ಹೋಳಿಯ ಮುನ್ನಾದಿನ ಊಟಕ್ಕೆಂದು ಹೋದವರು ಮನೆಗೆ ಮರಳಲಿಲ್ಲ, ವಡೋದರಾ ಅಪಘಾತದ ದಿನ ನಡೆದಿದ್ದೇನು?
ಅಂದು ಹೋಳಿಯ ಮುನ್ನಾ ದಿನ, ಹೇಮಾಲಿ ಪಟೇಲ್ ಪತಿ ಪೂರವ್ ಪಟೇಲ್ ತಮ್ಮ ಮಗಳೊಂದಿಗೆ ಹೋಲಿಕಾ ದಹನ್ ನಂತರ ಬಣ್ಣಗಳನ್ನು ಖರೀದಿಸಲು ಬಂದಿದ್ದರು. ಮರುದಿನ ಪಾರ್ಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು, ಬಳಿಕ ಏನಾದರೂ ತಿಂದು ಮನೆಗೆ ಹೊರಡೋಣವೆಂದು ಸ್ಕೂಟಿಯಲ್ಲಿ ಹೋಗಿದ್ದು ಅವರ ಕೊನೆಯ ಸವಾರಿಯಾಗಿತ್ತು.

ವಡೋದರಾ, ಮಾರ್ಚ್ 17: ಅಂದು ಹೋಳಿಯ ಮುನ್ನಾ ದಿನ, ಹೇಮಾಲಿ ಪಟೇಲ್ ಪತಿ ಪೂರವ್ ಪಟೇಲ್ ತಮ್ಮ ಮಗಳೊಂದಿಗೆ ಹೋಲಿಕಾ ದಹನ್ ನಂತರ ಬಣ್ಣಗಳನ್ನು ಖರೀದಿಸಲು ಹೊರಗಡೆ ಬಂದಿದ್ದರು. ಮರುದಿನ ಪಾರ್ಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು, ಬಳಿಕ ಏನಾದರೂ ತಿಂದು ಮನೆಗೆ ಹೊರಡೋಣವೆಂದು ಸ್ಕೂಟಿಯಲ್ಲಿ ಹೋಗಿದ್ದು ಅವರ ಕೊನೆಯ ಸವಾರಿಯಾಗಿತ್ತು.
ಕರೇಲಿಬಾಗ್ ಪ್ರದೇಶದಲ್ಲಿ ವೇಗವಾಗಿ ಬಂದು ಕಾರು ಪಟೇಲ್ ದಂತಿಯ ಸ್ಕೂಟರ್ಗೆ ಡಿಕ್ಕಿ ಹೊಡೆದು ಇತರೆ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಹೇಮಾಲಿ, ಪೂರವ್ ಹಾಗೂ ಅವರ ಮಗಳು ಗಾಳಿಯಲ್ಲಿ ಹಾರಿ ನೆಲಕ್ಕೆ ಅಪ್ಪಳಿಸಿದರು. ಹೇಮಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೂರವ್ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗಳು ಹಾಗೂ ಇತರ ಐವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಮೂವರಲ್ಲಿ ಇಬ್ಬರು ಬದುಕುಳಿದಿದ್ದರೂ ಮನೆಗೆ ಮತ್ತೆ ಮರಳಲು ಸಾಧ್ಯವಾಗಿಲ್ಲ.
ಕಾರನ್ನು ಎಂಎಸ್ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ ಎಂಬುವವರು ಓಡಿಸುತ್ತಿದ್ದರು. ಆತನ ಸ್ನೇಹಿತ ಪ್ರಾಂಶು ಚೌಹಾಣ್ ಪಕ್ಕದ ಸೀಟಿನಲ್ಲಿದ್ದ. ವೈರಲ್ ಆಗಿರುವ ವಿಡಿಯೋದಲ್ಲಿ ರಕ್ಷಿತ್ ಕಾರಿನಿಂದ ಇಳಿದವನು ಅನದರ್ ರೌಂಡ್, ನಿಕಿತಾ, ಓಂ ನಮಃಶಿವಾಯ ಎಂದು ಕೂಗುತ್ತಿದ್ದ.
ಮತ್ತಷ್ಟು ಓದಿ: ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಪ್ರತ್ಯಕ್ಷದರ್ಶಿಗಳು ರಕ್ಷಿತ್ ಕುಡಿದ ಅಮಲಿನಲ್ಲಿದ್ದ ಎಂದು ಹೇಳಿದ್ದಾರೆ. ಕಾರು ಅಪಘಾತಕ್ಕೀಡಾದಾಗ, ಜನಸಮೂಹ ರಕ್ಷಿತ್ ಅವರನ್ನು ಥಳಿಸುವ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು. ರಕ್ಷಿತ್, ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದವರಾಗಿದ್ದು, ಉದ್ಯಮಿಯೊಬ್ಬರ ಪುತ್ರ ಎಂದು ತಿಳಿದುಬಂದಿದೆ.
ಪೊಲೀಸರು ಈಗ ಸಹ ಪ್ರಯಾಣಿಕ ಪ್ರಾಂಶು ಚೌಹಾಣ್ ಅವರನ್ನು ಹುಡುಕುತ್ತಿದ್ದಾರೆ. ರಕ್ಷಿತ್ ಅವರು ತಾನು ಕುಡಿದಿಲ್ಲ ಅಥವಾ ವೇಗವಾಗಿ ಚಾಲನೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದು, ನಾನು ಸ್ಕೂಟಿಯನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದೆ.
ಅಲ್ಲಿ ಒಂದು ಗುಂಡಿ ಇತ್ತು ಕಾರು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ಏರ್ಬ್ಯಾಗ್ ಓಪನ್ ಆಗಿತ್ತು ಅದು ನನಗೆ ಅಡ್ಡ ಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿತ್ತು ಎಂದು ರಕ್ಷಿತ್ ಹೇಳಿದ್ದಾನೆ. ನನಗೆ ನ್ಯಾಯಬೇಕು ಹೇಮಾಲಿ ನನ್ನ ಸಹೋದರಿಯಂತೆ, ಯುವ ಪೀಳಿಗೆಗೆ ಇಂತಹ ಕೃತ್ಯವೆಸಗಿದಾಗ ಅದರ ಪರಿಣಾಮ ಏನಾಗುತ್ತದೆ ಎಂಬುದು ತಿಳಿಯಬೇಕು ಎಂದು ವಿಕಾಸ್ ಎಂಬುವವರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Mon, 17 March 25