ವೈಜಾಗ್: ಬೈಕಲ್ಲಿ ಹೋಗುತ್ತಿದ್ದ ಯುವಕನಿಗೆ ರಸ್ತೆ ಬದಿಯಲ್ಲಿ ಸಿಕ್ತು ಬ್ಯಾಗ್.. ತೆರೆದು ನೋಡಿದಾಗ ಶಾಕ್
Honesty: ಇನ್ನೂ ವಿವರಗಳಿಗೆ ಹೋಗುವುದಾದರೆ... ಒಡಿಶಾದ ಗಡಿಭಾಗದಲ್ಲಿರುವ ಗಂಜಾಂ ಜಿಲ್ಲೆಯ ಕಲ್ಲಿಕೋಟಾ ಸಮಿತಿಯ ಮಧುರಕ್ಕೆ ಸೇರಿದ ಸೂರಜ್ ಎಂಬಾತ... ಬಡಗಿ ಕೆಲಸ ಮಾಡುತ್ತಿದ್ದಾನೆ. ಈತ 2 ದಿನಗಳ ಹಿಂದೆ ಬೈಕ್ ನಲ್ಲಿ ತನ್ನ ಊರಿನಿಂದ ನಿರ್ಮಲಝರಕ್ಕೆ ಹೋಗುತ್ತಿದ್ದ.. ದಾರಿಯಲ್ಲಿ ಪೆಟ್ರೋಲ್ ಬಂಕ್ ಬಳಿ ಬ್ಯಾಗ್ ಬಿದ್ದಿತ್ತು. ಬೈಕ್ ನಿಲ್ಲಿಸಿ ಬ್ಯಾಗ್ ತೆರೆದಾಗ ಅದರಲ್ಲಿ ಹಣದ ಸಮೇತ ಔಷಧ ಹಾಗೂ ಕೆಲವು ದಾಖಲೆಗಳು ಪತ್ತೆಯಾಗಿವೆ.
ಸಮಾಜ ಕಲುಷಿತಗೊಂಡಿದೆ. ಎಲ್ಲಿಯಾದರೂ ಒಳ್ಳೆಯದು ನಡೆದರೆ.. ಅದನ್ನು ಹೈಲೈಟ್ ಮಾಡಬೇಕಾದ ಪರಿಸ್ಥಿತಿಯಿದೆ ಎಂದರೆ ಅರ್ಥ ಮಾಡಿಕೊಳ್ಳಬಹುದು. ಕೆಲವರು ಮೋಸ, ಬೆನ್ನಿಗೆ ಚೂರಿ ಹಾಕುವುದು ಮತ್ತು ದುರಾಸೆಯಂತಹ ಗುಣಗಳಿಂದ ಮನುಷ್ಯ ಲಾಲಸಿಯಾಗುಗುತ್ತಿದ್ದಾನೆ. ಇಂದಿನ ದಿನಗಳಲ್ಲಿ ಪ್ರಾಮಾಣಿಕರು (Honesty) ಅಪರೂಪ. ಅಂತಹ ವಿರಳ ಯುವಕನೊಬ್ಬ ಪ್ರಾಮಾಣಿಕತೆ ಮೆರೆದು ಷಹಬಾಸ್ ಅನ್ನಿಸಿಕೊಂಡಿದ್ದಾನೆ. ಆ ಯುವ ತನ್ನ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ರಸ್ತೆ ಬದಿಯಲ್ಲಿ ಬ್ಯಾಗ್ ಕಂಡಿದ್ದಾನೆ. ಬ್ಯಾಗ್ ನಲ್ಲಿ ಏನೋ ಇದೆ (Cash) ಎಂದು ಭಾವಿಸಿ ಬೈಕ್ ನಿಲ್ಲಿಸಿ ಅದನ್ನು ತೆರೆದು ನೋಡಿದ್ದಾನೆ. ಒಳಗೆ ಕಂತೆ ಕಂತೆ ಹಣ ಕಂಡು ಆಶ್ಚರ್ಯಗೊಂಡಿದ್ದಾನೆ. ಹೀಗೆ ಅನಾಯಸವಾಗಿ ದೊರೆತ ಹಣವನ್ನು ಆತ ತನ್ನಲ್ಲೇ ಇಟ್ಟುಕೊಳ್ಳಲು ಇಚ್ಛಿಸಲಿಲ್ಲ. ಪ್ರಾಮಾಣಿಕವನ್ನೇ ಉಸಿರಾಗಿಸಿಕೊಂಡು ಸೀದಾ ಪೊಲೀಸರಿಗೆ (Odisha Police) ಮಾಹಿತಿ ನೀಡಿದ್ದಾನೆ. ಅವರ ನೆರವು ಪಡೆದು ಹಣವಿದ್ದ ಚೀಲವನ್ನು ಸಂತ್ರಸ್ತರಿಗೆ ಹಿಂತಿರುಗಿಸಿದ್ದಾರೆ.
ಇನ್ನೂ ವಿವರಗಳಿಗೆ ಹೋಗುವುದಾದರೆ… ಒಡಿಶಾದ ಗಡಿಭಾಗದಲ್ಲಿರುವ ಗಂಜಾಂ ಜಿಲ್ಲೆಯ ಕಲ್ಲಿಕೋಟಾ ಸಮಿತಿಯ ಮಧುರಕ್ಕೆ ಸೇರಿದ ಸೂರಜ್ ಎಂಬಾತ… ಬಡಗಿ ಕೆಲಸ ಮಾಡುತ್ತಿದ್ದಾನೆ. ಈತ 2 ದಿನಗಳ ಹಿಂದೆ ಬೈಕ್ ನಲ್ಲಿ ತನ್ನ ಊರಿನಿಂದ ನಿರ್ಮಲಝರಕ್ಕೆ ಹೋಗುತ್ತಿದ್ದ.. ದಾರಿಯಲ್ಲಿ ಪೆಟ್ರೋಲ್ ಬಂಕ್ ಬಳಿ ಬ್ಯಾಗ್ ಬಿದ್ದಿತ್ತು. ಬೈಕ್ ನಿಲ್ಲಿಸಿ ಬ್ಯಾಗ್ ತೆರೆದಾಗ ಅದರಲ್ಲಿ ಹಣದ ಸಮೇತ ಔಷಧ ಹಾಗೂ ಕೆಲವು ದಾಖಲೆಗಳು ಪತ್ತೆಯಾಗಿವೆ. ಬ್ಯಾಗ್ ನಲ್ಲಿ ಹಣ ಇದ್ದ ಕಾರಣ ಯುವಕ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಇದನ್ನೂ ಓದಿ: ಧಾರ್ಮಿಕ ಕ್ಷೇತ್ರದಲ್ಲಿ ಬದಲಾಗುತ್ತಿದೆ ಜಮ್ಮು-ಕಾಶ್ಮೀರ, ಅಲೆಕ್ಸಾಂಡರ್ ಕೆಡವಿದ ಸೂರ್ಯ ದೇವಾಲಯ ಪುನರ್ ನಿರ್ಮಾಣ
ಕೂಡಲೇ ಸ್ಥಳಕ್ಕಾಗಮಿಸಿದ ಕಲ್ಲಿಕೋಟ ಪೊಲೀಸರು ಅದರಲ್ಲಿದ್ದ 90 ಸಾವಿರ ರೂ. ಎಣಿಸಿದ್ದಾರೆ. ಮತ್ತು ನಿಂತನಿಲುವಿನಲ್ಲೇ ಘಟನೆ ಎನೆಂಬುದರ ಎಣಿಕೆ ಮಾಡಿದ್ದಾರೆ. ಬ್ಯಾಗಿನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಅದು ಆಂದ್ರದ ವೈಜಾಗ್ನ ಮೆಡಿಕಲ್ ರೆಪ್ರೆಸೆಂಟೇಟೀವ್ಗೆ ಸೇರಿದ್ದು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಕೂಡಲೇ ಸಂತ್ರಸ್ತರಿಗೆ ಮಾಹಿತಿ ನೀಡಿ ಬ್ಯಾಗ್ ವಾಪಸ್ ನೀಡಲಾಯಿತು. ಸೂರಜ್ ಪ್ರಾಮಾಣಿಕತೆಗೆ ಪೊಲೀಸರು ಹಾಗೂ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೇರೆಯವರನ್ನು ದೋಚುವ ಇಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಹಣವನ್ನು ಹಿಂದಿರುಗಿಸಿದ ಯುವಕನಿಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ