AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಶರದ್ ಪವಾರ್ ಮೌನ: ಎನ್‌ಡಿಎ ಸೇರ್ಪಡೆ ಕುರಿತು ಹಿರಿಯ ಮುತ್ಸದ್ದಿ ಮಾರ್ಮಿಕ ನುಡಿ

ಮಹಾರಾಷ್ಟ್ರ ರಾಜಕೀಯದಲ್ಲಿ ಎನ್‌ಸಿಪಿ ಎನ್‌ಡಿಎ ಸೇರ್ಪಡೆ ಕುರಿತು ಶರದ್ ಪವಾರ್ ಅವರ ಮೌನ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ, ಎರಡೂ ಎನ್‌ಸಿಪಿ ಬಣಗಳ ವಿಲೀನಕ್ಕೆ ಷರತ್ತು ವಿಧಿಸಿದ್ದು, ಕೇಂದ್ರ ಸಚಿವ ಸ್ಥಾನಗಳ ಆಮಿಷ ಒಡ್ಡಿದೆ. ಆದರೆ, ಅಜಿತ್ ಪವಾರ್ ನಿಧನದಿಂದಾಗಿ ವಿಲೀನದ ಮಾತುಕತೆ ಮುಗಿದ ಅಧ್ಯಾಯ ಎಂದು ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ. ಸದ್ಯ ಮಹಾರಾಷ್ಟ್ರದ ರಾಜಕೀಯ ಭವಿಷ್ಯ ಅನಿಶ್ಚಿತವಾಗಿದೆ.

ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಶರದ್ ಪವಾರ್ ಮೌನ: ಎನ್‌ಡಿಎ ಸೇರ್ಪಡೆ ಕುರಿತು ಹಿರಿಯ ಮುತ್ಸದ್ದಿ ಮಾರ್ಮಿಕ ನುಡಿ
ಶರದ್ ಪವಾರ್
ನಯನಾ ರಾಜೀವ್
|

Updated on: Jul 18, 2026 | 1:31 PM

Share

ಮುಂಬೈ,ಜುಲೈ 18: ಮಹಾರಾಷ್ಟ್ರ ರಾಜಕೀಯದ ಚದುರಂಗದಾಟ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಶರದ್ ಪವಾರ್(Sharad Pawar) ನೇತೃತ್ವದ ಎನ್‌ಸಿಪಿ ಬಣವು ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟವನ್ನು ಸೇರಲಿದೆಯೇ ಎಂಬ ಊಹಾಪೋಹಗಳು ದೇಶಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿರುವ ಬೆನ್ನಲ್ಲೇ, ಖುದ್ದಾಗಿ ಎನ್‌ಸಿಪಿ (SP) ಮುಖ್ಯಸ್ಥ ಶರದ್ ಪವಾರ್ ಈ ಬಗ್ಗೆ ನಿಗೂಢ ಮೌನ ವಹಿಸಿದ್ದಾರೆ. ಮಾಧ್ಯಮಗಳು ಈ ಕುರಿತು ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿದ ಅವರು, ಈ ಸಮಯದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ಮಾರ್ಮಿಕವಾಗಿ ಹೇಳಿ ಜಾರಿಕೊಂಡಿದ್ದಾರೆ.

ಬಿಜೆಪಿಯ ಬಿಗಿ ಪಟ್ಟು: ಎರಡೂ ಬಣಗಳು ಒಂದಾದರೆ ಮಾತ್ರ ಎನ್‌ಡಿಎಗೆ ಎಂಟ್ರಿ ತೆರೆಮರೆಯಲ್ಲಿ ನಡೆಯುತ್ತಿರುವ ಈ ರಾಜಕೀಯ ಸಂಧಾನಗಳ ನಡುವೆ ಕೇಂದ್ರ ಆಡಳಿತ ಪಕ್ಷವಾದ ಬಿಜೆಪಿ ಅತ್ಯಂತ ಚಾಣಾಕ್ಷ ಹೆಜ್ಜೆ ಇಟ್ಟಿದೆ.

ಷರತ್ತುಬದ್ಧ ಆಫರ್: ಶರದ್ ಪವಾರ್ ಬಣವನ್ನು ಪ್ರತ್ಯೇಕವಾಗಿ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಬದಲಿಗೆ, ಸದ್ಯ ಸರ್ಕಾರದ ಭಾಗವಾಗಿರುವ ಸುನೇತ್ರಾ ಪವಾರ್ ಬಣ ಮತ್ತು ಶರದ್ ಪವಾರ್ ಬಣ ಎರಡೂ ಒಂದಾಗಿ ‘ಮಹಾ ವಿಲೀನ’ ಮಾಡಿಕೊಂಡರೆ ಮಾತ್ರ ಎನ್‌ಡಿಎ ಒಳಗೆ ಪ್ರವೇಶ ನೀಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕತ್ವ ಸ್ಪಷ್ಟ ಸಂದೇಶ ರವಾನಿಸಿದೆ.

ಕೇಂದ್ರ ಸಚಿವ ಸಂಪುಟದ ಆಮಿಷ: ಒಂದು ವೇಳೆ ಎರಡೂ ಬಣಗಳು ಒಂದೇ ಪಕ್ಷವಾಗಿ ವಿಲೀನಗೊಂಡರೆ, ಅಧಿಕಾರ ಸಮತೋಲನಕ್ಕಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಎರಡು ಪ್ರಮುಖ ಸಚಿವ ಸ್ಥಾನಗಳನ್ನು ನೀಡುವುದಾಗಿ ಬಿಜೆಪಿ ಪ್ರಸ್ತಾಪಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಆ ಚರ್ಚೆ ಈಗ ಮುಗಿದ ಅಧ್ಯಾಯ ಎಂದ ಸುಪ್ರಿಯಾ ಸುಳೆ ಇನ್ನೊಂದೆಡೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಸೋನಮ್ ವಾಂಗ್ಚುಕ್ ಅವರನ್ನು ಭೇಟಿ ಮಾಡಲು ಬಂದಿದ್ದ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು ಮಾಧ್ಯಮಗಳ ಎದುರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಮತ್ತಷ್ಟು ಓದಿ: ಶರದ್ ಪವಾರ್ ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್: ಮರಾಠಿ ನಟಿ ಕೇತಕಿ ಚಿತಾಲೆ ಬಂಧನ

‘‘ಅಜಿತ್ ಈಗ ನಮ್ಮೊಂದಿಗಿಲ್ಲ. ಹಾಗಾಗಿ ಅವರ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲಾ ವಿಲೀನದ ಚರ್ಚೆಗಳು ಈಗ ಸಂಪೂರ್ಣವಾಗಿ ನಿಂತುಹೋಗಿವೆ. ಎರಡೂ ಬಣಗಳು ಒಂದಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಬೇಕೆಂಬುದು ನನ್ನ ಸಹೋದರನ ಕೊನೆಯ ಆಸೆಯಾಗಿತ್ತು. ಅವರು ಬದುಕಿದ್ದಾಗಲೂ, ಅವರ ನಿಧನದ ನಂತರವೂ ಪಕ್ಷ ಒಂದಾಗಲಿ ಎಂಬ ಪ್ರಾಮಾಣಿಕ ಭಾವನೆ ನಮ್ಮಲ್ಲಿತ್ತು. ಆದರೆ ದುರದೃಷ್ಟವಶಾತ್ ಎದುರು ಬಣದಿಂದ ಅಂತಹ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ನಾವು ಈ ಅಧ್ಯಾಯವನ್ನು ಸಂಪೂರ್ಣವಾಗಿ ಮುಚ್ಚಿದ್ದೇವೆ.’’ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ನಿಧನರಾದ ದಿನವೇ ನಮ್ಮ ಕೆಲವು ಹಿರಿಯ ನಾಯಕರು ಒಗ್ಗಟ್ಟಿನ ಮಾತು ಆಡಿದ್ದರೂ, ಮರುದಿನವೇ ಸುನೇತ್ರಾ ಪವಾರ್ ಬಣದವರು ಅಂಥದ್ದೇನೂ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದು ನಮಗೆ ತೀವ್ರ ದುಃಖ ತಂದಿದೆ ಎಂದು ಸುಪ್ರಿಯಾ ಸುಳೆ ಬೇಸರ ವ್ಯಕ್ತಪಡಿಸಿದ್ದಾರೆ.

2023 ರಲ್ಲಿ ಶರದ್ ಪವಾರ್ ವಿರುದ್ಧ ಸೋದರಳಿಯ ಅಜಿತ್ ಪವಾರ್ ಬಂಡಾಯವೆದ್ದು, ಬಹುಸಂಖ್ಯಾತ ಶಾಸಕರೊಂದಿಗೆ ಬಿಜೆಪಿ-ಶಿವಸೇನೆ ಸರ್ಕಾರ ಸೇರಿದ್ದರು. ಚುನಾವಣಾ ಆಯೋಗವು ಅಜಿತ್ ಬಣಕ್ಕೆ ಅಧಿಕೃತ ‘ಗಡಿಯಾರ’ ಚಿಹ್ನೆ ನೀಡಿತ್ತು. ಶರದ್ ಪವಾರ್ ಬಣ ‘ಎನ್‌ಸಿಪಿ-ಶರದ್ಚಂದ್ರ ಪವಾರ್’ ಹೆಸರಿನಲ್ಲಿ ಉಳಿದುಕೊಂಡಿತ್ತು.

ಇತ್ತೀಚೆಗೆ ಹೆಲಿಕಾಪ್ಟರ್ ಅವಘಡದಲ್ಲಿ ಅಜಿತ್ ಪವಾರ್ ಹಠಾತ್ ನಿಧನರಾದ ನಂತರ ಪಕ್ಷದ ನಾಯಕತ್ವ ಅವರ ಪತ್ನಿ ಸುನೇತ್ರಾ ಪವಾರ್ ಕೈ ಸೇರಿದೆ. ಅಜಿತ್ ಪವಾರ್ ಬದುಕಿದ್ದಾಗಲೇ ಚಿಕ್ಕಪ್ಪ-ಸೋದರಳಿಯ ಮತ್ತೆ ಒಂದಾಗಲು ಪುಣೆ ಮುನ್ಸಿಪಲ್ ಚುನಾವಣೆಯಲ್ಲಿ ರಹಸ್ಯ ಮೈತ್ರಿ ಮಾಡಿಕೊಂಡಿದ್ದರು. ಮಾತುಕತೆ ಬಹುದೂರ ಸಾಗಿತ್ತು. ಆದರೆ, ಅಜಿತ್ ದಾದಾ ಅವರ ನಿಧನ ಇಡೀ ರಾಜಕೀಯ ಸಮೀಕರಣವನ್ನು ಬದಲಿಸಿದ್ದು, ಸದ್ಯಕ್ಕೆ ಮಹಾರಾಷ್ಟ್ರ ರಾಜಕೀಯದ ಭವಿಷ್ಯ ಅನಿಶ್ಚಿತತೆಯಲ್ಲೇ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್