Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತಸರ ಗ್ರೆನೇಡ್ ದಾಳಿಯ ಪ್ರಮುಖ ಆರೋಪಿ ಎನ್​ಕೌಂಟರ್​ನಲ್ಲಿ ಸಾವು

ಅಮೃತಸರ ದೇವಾಲಯದ ಮೇಲೆ ಇತ್ತೀಚೆಗೆ ನಡೆದ ಗ್ರೆನೇಡ್​ ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸ್​ ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. ಮೃತನನ್ನು ಅಮೃತಸರದ ಬಾಲ್ ಗ್ರಾಮದ ನಿವಾಸಿ ಜಗ್ಜಿತ್ ಸಿಂಗ್ ಅವರ ಪುತ್ರ ಗುರ್ಸಿದಕ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಅಮೃತಸರದಲ್ಲಿ ಬೈಕ್​ನಲ್ಲಿ ಬಂದ ಅಪರಿಚಿತ ದಾಳಿಕೋರನೊಬ್ಬ ಸ್ಫೋಟಕ ಸಾಧನವನ್ನು ಕಟ್ಟಡದ ಕೆಳಗೆ ಎಸೆದ ಬಳಿಕ ಸ್ಫೋಟ ಸಂಭವಿಸಿತ್ತು.

ಅಮೃತಸರ ಗ್ರೆನೇಡ್ ದಾಳಿಯ ಪ್ರಮುಖ ಆರೋಪಿ ಎನ್​ಕೌಂಟರ್​ನಲ್ಲಿ ಸಾವು
ಪೊಲೀಸರುImage Credit source: Indian Express
Follow us
ನಯನಾ ರಾಜೀವ್
|

Updated on: Mar 17, 2025 | 11:26 AM

ಅಮೃತಸರ, ಮಾರ್ಚ್​ 17: ಅಮೃತಸರ ದೇವಾಲಯದ ಮೇಲೆ ನಡೆದ ಗ್ರೆನೇಡ್​ ದಾಳಿಯ ಪ್ರಮುಖ ಆರೋಪಿ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತನನ್ನು ಅಮೃತಸರದ ಬಾಲ್ ಗ್ರಾಮದ ನಿವಾಸಿ ಜಗ್ಜಿತ್ ಸಿಂಗ್ ಅವರ ಪುತ್ರ ಗುರ್ಸಿದಕ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಅಮೃತಸರದಲ್ಲಿ ಬೈಕ್​ನಲ್ಲಿ ಬಂದ ಅಪರಿಚಿತ ದಾಳಿಕೋರನೊಬ್ಬ ಸ್ಫೋಟಕ ಸಾಧನವನ್ನು ಕಟ್ಟಡದ ಕೆಳಗೆ ಎಸೆದ ಬಳಿಕ ಸ್ಫೋಟ ಸಂಭವಿಸಿತ್ತು.

ಗೋಡೆಯ ಒಂದು ಭಾಗಕ್ಕೆ ಹಾನಿಯಾಗಿತ್ತು, ಕಿಟಕಿ ಗಾಜುಗಳು ಒಡೆದಿದ್ದವು. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವಾದರೂ ಸ್ಫೋಟವು ಅಮೃತಸರದ ಖಂಡ್ವಾಲಾ ಪ್ರದೇಶದ ನಿವಾಸಿಗಳಲ್ಲಿ ಭಯಭೀತತೆಯನ್ನುಂಟುಮಾಡಿತು.

ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಅಮೃತಸರ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತರು ರಾಜಸಾನ್ಸಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನಿರ್ದಿಷ್ಟ ಮಾಹಿತಿ ಸಿಕ್ಕಿತ್ತು. ಇದಾದ ನಂತರ, ಆರೋಪಿಗಳನ್ನು ಬಂಧಿಸಲು ಸಿಐಎ ಮತ್ತು ಎಸ್‌ಎಚ್‌ಒ ಛೆಹರ್ತಾದಿಂದ ಸಮರ್ಪಿತ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ; ಪಾಕಿಸ್ತಾನದ ನಂಟಿನ ಶಂಕೆ

ಪೊಲೀಸರು ಶಂಕಿತರು ಹೋಗುತ್ತಿದ್ದ ಬೈಕ್​ಅನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ತಮ್ಮ ವಾಹನವನ್ನು ಬಿಟ್ಟು ಸಮೀಪಿಸುತ್ತಿದ್ದ ತಂಡದ ಮೇಲೆ ಗುಂಡು ಹಾರಿಸಿದರು. ಘರ್ಷಣೆಯ ಸಮಯದಲ್ಲಿ, ಹೆಡ್ ಕಾನ್‌ಸ್ಟೆಬಲ್ ಗುರುಪ್ರೀತ್ ಸಿಂಗ್ ಅವರ ಎಡಗೈಗೆ ಗುಂಡು ತಗುಲಿತು, ಮತ್ತೊಂದು ಗುಂಡು ಇನ್ಸ್‌ಪೆಕ್ಟರ್ ಅಮೋಲಕ್ ಸಿಂಗ್ ಅವರ ಪೇಟಕ್ಕೆ ತಗುಲಿತು. ಮೂರನೇ ಸುತ್ತಿನ ಗುಂಡು ಪೊಲೀಸ್ ವಾಹನಕ್ಕೆ ತಗುಲಿ, ಪರಿಸ್ಥಿತಿಯ ತೀವ್ರತೆಯನ್ನು ಹೆಚ್ಚಿತ್ತು.

ಆತ್ಮರಕ್ಷಣೆಯ ಸಲುವಾಗಿ, ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ಗುಂಡು ಹಾರಿಸಿ ಪ್ರಮುಖ ಆರೋಪಿಯನ್ನು ಗಾಯಗೊಳಿಸಿದರು. ಬಳಿಕ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಇತರರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಗಾಯಗೊಂಡ ಕಾನ್‌ಸ್ಟೆಬಲ್‌ಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು.

ಈ ದಾಳಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪಾತ್ರವಿದೆ ಎಂದು ಶಂಕಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಅಮೃತಸರ ಮತ್ತು ಗುರುದಾಸ್ಪುರದಲ್ಲಿ ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ಅನೇಕ ಸ್ಫೋಟಗಳು ನಡೆದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ