AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ಸನಾತನ ಯಾತ್ರೆ ಮೇಲೆ ದುಷ್ಕರ್ಮಿಗಳಿಂದ ದಾಳಿ, ಧಾರ್ಮಿಕ ಧ್ವಜ ಹರಿದು ಗಲಾಟೆ

ಮುಂಬೈನಲ್ಲಿ ನಡೆದ ಸನಾತನ ಮೆರವಣಿಗೆ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ಧ್ವಜವನ್ನು ಹರಿದುಹಾಕಿರುವ ಘಟನೆ ನಡೆದಿದೆ. ಅಯೋಧ್ಯೆಯಲ್ಲಿ ಇಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ಭಕ್ತರು ಸನಾತನ ಮೆರವಣಿಗೆ ನಡೆಸುತ್ತಿದ್ದರು.

ಮುಂಬೈನಲ್ಲಿ ಸನಾತನ ಯಾತ್ರೆ ಮೇಲೆ ದುಷ್ಕರ್ಮಿಗಳಿಂದ ದಾಳಿ, ಧಾರ್ಮಿಕ ಧ್ವಜ ಹರಿದು ಗಲಾಟೆ
ಮುಂಬೈImage Credit source: Hindusthan Post
ನಯನಾ ರಾಜೀವ್
|

Updated on: Jan 22, 2024 | 11:26 AM

Share

ಮುಂಬೈನಲ್ಲಿ ನಡೆದ ಸನಾತನ ಮೆರವಣಿಗೆ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ಧ್ವಜವನ್ನು ಹರಿದುಹಾಕಿರುವ ಘಟನೆ ನಡೆದಿದೆ. ಅಯೋಧ್ಯೆಯಲ್ಲಿ ಇಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ಭಕ್ತರು ಸನಾತನ ಮೆರವಣಿಗೆ ನಡೆಸುತ್ತಿದ್ದಾರೆ.

ಮುಂಬೈನ ಭಾಯಂದರ್‌ನಲ್ಲಿ ಸನಾತನ ಧರ್ಮ ಯಾತ್ರೆ ಹೊರಡುವಾಗ ಗಲಾಟೆ ನಡೆದಿತ್ತು. ತಮ್ಮ ಕಾರಿನಲ್ಲಿ ರಾಮ ಮತ್ತು ಹನುಮಂತನ ಧ್ವಜಗಳೊಂದಿಗೆ ಸಾಗುತ್ತಿದ್ದ ಜನರು ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಮಯದಲ್ಲಿ ದೊಣ್ಣೆಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ಕಾರುಗಳ ಮೇಲೆ ದಾಳಿ ನಡೆಸಿದ್ದಾರೆ.

ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ, ದಾಳಿ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಯಾತ್ರೆಯಲ್ಲಿ ಭಾಗವಹಿಸಿದ ಮಹಿಳೆಯರನ್ನೂ ಬಿಡದೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: Ram Mandir Inauguration: ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ರಾಮಭಕ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ಸನಾತನ ಯಾತ್ರೆ ನಡೆಸುತ್ತಿರುವ ಜನರು ಧಾರ್ಮಿಕ ಧ್ವಜವನ್ನು ಹಿಡಿದು ಶಾಂತಿಯುತವಾಗಿ ಸಾಗುತ್ತಿದ್ದರು ಎಂದು ಹೇಳುತ್ತಾರೆ. ಮೀರಾ-ಭಾಯಂದರ್ ಮೂಲಕ ಹಾದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನಿರ್ದಿಷ್ಟ ಸಮುದಾಯದ ಕೆಲವರು ಯಾತ್ರೆಯಲ್ಲಿ ಪ್ರಯಾಣಿಸುತ್ತಿದ್ದ ಕಾರುಗಳ ಮುಂದೆ ನಿಂತರು. ಅವರು ಕಾರುಗಳ ಮೇಲೆ ದಾಳಿ ಮಾಡಿದ್ದರು.

ಸಣ್ಣ ವಿಷಯಕ್ಕೆ ಜಗಳವಾಗಿದೆ, ಇದನ್ನು ಹೊರತುಪಡಿಸಿ ಯಾವುದೇ ದೊಡ್ಡ ಸಮಸ್ಯೆ ಇಲ್ಲಿ ಉದ್ಭವಿಸಲಿಲ್ಲ. ಜನರು ವದಂತಿಗಳಿಗೆ ಗಮನ ಕೊಡಬೇಡಿ ಎಂದು ಅವರು ವಿನಂತಿಸಿದ್ದಾರೆ ಮತ್ತು ಘಟನೆಗೆ ಸಂಬಂಧಿಸಿದಂತೆ ಯಾವುದೇ ಕೋಮುಗಲಭೆ ವರದಿಯಾಗಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

ಈ ಬಗ್ಗೆ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ಆಧಾರದ ಮೇಲೆ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಲು ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.

ಪೊಲೀಸರು ಎಲ್ಲೆಡೆ ನಿಗಾ ಇರಿಸಿದ್ದಾರೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಂಡಿದೆ. ಇಂದು, ಪ್ರಾಣ ಪ್ರತಿಷ್ಠೆಯ ನಂತರ, ರಾಮ ಭಕ್ತರಿಗಾಗಿ ದೇವಾಲಯವನ್ನು ತೆರೆಯಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ