ದಶಕಗಳ ಕನಸು ನನಸು, ರಾಮ ಎನ್ನಲಿದ್ದಾರೆ 40ಕ್ಕೂ ಅಧಿಕ ವರ್ಷಗಳಿಂದ ಮೌನ ತಳೆದಿರುವ ಬಾಬಾ

ದಶಕಗಳ ಕನಸು ಅಂತೂ ನನಸಾಗುವ ಸಮಯ ಬಂದೇ ಬಿಟ್ಟಿದೆ. ಅಂತೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯಾಗುವವರೆಗೂ ಚಪ್ಪಲಿ ಹಾಕುವುದಿಲ್ಲ, ಮಾತನಾಡುವುದಿಲ್ಲ ಎಂದು ಮೌನ ಧೀಕ್ಷೆ ತೊಟ್ಟಿದ್ದ ಮೌನಿ ಬಾಬಾ ಜನವರಿ 22ರಂದು ಮೌನ ಮುರಿದು ರಾಮ ಎನ್ನಲಿದ್ದಾರೆ.

ದಶಕಗಳ ಕನಸು ನನಸು, ರಾಮ ಎನ್ನಲಿದ್ದಾರೆ 40ಕ್ಕೂ ಅಧಿಕ ವರ್ಷಗಳಿಂದ ಮೌನ ತಳೆದಿರುವ ಬಾಬಾ
ಮೌನಿ ಬಾಬಾ

Updated on: Jan 13, 2024 | 10:45 AM

ದಶಕಗಳ ಕನಸು ಅಂತೂ ನನಸಾಗುವ ಸಮಯ ಬಂದೇ ಬಿಟ್ಟಿದೆ. ಅಂತೂ ಅಯೋಧ್ಯೆಯಲ್ಲಿ ರಾಮ ಮಂದಿರ(Ram Mandir) ನಿರ್ಮಾಣವಾಗಿದೆ. ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯಾಗುವವರೆಗೂ ಚಪ್ಪಲಿ ಹಾಕುವುದಿಲ್ಲ, ಮಾತನಾಡುವುದಿಲ್ಲ ಎಂದು ಮೌನ ಧೀಕ್ಷೆ ತೊಟ್ಟಿದ್ದ ಮೌನಿ ಬಾಬಾ ಜನವರಿ 22ರಂದು ಮೌನ ಮುರಿದು ರಾಮ ಎನ್ನಲಿದ್ದಾರೆ.

ರಾಮ ಮಂದಿರ ನಿರ್ಮಾಣ ಕುರಿತು ದೇಶದ ಜನತೆ ಸಂತಸಪಟ್ಟಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ದೇವರ ಮಂಟಪದಲ್ಲಿ ರಾಮನಿರಲಿ ಎಂದು ಬಯಸುತ್ತಾರೆ. ರಾಮಲಲ್ಲಾನ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಕೆಲವರು ಸಾವಿರಾರು ಮೈಲಿಗಳಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ರಾಮಲಲ್ಲಾನ ಪ್ರತಿಷ್ಠಾಪನೆಗೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಮೌನಿ ಬಾಬಾ ಯಾರು?
ರಾಮಮಂದಿರ ನಿರ್ಮಾಣಕ್ಕಾಗಿ ಋಷಿಮುನಿಗಳು ಮತ್ತು ಸಂತರು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಆ ಸಂತರಲ್ಲಿ ಮಧ್ಯಪ್ರದೇಶದ ಮೌನಿ ಬಾಬಾ ಅವರ ಹೆಸರೂ ಸೇರಿದೆ. ಮೋಹನ್ ಗೋಪಾಲ್ ದಾಸ್ ಎಂದು ಕರೆಯಲ್ಪಡುವ ಮೌನಿ ಬಾಬಾ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ತೆಗೆದುಹಾಕುವ ಕಾರ್ಮಿಕರೊಂದಿಗೆ ಇದ್ದರು.

ಮತ್ತಷ್ಟು ಓದಿ: ರಾಮಮಂದಿರ ಉದ್ಘಾಟನೆಯಂದು 30 ವರ್ಷಗಳ ಮೌನವ್ರತ ಅಂತ್ಯಗೊಳಿಸಿ ‘ರಾಮ’ ಎನ್ನಲಿದ್ದಾರೆ ಮೌನ ಮಾತಾ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವವರೆಗೆ ಮತ್ತು ರಾಮಲಲ್ಲಾ ಸಿಂಹಾಸನದಲ್ಲಿ ಕುಳಿತುಕೊಳ್ಳುವವರೆಗೂ ಮೌನವಾಗಿರುತ್ತೇನೆ ಎಂದು ಹೇಳಿದ್ದರು. ರಾಮಮಂದಿರ ನಿರ್ಮಾಣದ ನಂತರವೇ ಅವರು ಮೌನ ಮುರಿಯುತ್ತಾರೆ. ಜನವರಿ 22 ರಂದು ರಾಮಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ.

ಪ್ರಾಣ ಪ್ರತಿಷ್ಠೆಯ ನಂತರ, ಮೌನಿ ಬಾಬಾ ಭಗವಂತ ರಾಮನ ಹೆಸರನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಮೌನವನ್ನು ಮುರಿಯುತ್ತಾರೆ.

ರಾಮಮಂದಿರದ ಪ್ರತಿಷ್ಠಾಪನೆಯ ಆಹ್ವಾನಕ್ಕಾಗಿ ಮೌನಿ ಬಾಬಾ ಕಾಯುತ್ತಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ಆಹ್ವಾನ ಕಳುಹಿಸಬಹುದು ಎಂದು ನಂಬಿದ್ದಾರೆ.

ಪ್ರಾಣ ಪ್ರತಿಷ್ಠಾನಕ್ಕೆ ಆಮಂತ್ರಣ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಪ್ರತಿದಿನ ಎಸ್‌ಪಿ ಕಚೇರಿ ಮತ್ತು ಡಿಎಂ ಕಚೇರಿಗೆ ಭೇಟಿ ನೀಡುತ್ತಾರೆ. ಈ ಸಂಬಂಧ ಡಿಎಂ ಮತ್ತು ಎಸ್ಪಿಗೂ ಪತ್ರ ಬರೆದಿದ್ದಾರೆ. ಮೌನಿ ಬಾಬಾ ಸ್ಲೇಟಿನಲ್ಲಿ ಬರೆಯುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us