AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ

Sharad Pawar, Supriya Sule Meets PM Modi: ಎನ್‌ಸಿಪಿ-ಎನ್‌ಡಿಎ ವಿಲೀನ ವದಂತಿಗಳ ನಡುವೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಸಂಸತ್ತಿನಲ್ಲಿ ವಿಪಕ್ಷಗಳ ಪ್ರತಿಭಟನೆ ಮಧ್ಯೆ ನಡೆದ ಈ ಸಭೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮತ್ತು ಮಹಾರಾಷ್ಟ್ರ ರಾಜಕೀಯದ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಭೇಟಿ ಮುಂಬರುವ ದಿನಗಳಲ್ಲಿ ಪ್ರಮುಖ ರಾಜಕೀಯ ಬದಲಾವಣೆಗೆ ಮುನ್ಸೂಚನೆಯಾಗಿದೆ.

ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Jul 22, 2026 | 12:36 PM

Share

ನವದೆಹಲಿ, ಜುಲೈ 22: ಎನ್​ಸಿಪಿ ಎನ್​ಡಿಎ ಜತೆ ವಿಲೀನವಾಗಲಿದೆ ಎನ್ನುವ ಅಂತೆ ಕಂತೆ ಹರಿದಾಡುತ್ತಿರುವ ಹೊತ್ತಿನಲ್ಲೇ ಶರದ್ ಪವಾರ್(Sharad Pawar) ಹಾಗೂ ಸುಪ್ರಿಯಾ ಸುಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಸಂಸತ್ತಿನಲ್ಲಿ ನೀಟ್ ಅಕ್ರಮ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ.

ಎನ್‌ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಹಾಗೂ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಸಂಸತ್ ಭವನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಸಭೆಯ ವೇಳೆ ಪ್ರಧಾನಿ ಮೋದಿ ಹಾಗೂ ಶರದ್ ಪವಾರ್ ಅತ್ಯಂತ ಆತ್ಮೀಯವಾಗಿ ನಗುಮುಖದಿಂದ ಮಾತುಕತೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.

ಭೇಟಿಗೆ ಕಾರಣವೇನು?

ಕ್ಷೇತ್ರ ಪುನರ್ವಿಂಗಡಣೆ ಮಸೂದೆ

ಕೇಂದ್ರ ಸರ್ಕಾರವು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆ’ಯನ್ನು ತರಲು ಯೋಜಿಸುತ್ತಿದ್ದು, ಇದನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3rd) ಭಾರಿ ಬಹುಮತದ ಅಗತ್ಯವಿದೆ. ಲೋಕಸಭೆಯಲ್ಲಿ ಶರದ್ ಪವಾರ್ ಬಣದ 8 ಸಂಸದರು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ 3 ರಹಸ್ಯ ಸಭೆಗಳು, ಎನ್‌ಸಿಪಿಯಲ್ಲಿ ಮತ್ತೊಂದು ಒಡಕು

ಶೇ. 50 ರಷ್ಟು ಸೀಟು ಹೆಚ್ಚಳದ ಷರತ್ತು

ಮಸೂದೆಯಲ್ಲಿ ಶೇಕಡಾ 50 ರಷ್ಟು ಸಂಸತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸರ್ಕಾರ ಲಿಖಿತ ಭರವಸೆ ನೀಡಿದರೆ ಬೆಂಬಲ ನೀಡುವ ಸುಳಿವನ್ನು ಎನ್‌ಸಿಪಿ ನೀಡಿದೆ. ನಿಮ್ಮ ನಿಲುವನ್ನು ಕಾಗದದ ಮೇಲೆ ಸ್ಪಷ್ಟಪಡಿಸಿ, ನಂತರ ಚರ್ಚಿಸೋಣ ಎಂದು ಸುಪ್ರಿಯಾ ಸುಳೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಮಹಾರಾಷ್ಟ್ರ ರಾಜಕೀಯ ಮತ್ತು ಎನ್‌ಸಿಪಿ ಪುನರ್ ಏಕೀಕರಣದ ವದಂತಿ

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಶರದ್ ಪವಾರ್ ಬಣದ ನಡುವೆ ಮತ್ತೆ ಒಂದಾಗುವ ಚರ್ಚೆಗಳು ಮಹಾರಾಷ್ಟ್ರದಲ್ಲಿ ತೆರೆಮರೆಯಲ್ಲಿ ನಡೆಯುತ್ತಿವೆ. ಶರದ್ ಪವಾರ್ ಅವರ ಬಣ ಎನ್‌ಡಿಎ (NDA) ಮೈತ್ರಿಕೂಟ ಸೇರಲಿದೆ ಎಂಬ ವದಂತಿಗಳೂ ಇವೆ.

ಶರದ್ ಪವಾರ್ ಅಥವಾ ಅವರ ನಾಯಕರನ್ನು ವೈಯಕ್ತಿಕವಾಗಿ ಎನ್‌ಡಿಎ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿಗೆ ಆಸಕ್ತಿಯಿಲ್ಲ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಅವರ ಎರಡೂ ಎನ್‌ಸಿಪಿ ಬಣಗಳು ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಸಂಪೂರ್ಣವಾಗಿ ಒಂದಾದರೆ ಮಾತ್ರ ಎನ್‌ಡಿಎ ಜೊತೆಗಿನ ನಿಕಟ ಮೈತ್ರಿ ಬಗ್ಗೆ ಪರಿಗಣಿಸಲಾಗುವುದು.

ಸಂಸತ್ತಿನಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಸರಣಿ ಹೋರಾಟ ನಡೆಸುತ್ತಿರುವ ಮಧ್ಯೆಯೇ, ವಿಪಕ್ಷಗಳ ಪ್ರಮುಖ ರೂವಾರಿಯಾದ ಶರದ್ ಪವಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವುದು ಮುಂಬರುವ ದಿನಗಳಲ್ಲಿ ಭಾರಿ ರಾಜಕೀಯ ಬದಲಾವಣೆಯ ಮುನ್ಸೂಚನೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್