AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯದಲ್ಲಿ ರಾಹುಲ್ ಗಾಂಧಿ ಹೊಸ ದಾಖಲೆ: 99 ಸೋಲುಗಳ ‘ಅನ್-ಟಚಬಲ್’ ರೆಕಾರ್ಡ್! ಶತಕದತ್ತ ದಾಪುಗಾಲು ಹಾಕುತ್ತಿದೆಯೇ ಕಾಂಗ್ರೆಸ್?

ಕಳೆದ ಎರಡು ದಶಕಗಳಿಂದ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ 99 ಚುನಾವಣಾ ಸೋಲುಗಳನ್ನು ಕಂಡಿದೆ. ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ, TVK ಜೊತೆ ಮೈತ್ರಿ ಮಾಡಿಕೊಳ್ಳುವ ರಾಹುಲ್ ಗಾಂಧಿ ಸಲಹೆ ತಿರಸ್ಕರಿಸಿದ ಹಿರಿಯ ನಾಯಕರ ನಿರ್ಧಾರ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗಿದೆ. ಮತದಾರರು ರಾಹುಲ್ ಗಾಂಧಿ ನೇತೃತ್ವವನ್ನು ಪ್ರಶ್ನಿಸುತ್ತಿದ್ದಾರೆ.

ರಾಜಕೀಯದಲ್ಲಿ ರಾಹುಲ್ ಗಾಂಧಿ ಹೊಸ ದಾಖಲೆ: 99 ಸೋಲುಗಳ 'ಅನ್-ಟಚಬಲ್' ರೆಕಾರ್ಡ್! ಶತಕದತ್ತ ದಾಪುಗಾಲು ಹಾಕುತ್ತಿದೆಯೇ ಕಾಂಗ್ರೆಸ್?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: May 04, 2026 | 2:29 PM

Share

ದೆಹಲಿ, ಮೇ.4: ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ರಾಜಕಾರಣದ ಕೇಂದ್ರ ಬಿಂದುವಾಗಿರುವ ರಾಹುಲ್ ಗಾಂಧಿ ಅವರ ಚುನಾವಣಾ ಹಾದಿಯ ಬಗ್ಗೆ ವಿರೋಧ ಪಕ್ಷಗಳು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರು ಹೊಸ ದಾಳಿ ಆರಂಭಿಸಿದ್ದಾರೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಒಟ್ಟು 99 ಚುನಾವಣಾ ಸೋಲುಗಳನ್ನು ಕಂಡಿದೆ ಎಂದು ಬಿಜೆಪಿ ಎಕ್ಸ್​​​​​​​​ನಲ್ಲಿ ಟ್ವೀಟ್​ ಮಾಡಿದೆ.

ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಒಳಗೊಂಡಂತೆ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ಅವಧಿಯಲ್ಲಿ 99 ಬಾರಿ ಹಿನ್ನಡೆ ಅನುಭವಿಸಿದೆ ಎಂದು ವರದಿಯಾಗಿದೆ. ಸದ್ಯದ ಫಲಿತಾಂಶಗಳ ಪ್ರಕಾರ, ಈ ಸಂಖ್ಯೆ 100ಕ್ಕೆ ಹತ್ತಿರವಾಗುತ್ತಿದ್ದು, ಇದನ್ನು “ಸೋಲಿನ ಶತಕ” ಎಂದು ಭಾರತೀಯ ಜನತಾ ಪಕ್ಷ ಟೀಕಿಸಿದೆ.

ಬಿಜೆಪಿ ಪೋಸ್ಟ್​​ ಇಲ್ಲಿದೆ ನೋಡಿ:

ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಸೇರಿದಂತೆ ಇತ್ತೀಚಿನ 2026ರ ಚುನಾವಣಾ ಫಲಿತಾಂಶಗಳು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿವೆ. ಪದೇ ಪದೇ ಬ್ರ್ಯಾಂಡಿಂಗ್ ಮತ್ತು ಹೊಸ ಘೋಷಣೆಗಳೊಂದಿಗೆ ಕಣಕ್ಕಿಳಿದರೂ ಮತದಾರರು ರಾಹುಲ್ ಗಾಂಧಿ ಅವರ ನಾಯಕತ್ವವನ್ನು ನಿರಾಕರಿಸುತ್ತಿದ್ದಾರೆಯೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ‘ಬೇವಕೂಫ್ ಮತ್ ಬನಾಓ, ಲಂಚದ ರಾಣಿ’! ಬಂಗಾಳದ ರಣಕಣದಲ್ಲಿ ಮೋದಿ, ಶಾ, ದೀದಿ ನಡುವೆ ನಡೆದಿದ್ದ ವಾಕ್ಸಮರದ ಹಿನ್ನೋಟ

ರಾಹುಲ್ ಗಾಂಧಿ ಸಲಹೆ ಮೀರಿದ್ದೇ ಸೋಲಿಗೆ ಕಾರಣ? ಎಐಸಿಸಿ ಮೂಲಗಳಿಂದ ಸ್ಫೋಟಕ ಮಾಹಿತಿ!

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಈ ಸೋಲಿಗೆ ಪಕ್ಷದ ಹಿರಿಯ ನಾಯಕರ ತಪ್ಪು ನಿರ್ಧಾರವೇ ಕಾರಣ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ನಟ ವಿಜಯ್ ಅವರ TVK (ತಮಿಳಗ ವೆಟ್ರಿ ಕಳಗಂ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ರಾಹುಲ್ ಗಾಂಧಿ ನೀಡಿದ್ದ ಸಲಹೆಯನ್ನು ಹಿರಿಯ ನಾಯಕರು ತಿರಸ್ಕರಿಸಿದ್ದೇ ಇಂದಿನ ಈ ದುಸ್ಥಿತಿಗೆ ಕಾರಣ ಎನ್ನಲಾಗಿದೆ. ತಮಿಳುನಾಡಿನಲ್ಲಿ ಬದಲಾಗುತ್ತಿರುವ ರಾಜಕೀಯ ಗಾಳಿಯನ್ನು ಅರಿತಿದ್ದ ರಾಹುಲ್ ಗಾಂಧಿ, ಉದಯೋನ್ಮುಖ ಶಕ್ತಿಯಾಗಿರುವ ವಿಜಯ್ ಅವರ TVK ಜೊತೆ ಕೈಜೋಡಿಸುವುದು ಒಳಿತು ಎಂದು ಸಲಹೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಪ್ರಸ್ತಾಪಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ಪಿ. ಚಿದಂಬರಂ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. TVK ಜೊತೆ ಗುರುತಿಸಿಕೊಳ್ಳುವುದಕ್ಕಿಂತ ಹಳೆಯ ಮಿತ್ರ ಪಕ್ಷ DMK ಜೊತೆಗೇ ಇರುವುದು ಸೇಫ್ ಎಂದು ಅವರು ವಾದಿಸಿದ್ದರು. ಹಿರಿಯ ನಾಯಕರ ಮಾತಿಗೆ ಬೆಲೆ ಕೊಟ್ಟು ರಾಹುಲ್ ಗಾಂಧಿ ಅವರು ಸುಮ್ಮನಾಗಿದ್ದರು. ಆದರೆ, DMK ವಿರುದ್ಧ ಜನಾಭಿಪ್ರಾಯ ವ್ಯಕ್ತವಾದಾಗ ಕಾಂಗ್ರೆಸ್ ಕೂಡ ಸೋಲಿನ ಸುಳಿಗೆ ಸಿಲುಕಿತು. ಒಂದು ವೇಳೆ TVK ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು ಎಂಬುದು ಎಐಸಿಸಿ ಮೂಲಗಳ ವಿಶ್ಲೇಷಣೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us