Russia-Ukraine Crisis: ರಷ್ಯಾ- ಉಕ್ರೇನ್ ಉದ್ವಿಗ್ನತೆಯ ಎಫೆಕ್ಟ್; ಭಾರತದಲ್ಲೂ ಈ ವಸ್ತುಗಳ ಬೆಲೆಯೇರಿಕೆ ಸಾಧ್ಯತೆ

ರಷ್ಯಾವು ಜಗತ್ತಿಗೆ ಮೂರನೇ ಅತಿದೊಡ್ಡ ತೈಲ ಪೂರೈಕೆದಾರ ದೇಶವೆಂಬುದನ್ನು ನಾವು ಮರೆಯುವಂತಿಲ್ಲ. ಇದರಿಂದ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

Russia-Ukraine Crisis: ರಷ್ಯಾ- ಉಕ್ರೇನ್ ಉದ್ವಿಗ್ನತೆಯ ಎಫೆಕ್ಟ್; ಭಾರತದಲ್ಲೂ ಈ ವಸ್ತುಗಳ ಬೆಲೆಯೇರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Feb 24, 2022 | 10:58 AM

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷವು (Russia-Ukraine Crisis) ಕೇವಲ ಎರಡು ದೇಶಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಈ ಎರಡು ದೇಶಗಳ ನಡುವಿನ ಉದ್ವಿಗ್ನತೆ ಭಾರತ, ಅಮೆರಿಕ, ಫ್ರಾನ್ಸ್ ಮುಂತಾದ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ರಷ್ಯಾ ಮತ್ತು ಉಕ್ರೇನ್​ನಲ್ಲಿ ಇತ್ತೀಚೆಗೆ ಉದ್ವಿಗ್ನತೆ ಉಲ್ಬಣಗೊಂಡಿರುವುದರಿಂದ ಹಲವು ರಾಷ್ಟ್ರಗಳಿಗೆ ಆತಂಕ ಶುರುವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ಸ್ವತಂತ್ರ ದೇಶಗಳಾಗಿ ಘೋಷಿಸಿದ ನಂತರ ಆರ್ಥಿಕ ಅಸ್ಥಿರತೆಯು ಹೆಚ್ಚಾಯಿತು.

ಇದರಿಂದ ತೈಲದ ಬೆಲೆಯು 2014ರಿಂದ ಅತ್ಯಧಿಕ ಮಟ್ಟದಲ್ಲಿದೆ. ಭಾರತಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನರು ದಿನವೂ ಬಳಸುವ ಅನೇಕ ವಸ್ತುಗಳ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ರಷ್ಯಾವು ಜಗತ್ತಿಗೆ ಮೂರನೇ ಅತಿದೊಡ್ಡ ತೈಲ ಪೂರೈಕೆದಾರ ದೇಶವೆಂಬುದನ್ನು ನಾವು ಮರೆಯುವಂತಿಲ್ಲ. ಇದರಿಂದ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಮುಖವಾಗಿ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಭಾರತದಲ್ಲಿ ದುಬಾರಿಯಾಗಬಹುದಾದ ವಸ್ತುಗಳ ಪಟ್ಟಿ ಹೀಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ಇಂಡಿಯಾ ಟುಡೇ ವರದಿಯ ಪ್ರಕಾರ, ಭಾರತದ ಒಟ್ಟು ಆಮದುಗಳಲ್ಲಿ ಶೇ. 25ರಷ್ಟು ಪಾಲನ್ನು ತೈಲ ಹೊಂದಿದೆ. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 98 ರೂ.ಗಿಂತ ಹೆಚ್ಚು ಮಾರಾಟವಾಗುತ್ತಿದೆ. ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈಗ, ಪ್ರತಿ ಬ್ಯಾರೆಲ್‌ನ ಬೆಲೆ ಏರಿಕೆಯೊಂದಿಗೆ, ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಬಹುದು.

ಗೋಧಿ ಬೆಲೆ: ಭಾರತವು ಗೋಧಿಯ ಅತಿದೊಡ್ಡ ಗ್ರಾಹಕರಲ್ಲಿ ಒಂದಾಗಿದೆ ಮತ್ತು ರಷ್ಯಾವು ವಿಶ್ವಕ್ಕೆ ಧಾನ್ಯದ ಅತಿದೊಡ್ಡ ರಫ್ತುದಾರನಾಗಿದೆ. ಅಷ್ಟೇ ಅಲ್ಲ, ಉಕ್ರೇನ್ ಗೋಧಿಯ ರಫ್ತುದಾರರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಪ್ಪು ಸಮುದ್ರದ ಪ್ರದೇಶದಿಂದ ಗರಿಷ್ಠ ಗೋಧಿ ಪೂರೈಕೆ ನಡೆಯುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರತದಲ್ಲಿ ಗೋಧಿ ಬೆಲೆ ಕೂಡ ಶೀಘ್ರದಲ್ಲೇ ಹೆಚ್ಚಾಗಬಹುದು.

ಲೋಹಗಳ ಬೆಲೆ: ರಷ್ಯಾ ಪಲ್ಲಾಡಿಯಂನ ಅತಿದೊಡ್ಡ ರಫ್ತುದಾರನಾಗಿದೆ. ಇದು ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ಬಳಸುವ ಲೋಹವಾಗಿದೆ. ಇದೀಗ ಹಲವಾರು ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಘೋಷಿಸಿರುವುದರಿಂದ ಪಲ್ಲಾಡಿಯಂ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಎಲ್​ಪಿಜಿ, ಸೀಮೆ ಎಣ್ಣೆ ಬೆಲೆ: ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಎಲ್​ಪಿಜಿಯಂತಹ ದೇಶೀಯ ಅಡುಗೆ ಇಂಧನಗಳ ಬೆಲೆ ಕೂಡ ಹೆಚ್ಚಾಗಬಹುದು. ಹಾಗೇ, ಸೀಮೆಎಣ್ಣೆಯ ಬೆಲೆಯ ಮೇಲೂ ಪರಿಣಾಮ ಬೀರಬಹುದು. LPG ಮತ್ತು ಸೀಮೆಎಣ್ಣೆ ಎರಡನ್ನೂ ಗ್ರಾಮೀಣ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಅವುಗಳ ಬೆಲೆಗಳ ಏರಿಕೆಯು ಕೆಳ ಮತ್ತು ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Russia-Ukraine Crisis: ಕಾಯಬೇಡಿ, ತಕ್ಷಣ ವಾಪಾಸ್ ಬನ್ನಿ; ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಸೂಚನೆ

Russia-Ukraine Crisis: ಉಕ್ರೇನ್ ಗಡಿಯಲ್ಲಿ ರಷ್ಯನ್ ಮಿಲಿಟರಿ ಕಾರ್ಯಾಚರಣೆ ಅಂತ್ಯ; ಸೇನಾ ಪಡೆಯನ್ನು ಹಿಂಪಡೆದ ರಷ್ಯಾ

Published On - 5:08 pm, Wed, 23 February 22