ಪೂರ್ವ ಲಡಾಖ್‌ನ ಪಾಂಗಾಂಗ್ ತ್ಸೋ (Pangong Tso lake) ಸರೋವರದ ಬಳಿ ಚೀನಾ (China) ಈ ವರ್ಷದ ಆರಂಭದಲ್ಲಿ ನಿರ್ಮಿಸಿದ ಸೇತುವೆಯ ಪಕ್ಕದಲ್ಲೇ ಎರಡನೇ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ (External Affairs Ministry) ಶುಕ್ರವಾರ ಹೇಳಿದೆ. ನಿರ್ಮಾಣ ನಡೆಯುತ್ತಿರುವ ಪ್ರದೇಶವು ಕಾನೂನುಬಾಹಿರವಾಗಿ ಸ್ವಾಧೀನ ಪಡೆಸಿದ್ದು ಎಂದು ಸಚಿವಾಲಯವು ಹೇಳಿದೆ. ಚೀನಾದ ಕಾನೂನುಬಾಹಿರ ವಶಪಡಿಸಿಕೊಳ್ಳುವಿಕೆಯನ್ನು ಅಥವಾ ಅಂತಹ ನಿರ್ಮಾಣ ಚಟುವಟಿಕೆಗಳನ್ನು ಭಾರತ ಸ್ವೀಕರಿಸಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಸರ್ಕಾರವು “ಭಾರತದ ಭದ್ರತೆಯ ಮೇಲೆ ಪ್ರಭಾವ ಬೀರುವ ಎಲ್ಲಾ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇರಿಸುತ್ತದೆ. ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಉಲ್ಲೇಖಿಸಲಾದ ಸೇತುವೆಯು ಚೀನಾವು ಭಾರತದ ಗಡಿ ರೇಖೆಯ ಉದ್ದಕ್ಕೂ ಇರುವ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಎರಡನೇ ರಚನೆಯಾಗಿದೆ. ಚೀನಾ ಸೇನೆ ಮತ್ತು ಶಸ್ತ್ರಸಜ್ಜಿತ ವಾಹನಗಳ ಸುಗಮ ಸಂಚಾರಕ್ಕಾಗಿ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಎರಡನೇ ಸೇತುವೆ ನಿರ್ಮಿಸುತ್ತಿರುವುದನ್ನು ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ. ಚೀನಾ ತನ್ನ ಹಿಂದಿನ ಸೇತುವೆಯ ಜೊತೆಗೆ ಪಾಂಗಾಗ್ ಸರೋವರದ ಮೇಲೆ ಸೇತುವೆಯನ್ನು ನಿರ್ಮಿಸುತ್ತಿರುವ ವರದಿಗಳನ್ನು ನಾವು ನೋಡಿದ್ದೇವೆ. ಈ ಎರಡೂ ಸೇತುವೆಗಳು 1960 ರ ದಶಕದಿಂದಲೂ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿವೆ. ನಮ್ಮ ಭೂಪ್ರದೇಶದ ಇಂತಹ ಕಾನೂನುಬಾಹಿರ ವಶಪಡಿಸಿಕೊಳ್ಳುವಿಕೆಯನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ ಅಥವಾ ಅಂತಹ ನಿರ್ಮಾಣ ಚಟುವಟಿಕೆಗಳನ್ನು ನಾವು ಸ್ವೀಕರಿಸಿಲ್ಲ ಎಂದು ಬಾಗ್ಚಿ ಹೇಳಿದ್ದಾರೆ.
#WATCH | We have seen reports on this bridge or a second bridge… we are monitoring the situation. Of course, we always felt it was occupied…Talks on with the Chinese side: MEA spox Arindam Bagchi on reports of another bridge at Pangong Lake pic.twitter.com/h3LcE0astU
ಇದನ್ನೂ ಓದಿ— ANI (@ANI) May 19, 2022
“ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದೆ. ಇತರ ದೇಶಗಳು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ”
ರಾಷ್ಟ್ರದ ಭದ್ರತಾ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ. ಸರ್ಕಾರವು ವಿಶೇಷವಾಗಿ 2014 ರಿಂದ ರಸ್ತೆಗಳು, ಸೇತುವೆಗಳು ಇತ್ಯಾದಿಗಳ ನಿರ್ಮಾಣ ಸೇರಿದಂತೆ ಗಡಿ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ವೇಗಗೊಳಿಸಿದೆ. ಭಾರತದ ಆಯಕಟ್ಟಿನ ಮತ್ತು ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಮಾತ್ರವಲ್ಲದೆ ಈ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ರಚಿಸುವ ಉದ್ದೇಶಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಬಾಗ್ಚಿ ಹೇಳಿದ್ದಾರೆ.