ಜನ್ಮದಿನಕ್ಕಾಗಿ ದುಬೈಗೆ ಟ್ರಿಪ್ ಹೋಗಲಿಲ್ಲ ಎಂದು ಮೂಗಿಗೆ ಹೊಡೆದು ಪತಿಯನ್ನು ಸಾಯಿಸಿದ ಪೂನಾ ಹೆಂಡತಿ!
ವನವಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಪತಿ ನಿಖಿಲ್ ಖನ್ನಾ ತನ್ನ ಹೆಂಡತಿಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆಯನ್ನು ಉಡುಗೊರೆಯಾಗಿ ನೀಡಲಿಲ್ಲ ಮತ್ತು ಅವಳು ಬಯಸಿದಂತೆ ದುಬೈಗೆ ಪ್ರವಾಸವನ್ನು ಯೋಜಿಸಲಿಲ್ಲ ಎಂಬ ಕಾರಣಕ್ಕಾಗಿ ದಂಪತಿ ಜಗಳವಾಡಿದ್ದರಂತೆ.
ಪುಣೆ: ಗಂಡ (husband) ನಿಖಿಲ್ ಖನ್ನಾ ತನ್ನ ಹೆಂಡತಿಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ (gift) ನೀಡಲಿಲ್ಲವೆಂದು, ಅವಳು ಬಯಸಿದಂತೆ ದುಬೈಗೆ (Dubai) ಪ್ರವಾಸ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕಾಗಿ ದಂಪತಿ ಮಧ್ಯೆ ಜಗಳವಾಗಿದೆ. ತನ್ನ ಸಂಬಂಧಿಕರ ಹುಟ್ಟುಹಬ್ಬ ಆಚರಣೆಗಾಗಿಯೂ (birthday celebration) ಈ ಹಿಂದೆ ದೆಹಲಿಗೆ ಕರೆದುಕೊಂಡು ಹೋಗಲು ನಿಖಿಲ್ ಒಪ್ಪಲಿಲ್ಲ ಎಂದೂ ಪತ್ನಿ (wife) ರೇಣುಕಾ ಅಸಮಾಧಾನಗೊಂಡಿದ್ದರು ಎಂದು ವನವಡಿ ಪೊಲೀಸ್ ಠಾಣೆಯ (Wanavdi Police station) ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಪತ್ನಿಯನ್ನು ಬಂಧಿಸಲಾಗಿದೆ.
ಹುಟ್ಟು ಹಬ್ಬಕ್ಕೆ ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಪತ್ನಿಯ ಮೂಗಿಗೆ ಗುದ್ದಿದ್ದರಿಂದ 36 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಪುಣೆಯ ವನವಡಿ ಬಡಾವಣೆಯಲ್ಲಿರುವ ದಂಪತಿಯ ನಿವಾಸದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಆರು ವರ್ಷಗಳ ಹಿಂದೆ, ಸಾವಿಗೀಡಾದ ರಿಯಲ್ ಎಸ್ಟೇಟ್ ನಿರ್ಮಾಣ ಉದ್ಯಮದ ಉದ್ಯಮಿ ನಿಖಿಲ್ ಖನ್ನಾ ಅವರು 38 ವರ್ಷದ ರೇಣುಕಾ ಅವರನ್ನು ಪ್ರೀತಿಸಿ, ವಿವಾಹವಾಗಿದ್ದರು ಎಂದು Pune Times Mirror ವರದಿ ಮಾಡಿದೆ.
ವನವಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಪತಿ ನಿಖಿಲ್ ಖನ್ನಾ ತನ್ನ ಹೆಂಡತಿಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆಯನ್ನು ಉಡುಗೊರೆಯಾಗಿ ನೀಡಲಿಲ್ಲ ಮತ್ತು ಅವಳು ಬಯಸಿದಂತೆ ದುಬೈಗೆ ಪ್ರವಾಸವನ್ನು ಯೋಜಿಸಲಿಲ್ಲ ಎಂಬ ಕಾರಣಕ್ಕಾಗಿ ದಂಪತಿ ಜಗಳವಾಡಿದ್ದರಂತೆ. ತನ್ನ ಸಂಬಂಧಿಕರ ಹುಟ್ಟುಹಬ್ಬವನ್ನು ಆಚರಿಸುವುದಕ್ಕೂ ದೆಹಲಿಗೆ ಕರೆದುಕೊಂಡು ಹೋಗಲು ನಿಖಿಲ್ ಒಪ್ಪಲಿಲ್ಲ ಎಂದು ಪತ್ನಿ ರೇಣುಕಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರಂತೆ.
ಈ ಹಿನ್ನೆಲೆಯಲ್ಲಿ ತೀವ್ರ ವಾಗ್ವಾದದ ವೇಳೆ ರೇಣುಕಾ ತನ್ನ ಪತಿ ನಿಖಿಲ್ ಮುಖಕ್ಕೆ ಹೊಡೆದಿದ್ದಾಳೆ. ಗುದ್ದಿದ ರಭಸಕ್ಕೆ ನಿಖಿಲ್ ಅವರ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ಭಾರೀ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡರು. ಈ ಮಾರಣಾಂತಿಕ ವಾಗ್ವಾದ ಪ್ರಕರಣದಿಂದಾಗಿ ಪೊಲೀಸರು ರೇಣುಕಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ