2018ರ ಅತ್ಯಾಚಾರ ಪ್ರಕರಣ; ಕ್ರಿಶ್ಚಿಯನ್ ಪಾದ್ರಿ ಬಜಿಂದರ್ ಸಿಂಗ್ ಅಪರಾಧಿ ಎಂದು ಕೋರ್ಟ್ ತೀರ್ಪು
2018ರ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಕ್ರಿಶ್ಚಿಯನ್ ಪಾದ್ರಿ ಬಜಿಂದರ್ ಸಿಂಗ್ ದೋಷಿ ಎಂದು ಮೊಹಾಲಿ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಏಪ್ರಿಲ್ 1ರಂದು ಶಿಕ್ಷೆಯನ್ನು ಪ್ರಕಟಿಸಲಿದೆ. 2018 ರ ಜಿರಾಕ್‌ಪುರ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿವಾದಾತ್ಮಕ ಪಾದ್ರಿ ಬಜಿಂದರ್ ಸಿಂಗ್ ಅವರನ್ನು ದೋಷಿ ಎಂದು ಮೊಹಾಲಿ ಪೋಕ್ಸೊ ನ್ಯಾಯಾಲಯವು ತೀರ್ಪು ನೀಡಿದೆ. ನ್ಯಾಯಾಲಯವು ಏಪ್ರಿಲ್ 1ರಂದು ಅವರ ಶಿಕ್ಷೆಯನ್ನು ಪ್ರಕಟಿಸಲಿದೆ. 2018ರಲ್ಲಿ ಲಂಡನ್‌ಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲ್ಪಟ್ಟ ಬಜಿಂದರ್ ಸಿಂಗ್ ವಿರುದ್ಧ ಹಲವಾರು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.

ನವದೆಹಲಿ, ಮಾರ್ಚ್ 28: 2018ರ ಜಿರಾಕ್‌ಪುರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಕ್ರಿಶ್ಚಿಯನ್ ಪಾದ್ರಿ ಬಜಿಂದರ್ ಸಿಂಗ್ (Bajinder Singh) ಅವರನ್ನು ದೋಷಿ ಎಂದು ಮೊಹಾಲಿಯ ವಿಶೇಷ ಪೋಕ್ಸೊ ನ್ಯಾಯಾಲಯವು ತೀರ್ಪು ನೀಡಿದೆ. ಏಪ್ರಿಲ್ 1ರಂದು ನ್ಯಾಯಾಲಯದ ಮುಂದೆ ಬಜಿಂದರ್ ಸಿಂಗ್ ಹಾಜರಾದರು. ಬಜಿಂದರ್ ಸಿಂಗ್ ಶುಕ್ರವಾರ ಇತರ 6 ಆರೋಪಿಗಳೊಂದಿಗೆ ನ್ಯಾಯಾಲಯದ ಮುಂದೆ ಹಾಜರಾದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 5 ಸಹ-ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.
ಸ್ವಯಂ ಘೋಷಿತ ದೇವಮಾನವ ಪಾದ್ರಿ ಮತ್ತು ಪಂಜಾಬ್ ಪ್ರವಾದಿ ಬಜಿಂದರ್ ಸಿಂಗ್ 2018ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಪಂಜಾಬ್‌ನ ಮೊಹಾಲಿಯ ನ್ಯಾಯಾಲಯವು ಪಾದ್ರಿಯನ್ನು ಲೈಂಗಿಕ ದುರುಪಯೋಗದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿತು. ಮಾರ್ಚ್ 19ರಂದು ಪಾದ್ರಿ ಬಜಿಂದರ್ ಸಿಂಗ್ ಸೇರಿದಂತೆ 6 ಆರೋಪಿಗಳು 2018ರಲ್ಲಿ ಪಂಜಾಬ್‌ನ ಜಿರಾಕ್‌ಪುರದ ಮಹಿಳೆಯೊಬ್ಬರು ಹೂಡಿದ್ದ ಲೈಂಗಿಕ ಕಿರುಕುಳ ಆರೋಪದ ವಿಚಾರಣೆಗಾಗಿ ಮೊಹಾಲಿಯ ನ್ಯಾಯಾಲಯಕ್ಕೆ ಹಾಜರಾದರು.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಅಪಹರಿಸಿ ಸ್ಮಶಾನಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ
ಈ ಪ್ರಕರಣವು 2018ರಲ್ಲಿ ಜಿರಾಕ್‌ಪುರದ ಮಹಿಳೆಯೊಬ್ಬರು ಬಜೀಂದರ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಲಂಡನ್‌ಗೆ ವಿಮಾನ ಹತ್ತಲು ಯತ್ನಿಸುತ್ತಿದ್ದಾಗ ಅವರನ್ನು ಜುಲೈ 2018ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಜಿರಾಕ್‌ಪುರ ಪೊಲೀಸರು ಪವಾಡಗಳ ಮೂಲಕ ಕಾಯಿಲೆಗಳನ್ನು ಗುಣಪಡಿಸುವುದಾಗಿ ಹೇಳಿಕೊಂಡ ಬಜಿಂದರ್ ಸಿಂಗ್ ಮತ್ತು ಇತರ 6 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇತರ ಆರೋಪಿಗಳಲ್ಲಿ ಅಕ್ಬರ್ ಭಟ್ಟಿ, ರಾಜೇಶ್ ಚೌಧರಿ, ಸುಚಾ ಸಿಂಗ್, ಜತಿಂದರ್ ಕುಮಾರ್, ಸಿತಾರ್ ಅಲಿ ಮತ್ತು ಸಂದೀಪ್ ಅಲಿಯಾಸ್ ಪೆಹ್ಲ್ವಾನ್ ಸೇರಿದ್ದಾರೆ.
ಇದನ್ನೂ ಓದಿ: ಅತ್ಯಾಚಾರವೆಸಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಂದು ಮತ್ತದೇ ಬಾಲಕಿಯ ಅಪಹರಿಸಿದ ವ್ಯಕ್ತಿ
ಚಂಡೀಗಢದ ಸೆಕ್ಟರ್ 63ರಲ್ಲಿರುವ ತನ್ನ ನಿವಾಸದಲ್ಲಿ ಬಜಿಂದರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಳು. ನಂತರ ಈ ಘಟನೆಯನ್ನು ಬೇರೆಯವರಿಗೆ ಹೇಳಿದರೆ ಅಥವಾ ಅವರ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸಿದರೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಆಕೆ ಆರೋಪಿಸಿದ್ದರು. ಆದರೆ ಆ ವರ್ಷದ ಕೊನೆಯಲ್ಲಿ ಅವರಿಗೆ ಜಾಮೀನು ನೀಡಲಾಯಿತು. ಸ್ವಘೋಷಿತ ದೇವಮಾನವ ಲಂಡನ್‌ಗೆ ವಿಮಾನ ಹತ್ತುವಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ