AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೃಹತ್ ನೀರಿನ ಟ್ಯಾಂಕ್ ಮೇಲೆ ರೀಲ್ಸ್ ಶೂಟ್, ಆಯತಪ್ಪಿ ಬಿದ್ದು ಯುವಕ ಸಾವು, ಸಿಲುಕಿಕೊಂಡಿದ್ದ ಇಬ್ಬರ ರಕ್ಷಿಸಿದ ವಾಯುಪಡೆ

ರೀಲ್ಸ್​ ಮಾಡುವ ಹುಚ್ಚು ಯುವಕನ ಜೀವವನ್ನೇ ಕಸಿದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೀಲ್ಸ್​ ಮಾಡಲು ಮೂವರು ಯುವಕರು ಬೃಹತ್ ನೀರಿನ ಟ್ಯಾಂಕ್ ಏರಿದ್ದರು. ಮೂವರಲ್ಲಿ ಒಬ್ಬಾತ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಇಬ್ಬರನ್ನು ವಾಯುಪಡೆ ರಕ್ಷಿಸಿದೆ. ಶನಿವಾರ ಮಧ್ಯಾಹ್ನ ಐವರು ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಚಿತ್ರೀಕರಿಸುವ ಆಸೆಯಿಂದ 60 ಅಡಿ ಎತ್ತರದ ಹಳೆಯ ನೀರಿನ ಟ್ಯಾಂಕ್ ಹತ್ತಿದ್ದರು. ಆದರೆ, ಈ ಆಟವು ಕ್ಷಣಮಾತ್ರದಲ್ಲಿ ಭೀಕರ ಅವಘಡವಾಗಿ ಬದಲಾಯಿತು.

Video: ಬೃಹತ್ ನೀರಿನ ಟ್ಯಾಂಕ್ ಮೇಲೆ ರೀಲ್ಸ್ ಶೂಟ್, ಆಯತಪ್ಪಿ ಬಿದ್ದು ಯುವಕ ಸಾವು, ಸಿಲುಕಿಕೊಂಡಿದ್ದ ಇಬ್ಬರ ರಕ್ಷಿಸಿದ ವಾಯುಪಡೆ
ಯುವಕರುImage Credit source: X Account
ನಯನಾ ರಾಜೀವ್
|

Updated on: May 04, 2026 | 7:25 AM

Share

ಲಕ್ನೋ, ಮೇ 04: ರೀಲ್ಸ್​ ಮಾಡುವ ಹುಚ್ಚು ಯುವಕನ ಜೀವವನ್ನೇ ಕಸಿದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೀಲ್ಸ್​ ಮಾಡಲು ಮೂವರು ಯುವಕರು ಬೃಹತ್ ನೀರಿನ ಟ್ಯಾಂಕ್(Water Tank) ಏರಿದ್ದರು. ಮೂವರಲ್ಲಿ ಒಬ್ಬಾತ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಇಬ್ಬರನ್ನು ವಾಯುಪಡೆ ರಕ್ಷಿಸಿದೆ. ಶನಿವಾರ ಮಧ್ಯಾಹ್ನ ಐವರು ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಚಿತ್ರೀಕರಿಸುವ ಆಸೆಯಿಂದ 60 ಅಡಿ ಎತ್ತರದ ಹಳೆಯ ನೀರಿನ ಟ್ಯಾಂಕ್ ಹತ್ತಿದ್ದರು. ಆದರೆ, ಈ ಆಟವು ಕ್ಷಣಮಾತ್ರದಲ್ಲಿ ಭೀಕರ ಅವಘಡವಾಗಿ ಬದಲಾಯಿತು.

ಮಕ್ಕಳು ಟ್ಯಾಂಕ್ ಹತ್ತಿ ವೀಡಿಯೊ ಚಿತ್ರೀಕರಿಸಿದ ನಂತರ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಾಗ, ಅವರ ಭಾರಕ್ಕೆ ಏಣಿಯು ಏಕಾಏಕಿ ಕುಸಿದುಬಿದ್ದಿದೆ. ಈ ವೇಳೆ ಮೂವರು ಮಕ್ಕಳು ಸುಮಾರು 50 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದರು. 13 ವರ್ಷದ ಸಿದ್ಧಾರ್ಥ್ ಎಂಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಏಣಿ ಬಿದ್ದ ಕಾರಣ ಉಳಿದ ಇಬ್ಬರು ಮಕ್ಕಳು 60 ಅಡಿ ಎತ್ತರದ ಟ್ಯಾಂಕ್ ಮೇಲೆ ಸಿಲುಕಿಕೊಂಡರು. ಸ್ಥಳೀಯರು ಮತ್ತು ಅಧಿಕಾರಿಗಳು ರಕ್ಷಣೆಗೆ ಮುಂದಾದರೂ ಸವಾಲುಗಳು ಎದುರಾದವು.ಕ್ರೇನ್ ಮತ್ತು ದೊಡ್ಡ ಯಂತ್ರಗಳು ಸ್ಥಳಕ್ಕೆ ತಲುಪಲು ಜೌಗು ಭೂಮಿ ಅಡ್ಡಿಯಾಯಿತು. ಮಳೆಯ ಕಾರಣದಿಂದ ಎಲ್ಲರ ಪ್ರಯತ್ನವೂ ವಿಫಲವಾಗಿತ್ತು.

ಮತ್ತಷ್ಟು ಓದಿ: ಬಿಸಿಲ ತಾಪದಿಂದ ಬಚಾವಾಗಲು ನೀರಿನ ಟ್ಯಾಂಕನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಕೋತಿಗಳು

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ವಾಯುಪಡೆಯ ನೆರವು ಪಡೆಯಲು ಸೂಚಿಸಿದ್ದಾರೆ. ರಾತ್ರೋರಾತ್ರಿ ಆರಂಭವಾದ ಈ ಕಾರ್ಯಾಚರಣೆಗೆ Mi-17 V5 ಹೆಲಿಕಾಪ್ಟರ್ ಅನ್ನು ಬಳಸಲಾಯಿತು. ಕತ್ತಲೆ ಮತ್ತು ಮಳೆಯ ನಡುವೆಯೂ ವಾಯುಪಡೆಯ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.

ಸುಮಾರು 16 ಗಂಟೆಗಳ ನಿರಂತರ ಪ್ರಯತ್ನದ ನಂತರ, ಬೆಳಗ್ಗೆ 5.20 ರ ಸುಮಾರಿಗೆ ಟ್ಯಾಂಕ್ ಮೇಲಿದ್ದ ಇಬ್ಬರು ಯುವಕರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಲಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ರಾತ್ರಿಯಿಡೀ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದರು.

ಈ ಘಟನೆಯು ಸಾಮಾಜಿಕ ಮಾಧ್ಯಮಕ್ಕಾಗಿ ಅಪಾಯಕಾರಿ ಸಾಹಸಗಳನ್ನು ಮಾಡುವ ಯುವಜನತೆಗೆ ಒಂದು ಕಠಿಣ ಪಾಠವಾಗಿದೆ. ಕೇವಲ ಕೆಲವು ‘ಲೈಕ್ಸ್’ ಮತ್ತು ‘ಶೇರ್’ಗಳಿಗಾಗಿ ಅಮೂಲ್ಯವಾದ ಜೀವವನ್ನು ಪಣಕ್ಕಿಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆಯಿನದ ಅರಿತುಕೊಳ್ಳಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us