Rajya Sabha Bypolls: 12 ರಾಜ್ಯಸಭಾ ಸದಸ್ಯರ ಅವಿರೋಧ ಆಯ್ಕೆ; ಬಹುಮತದ ಗಡಿ ಮುಟ್ಟಿದ ಎನ್‌ಡಿಎ
ರಾಜ್ಯಸಭೆಯು 245 ಸ್ಥಾನಗಳನ್ನು ಹೊಂದಿದೆ. ಆದರೂ ಪ್ರಸ್ತುತ 8 ಹುದ್ದೆಗಳು ಖಾಲಿ ಇವೆ. ಜಮ್ಮು ಮತ್ತು ಕಾಶ್ಮೀರದಿಂದ 4 ಮತ್ತು 4 ನಾಮನಿರ್ದೇಶಿತ ಸ್ಥಾನಗಳು ಖಾಲಿ ಇವೆ. ರಾಜ್ಯಸಭೆಯ ಪ್ರಸ್ತುತ ಬಲ 237ರೊಂದಿಗೆ ಬಹುಮತಕ್ಕೆ 119 ಸ್ಥಾನಗಳು ಬೇಕಾಗುತ್ತವೆ.
ನವದೆಹಲಿ: ಮೇಲ್ಮನೆಯ ಉಪಚುನಾವಣೆಯಲ್ಲಿ 9 ಬಿಜೆಪಿ ಸದಸ್ಯರು ಮತ್ತು ಇಬ್ಬರು ಮಿತ್ರಪಕ್ಷಗಳಿಂದ ಅವಿರೋಧವಾಗಿ ಆಯ್ಕೆಯಾದ ಕಾರಣ ಆಡಳಿತಾರೂಢ ಎನ್‌ಡಿಎ ಇಂದು ರಾಜ್ಯಸಭೆಯಲ್ಲಿ ಬಹುಮತದ ಗಡಿ ತಲುಪಿದೆ. ಈ 9ರೊಂದಿಗೆ ಬಿಜೆಪಿಯ ಬಲ 96ಕ್ಕೆ ತಲುಪಿದ್ದು, ಮೇಲ್ಮನೆಯಲ್ಲಿ ಎನ್‌ಡಿಎ 112ಕ್ಕೆ ತಲುಪಿದೆ. ಅವಿರೋಧವಾಗಿ ಆಯ್ಕೆಯಾದ ಇತರ ಮೂವರಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಮತ್ತು ರಾಷ್ಟ್ರೀಯ ಲೋಕ ಮಂಚ್‌ನಿಂದ ತಲಾ ಒಬ್ಬರು ಸೇರಿದ್ದಾರೆ. ಆಡಳಿತಾರೂಢ ಮೈತ್ರಿಕೂಟಕ್ಕೆ 6 ನಾಮನಿರ್ದೇಶಿತ ಹಾಗೂ ಒಬ್ಬ ಸ್ವತಂತ್ರ ಸದಸ್ಯರ ಬೆಂಬಲವೂ ಇದೆ.
ಕಾಂಗ್ರೆಸ್‌ನ ಒಬ್ಬರು ಸದಸ್ಯರೂ ಚುನಾಯಿತರಾಗಿದ್ದಾರೆ. ಈ ಮೂಲಕ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ರಾಜ್ಯಸಭೆಯು 245 ಸ್ಥಾನಗಳನ್ನು ಹೊಂದಿದೆ. ಆದರೂ ಪ್ರಸ್ತುತ 8 ಹುದ್ದೆಗಳು ಖಾಲಿ ಇವೆ. ಜಮ್ಮು ಮತ್ತು ಕಾಶ್ಮೀರದಿಂದ 4 ಮತ್ತು 4 ನಾಮನಿರ್ದೇಶಿತ ಸ್ಥಾನಗಳಿವೆ. ಬಹುಮತ ಸಾಬೀತುಪಡಿಸಲು 119 ಸ್ಥಾನಗಳ ಅಗತ್ಯವಿದೆ. ಮಿತ್ರಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಎನ್‌ಡಿಎ ಆ ಗಡಿಯನ್ನು ದಾಟಿದೆ.
ಇದನ್ನೂ ಓದಿ: Russia-Ukraine Conflict: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ; ಉಕ್ರೇನ್ ಭೇಟಿಯ ಬಗ್ಗೆ ಚರ್ಚೆ
ಬಿಜೆಪಿ ಅಭ್ಯರ್ಥಿಗಳಲ್ಲಿ ಅಸ್ಸಾಂನಿಂದ ಮಿಷನ್ ರಂಜನ್ ದಾಸ್ ಮತ್ತು ರಾಮೇಶ್ವರ್ ತೇಲಿ, ಬಿಹಾರದಿಂದ ಮನನ್ ಕುಮಾರ್ ಮಿಶ್ರಾ, ಹರಿಯಾಣದಿಂದ ಕಿರಣ್ ಚೌಧರಿ, ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್, ಮಹಾರಾಷ್ಟ್ರದಿಂದ ಧೀರ್ಯಾ ಶೀಲ್ ಪಾಟೀಲ್, ಒಡಿಶಾದಿಂದ ಮಮತಾ ಮೊಹಾಂತ, ತ್ರಿಪುರಾದ ರಾಜೀವ್ ಭಟ್ಟಾಚರ್ಜಿ, ರಾಜಸ್ಥಾನದಿಂದ ರವನೀತ್ ಸಿಂಗ್ ಬಿಟ್ಟು ಸೇರಿದ್ದಾರೆ.
ತೆಲಂಗಾಣದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎನ್‌ಸಿಪಿ ಅಜಿತ್ ಪವಾರ್ ಬಣದ ನಿತಿನ್ ಪಾಟೀಲ್ ಮಹಾರಾಷ್ಟ್ರದಿಂದ ಮತ್ತು ಆರ್‌ಎಲ್‌ಎಂನ ಉಪದೇಂದ್ರ ಕುಶ್ವಾಹಾ ಬಿಹಾರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Tue, 27 August 24