀರದಲ್ಲಿ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ತಮ್ಮ ಭೂಮಿಯನ್ನು ದಾನವಾಗಿ ನೀಡಿದ ಇಬ್ಬರು ಮುಸ್ಲಿಮರು

2013ರಲ್ಲಿ ಮದುವೆಯಾದ ಈ ಇಬ್ಬರು ವೈದ್ಯ ದಂಪತಿಗಳ ನಡುವೆ ಕೆಲವೊಂದು ಬಿರುಕು ಉಂಟಾಗಿದೆ. ಆಕೆ ಯುವಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪ ಕೂಡ ಇತ್ತು. ಈ ವಿಚಾರವಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಮನೆಯವರೆಲ್ಲ ಸೇರಿ ಅವರಿಬ್ಬರನ್ನು ಜತೆಯಾಗಿ ಜೀವನ ನಡೆಸಲು ಒತ್ತಾಯಿಸಿದ್ದಾರೆ. ಆದರೆ ಆಕೆ ಯಾವುದಕ್ಕೂ ಒಪ್ಪಿಲ್ಲ. ಪತಿ ಮತ್ತು ಆತ ತಾಯಿ ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪತಿಯಿಂದ ಎರಡು ವರ್ಷಗಳ ಹಿಂದೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾಳೆ. ಆದರೆ ಇಬ್ಬರಿಗೂ ವಿಚ್ಛೇದನ ಆಗಿಲ್ಲ ಎಂದು ಹೇಳಲಾಗಿದೆ. ಗಂಡನ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ