ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ವಿಆರ್‌ಎಸ್ ತೆಗೆದುಕೊಂಡರು.. ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ?
Hyderabad Osmania Medical College: ಇತ್ತೀಚೆಗೆ ಉಸ್ಮಾನಿಯಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಶಶಿಕಲಾ ರೆಡ್ಡಿ ಅವರು ಸ್ವಯಂ ನಿವೃತ್ತಿ ಪಡೆದರು. ಆಗ ಅವರನ್ನು ವಿದ್ಯಾರ್ಥಿಗಳು ಕುದುರೆ ಗಾಡಿಯಲ್ಲಿ ರ್ಯಾಲಿಯಲ್ಲಿ ಕರೆದೊಯ್ದಿದ್ದರು. ಧನ್ಯವಾದಗಳು ಮೇಡಂ ಅನ್ನುತ್ತಾ ಬ್ಯಾಂಡ್ ಬಾರಿಸುತ್ತಾ ವೀಡಿಯೋ ಮಾಡಿದರು.
ಉತ್ತಮ ಶಿಕ್ಷಣ ನೀಡಿದ ಶಿಕ್ಷಕರು ಶಾಲೆ ಬಿಡುವಾಗ ವಿದ್ಯಾರ್ಥಿಗಳು ಹೆಮ್ಮೆಯಿಂದ ನಾನಾ ರೀತಿಗಳಲ್ಲಿ ತಮ್ಮ ಕೃತಜ್ಞತೆ ತೋರುತ್ತಾರೆ. ಕಾಲಕ್ಕೆ ತಕ್ಕಂತೆ ಅದನ್ನೆಲ್ಲಾ ವೀಡಿಯೋ ಮಾಡುತ್ತಾರೆ. ಅದರಲ್ಲಿ ಇನ್ನೂ ಏನಾದರೂ ವಿಶೇಷವಾದದ್ದು ಘಟಿಸಿದರೆ ಅಂತಹ ವಿಡಿಯೋಗಳು ವೈರಲ್ ಆಗಿ ಮತ್ತಷ್ಟು ಅವರ ಸಂಭ್ರವನ್ನು ಹೆಚ್ಚಿಸುತ್ತದೆ. ಇತ್ತೀಚೆಗೆ ಉಸ್ಮಾನಿಯಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಶಶಿಕಲಾ ರೆಡ್ಡಿ ಅವರು ಸ್ವಯಂ ನಿವೃತ್ತಿ ಪಡೆದರು. ಆಗ ಅವರನ್ನು ವಿದ್ಯಾರ್ಥಿಗಳು ಕುದುರೆ ಗಾಡಿಯಲ್ಲಿ ರ್ಯಾಲಿಯಲ್ಲಿ ಕರೆದೊಯ್ದಿದ್ದರು. ಧನ್ಯವಾದಗಳು ಮೇಡಂ ಅನ್ನುತ್ತಾ ಬ್ಯಾಂಡ್ ಬಾರಿಸುತ್ತಾ ವೀಡಿಯೋ ಮಾಡಿದರು. ವೈದ್ಯಕೀಯ ಕಾಲೇಜು ಅಭಿವೃದ್ಧಿಗೆ ಶಶಿಕಲಾ ಮೇಡಂ ಸಾಕಷ್ಟು ಶ್ರಮಿಸಿದ್ದರು ಎಂದು ವಿದ್ಯಾರ್ಥಿಗಳು ಅಭಿಮಾನದಿಂದ ಹೇಳಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಡಾ. ತಾಕಿವುದ್ದೀನ್, ಡಾ.ಕಿರಣ್ಮಯಿ, ಡಾ.ಜಯಾ, ಡಾ.ಪದ್ಮಾವತಿ, ಡಾ.ಸುಮಲತಾ, ಡಾ.ಅನಿತಾ, ಡಾ.ಭವಾನಿ ವೇಣುಗೋಪಾಲರೆಡ್ಡಿ ಉಪೇಂದ್ರ ಮತ್ತಿತರರು ಭಾಗವಹಿಸಿದ್ದರು.
ಸ್ವಯಂಪ್ರೇರಿತವಾಗಿ ನಿವೃತ್ತರಾದ ಉಸ್ಮಾನಿಯಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ. ಶಶಿಕಲಾ ಅವರ ಮೇಲೆ ಪುಷ್ಪಗಳನ್ನು ಸುರಿಸಲಾಯಿತು. ಈ ಸಂದರ್ಭದಲ್ಲಿ ಉಸ್ಮಾನಿಯಾ ಆಸ್ಪತ್ರೆ ಅಧೀಕ್ಷಕ ಡಾ.ಬಿ. ನಾಗೇಂದ್ರ ಮಾತನಾಡಿ ಶಶಿಕಲಾ ರೆಡ್ಡಿ ಅವರು ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಕೊಂಡಾಡಿದರು. ಈ ಸಂದರ್ಭದಲ್ಲಿ ಶಶಿಕಲಾ ಅವರು ಮಾತನಾಡಿ, ಈ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವುದು ಅತೀವ ಸಂತಸ ತಂದಿದೆ ಎಂದು ಅಭಿಮಾನದಿಂದ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ