ಶೌಚ ಗುಂಡಿಗೆ ಬಿದ್ದು 8 ವರ್ಷದ ಬಾಲಕ ಸೇರಿ ಮೂವರು ಸಾವು, ಪೊಲೀಸರಿಂದ ವಿಷಯ ಮುಚ್ಚಿಟ್ಟ ಗ್ರಾಮಸ್ಥರು
ಚಂಡೀಗಡ: ಶೌಚ ಗುಂಡಿಗೆ ಬಿದ್ದು 8 ವರ್ಷದ ಬಾಲಕನೂ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಜಿಲ್ಲೆಯ ಬಿಚ್ಚೋರ್ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಗಳದಲ್ಲಿ ಆಡುತ್ತಿದ್ದ 8 ವರ್ಷದ ಮಗು ಶೌಚ ಗುಂಡಿಯ ಬಳಿಗೆ ಅಕಸ್ಮಾತ್ ಆಗಿ ಹೋಗಿತ್ತು. ಇದ್ದಕ್ಕಿದ್ದಂತೆ ಗುಂಡಿಯಲ್ಲಿ ಬಿದ್ದ ಮಗುವನ್ನು ಕಾಪಾಡಲು ಮಗುವಿನ ತಂದೆ ಮತ್ತು ಮತ್ತೊಬ್ಬ ವ್ಯಕ್ತಿ ಗುಂಡಿಗೆ ಇಳಿದರು. ಈ ವೇಳೆ ಆ ಮೂರೂ ಜನರು ಗುಂಡಿಯಲ್ಲಿ […]
ಚಂಡೀಗಡ: ಶೌಚ ಗುಂಡಿಗೆ ಬಿದ್ದು 8 ವರ್ಷದ ಬಾಲಕನೂ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಜಿಲ್ಲೆಯ ಬಿಚ್ಚೋರ್ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಗಳದಲ್ಲಿ ಆಡುತ್ತಿದ್ದ 8 ವರ್ಷದ ಮಗು ಶೌಚ ಗುಂಡಿಯ ಬಳಿಗೆ ಅಕಸ್ಮಾತ್ ಆಗಿ ಹೋಗಿತ್ತು. ಇದ್ದಕ್ಕಿದ್ದಂತೆ ಗುಂಡಿಯಲ್ಲಿ ಬಿದ್ದ ಮಗುವನ್ನು ಕಾಪಾಡಲು ಮಗುವಿನ ತಂದೆ ಮತ್ತು ಮತ್ತೊಬ್ಬ ವ್ಯಕ್ತಿ ಗುಂಡಿಗೆ ಇಳಿದರು. ಈ ವೇಳೆ ಆ ಮೂರೂ ಜನರು ಗುಂಡಿಯಲ್ಲಿ ಉಸಿರುಗಟ್ಟಿ ಮೃತಪಟ್ಟರು.
ಬಿಚ್ಚೋರ್ ಗ್ರಾಮದ ಗ್ರಾಮಸ್ಥರಾದ ದೀನೂ ಅವರು ತಮ್ಮ ಮನೆಯ ಹೊರಗೆ 20 ಅಡಿ ಆಳದ ಶೌಚ ಗುಂಡಿ ನಿರ್ಮಿಸಿದ್ದರು. ಗುಂಡಿಯ ಮೇಲೆ ಕಲ್ಲು ಚಪ್ಪಡಿಯೊಂದನ್ನು ಹಾಸಲಾಗಿತ್ತು. ಆರಿಜ್ ಅವರ ಮೊಮ್ಮಗು ಆಡುತ್ತಾ ಆ ಚಪ್ಪಡಿಯ ಮೇಲೆ ನಿಂತು ಕುಣಿದಾಗ ಚಪ್ಪಡಿ ಮುರಿದು ಮಗು ಕೆಳಗೆ ಬಿತ್ತು. ಬಾಲಕ ಗುಂಡಿಗೆ ಬಿದ್ದಿದ್ದು ಗಮನಿಸಿದ ಅವನ ತಂದೆ ಸಿರಜು (30) ಮತ್ತು ದೊಡ್ಡಪ್ಪ ಸಲಮು (35) ಗುಂಡಿಗೆ ಇಳಿದು, ಮಗುವನ್ನು ಕಾಪಾಡಲು ಯತ್ನಿಸಿದರು. ಆದರೆ ಅವರೂ ಅಲ್ಲಿಯೇ ಮೃತಪಟ್ಟರು.
ಗುಂಡಿಯಿಂದ ಯಾರೊಬ್ಬರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದ ಇತರ ಸದಸ್ಯರು ಗಾಬರಿಯಿಂದ ಹುಡುಕಾಡಲು ಆರಂಭಿಸಿದರು. ಈ ವೇಳೆ ಮೂವರೂ ಮೃತಪಟ್ಟಿರುವುದು ತಿಳಿದು ಬಂತು. ವಿಷಯ ಹೀಗಿದ್ದರೂ ಕುಟುಂಬದ ಯಾರೊಬ್ಬರೂ ಪೊಲೀಸರಿಗೆ ದೂರು ನೀಡಿಲ್ಲ. ಗ್ರಾಮಸ್ಥರೂ ಪೊಲೀಸರಿಗೆ ಮಾಹಿತಿ ಕೊಟ್ಟಿಲ್ಲ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಎಸ್ಪಿ ಶಂಶೇರ್ ಸಿಂಗ್, ‘ಇಂಥ ಆಘಾತಕಾರಿ ಘಟನೆಯನ್ನು ಗ್ರಾಮಸ್ಥರು ಪೊಲೀಸರಿಂದ ದೂರ ಇಟ್ಟಿದ್ದಾರೆ. ಮೃತರ ಪಾರ್ಥಿವ ಶರೀರಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ದುರಾದೃಷ್ಟವಶಾತ್ ಈ ಘಟನೆ ನಡೆದಿದೆ. ಇದರಲ್ಲಿ ಯಾರ ತಪ್ಪೂ ಇಲ್ಲ. ನಾವು ಯಾರ ವಿರುದ್ಧವೂ ದೂರು ನೀಡುವುದಿಲ್ಲ ಎನ್ನುವುದು ಗ್ರಾಮಸ್ಥರ ವಿವರಣೆ. ನಾವು ಗ್ರಾಮಕ್ಕೆ ಭೇಟಿ ನೀಡಿದ್ದು, ಮುಂದೇನು ಮಾಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Thu, 2 June 22