AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ ಶೇ. 2 ಅಗ್ರ ವಿಜ್ಞಾನಿಗಳ ಸಾಲಿನಲ್ಲಿ ಪತಂಜಲಿ ಆಚಾರ್ಯ ಬಾಲಕೃಷ್ಣ; ಇದು ಭಾರತ ಹಾಗೂ ಆಯುರ್ವೇದಕ್ಕೆ ಸಿಕ್ಕ ಮಾನ್ಯತೆ

Acharya Balkrishna of Patanjali is among 2pc top scientists in the world: ಆಚಾರ್ಯ ಬಾಲಕೃಷ್ಣ ಅವರು ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಸಾಲಿನಲ್ಲಿ ಗುರುತಾಗಿದ್ದಾರೆ. ಸ್ಟಾನ್​ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ತಯಾರಿಸಿರುವ ಪಟ್ಟಿಯಲ್ಲಿ ಆಚಾರ್ಯರು ಶೇ. 2 ಅಗ್ರಮಾನ್ಯ ವಿಜ್ಞಾನಿ ಎನಿಸಿದ್ದಾರೆ. ಅಪ್ಪಟ ವೈಜ್ಞಾನಿಕ ವಿಧಾನಗಳಿಂದ ಸಂಶೋಧನೆ ನಡೆಸಿ ಆಯುರ್ವೇದ ವಿಜ್ಞಾನದ ಮಹತ್ವವನ್ನು ಸಿದ್ಧಪಡಿಸುವ ಕೆಲಸವನ್ನು ಆಚಾರ್ಯರು ಮಾಡುತ್ತಿದ್ದಾರೆ.

ಜಗತ್ತಿನ ಶೇ. 2 ಅಗ್ರ ವಿಜ್ಞಾನಿಗಳ ಸಾಲಿನಲ್ಲಿ ಪತಂಜಲಿ ಆಚಾರ್ಯ ಬಾಲಕೃಷ್ಣ; ಇದು ಭಾರತ ಹಾಗೂ ಆಯುರ್ವೇದಕ್ಕೆ ಸಿಕ್ಕ ಮಾನ್ಯತೆ
ಆಚಾರ್ಯ ಬಾಲಕೃಷ್ಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2025 | 12:51 PM

Share

ನವದೆಹಲಿ, ಸೆಪ್ಟೆಂಬರ್ 24: ಪತಂಜಲಿ ಸಹ-ಸಂಸ್ಥಾಪಕರಾದ ಆಚಾರ್ಯ ಬಾಲಕೃಷ್ಣ (Acharya Balkrishna) ಅವರು ವಿಶ್ವದ ಶೇ. 2 ಅಗ್ರಮಾನ್ಯ ವಿಜ್ಞಾನಿಗಳ ಸಾಲಿಗೆ ಸೇರಿದ್ದಾರೆ. ಎಲ್​ಸೆವಿಯರ್ (Elsevier) ಸಹಯೋಗದಲ್ಲಿ ಅಮೆರಿಕದ ಸ್ಟಾನ್​ಫೋರ್ಡ್ ಯೂನಿವರ್ಸಿಟಿಯ (Stanford University) ರಿಸರ್ಚ್ ಗ್ರೂಪ್​ವೊಂದು, ಜಾಗತಿಕವಾಗಿರುವ ಅಗ್ರಮಾನ್ಯ ವಿಜ್ಞಾನಿಗಳು ಹಾಗೂ ಸಂಶೋಧಕರ ಪಟ್ಟಿಯೊಂದನ್ನು ಮಾಡಿದೆ. ಇದರಲ್ಲಿ ಆಚಾರ್ಯ ಬಾಲಕೃಷ್ಣ ಅವರ ಹೆಸರೂ ಸೇರಿದೆ.

ಆಚಾರ್ಯ ಬಾಲಕೃಷ್ಣ ಅವರಿಗೆ ಸಿಕ್ಕಿರುವ ಈ ಮಾನ್ಯತೆಯು ಪತಂಜಲಿ ಸಂಸ್ಥೆಗೆ ಮಾತ್ರವಲ್ಲ, ಆಯುರ್ವೇದ ವಿಜ್ಞಾನಕ್ಕೆ ಸಿಕ್ಕ ಒಂದು ಗೌರವ ಹಾಗೂ ದೇಶಕ್ಕೂ ಸಿಕ್ಕ ಒಂದು ಹೆಮ್ಮೆ ಎಂದು ಭಾವಿಸಲಾಗಿದೆ.

ಆಚಾರ್ಯ ಬಾಲಕೃಷ್ಣ ಅವರು ಭಾರತದ ಪ್ರಾಚೀನ ಆಯುರ್ವೇದ ತತ್ವದೊಂದಿಗೆ ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಯನ್ನು ಮೇಳೈಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ನಾವೀನ್ಯತೆಯನ್ನೊಳಗೊಂಡಿರುವ ಅವರ ಸಂಶೋಧನಾ ಕಾರ್ಯಕ್ಕೆ ಜಾಗತಿಕವಾಗಿ ವಿಜ್ಞಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಗಿಡಮೂಲಿಕೆಗಳು ಹಾಗೂ ಸಾಂಪ್ರದಾಯಿಕ ಔಷಧಗಳ ಉಪಯುಕ್ತತೆ ಬಗ್ಗೆ ಅನ್ವೇಷಣೆ ಮಾಡಲು ಇತರ ವಿಜ್ಞಾನಿಗಳಿಗೆ ಆಚಾರ್ಯ ಬಾಲಕೃಷ್ಣರು ಪ್ರೇರಣೆ ನೀಡಿದ್ದಾರೆ.

ಇದನ್ನೂ ಓದಿ: ಬುದ್ಧಿ ಹರಿತಗೊಳಿಸಲು ಬೇಕಾದ ಯೋಗ, ಪ್ರಾಣಾಯಾಮ ಮತ್ತು ಆಹಾರ; ಬಾಬಾ ರಾಮದೇವ್ ಸಲಹೆ ಕೇಳಿ

ವಿವಿಧ ಅಂತರರಾಷ್ಟ್ರೀಯ ಜರ್ನಲ್​ಗಳಲ್ಲಿ ಆಚಾರ್ಯ ಬಾಲಕೃಷ್ಣ ಅವರು ಬರೆದ 300ಕ್ಕೂ ಹೆಚ್ಚು ರಿಸರ್ಚ್ ಆರ್ಟಿಕಲ್​ಗಳು ಮುದ್ರಣ ಕಂಡಿವೆ. ಅವರ ಮಾರ್ಗದರ್ಶನದಲ್ಲಿ ಪತಂಜಲಿ ಸಂಸ್ಥೆ ನೂರಕ್ಕೂ ಹೆಚ್ಚು ಸಾಕ್ಷ್ಯ ಆಧಾರಿತ ಆಯುರ್ವೇದ ಔಷಧಗಳನ್ನು ಅಭಿವೃದ್ಧಿಪಡಿಸಿದೆ. ಆಲೋಪಥಿ ಔಷಧ ವಿಧಾನಕ್ಕೆ ಪತಂಜಲಿ ಪರ್ಯಾಯವಾದ ನೈಸರ್ಗಿಕ ವಿಧಾನದ ಔಷಧಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ.

ಆಚಾರ್ಯರು ಸಂಶೋಧನೆ ಮಾತ್ರವಲ್ಲ, ಯೋಗ ಮತ್ತು ಆಯುರ್ವೇದದ ಬಗ್ಗೆ 120ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆಯುರ್ವೇದ ವಿಜ್ಞಾನದ ಮೌಲ್ಯವನ್ನು ಉಳಿಸಿ, ಬೆಳೆಸಲು ಅವರಿಗಿರುವ ಬದ್ಧತೆ ನಿಜಕ್ಕೂ ಶ್ಲಾಘನೀಯ ಎಂಬುದು ಹಲವರ ಅನಿಸಿಕೆ.

ಇದನ್ನೂ ಓದಿ: ಹೊಟ್ಟೆಯ ಸಮಸ್ಯೆಗಳಿಗೆ ಉಪಯುಕ್ತವಾದ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ

ಹರ್ಬಲ್ ಎನ್​ಸೈಕ್ಲೋಪೀಡಿಯಾದ ರೂವಾರಿ ಆಚಾರ್ಯರು

ಆಚಾರ್ಯ ಬಾಲಕೃಷ್ಣ ಅವರು ಸಮಗ್ರವಾದ ಹರ್ಬಲ್ ಎನ್​ಸೈಕ್ಲೋಪಿಡಿಯಾ ರೂಪಿಸಿದ್ದಾರೆ. ಇದರಲ್ಲಿ ನೈಸರ್ಗಿಕ ಗಿಡಮೂಲಿಕೆಗಳ ಬಗ್ಗೆ ಪೂರ್ಣ ಮಾಹಿತಿ ಇದೆ. ಸಂಶೋಧಕರಿಗೆ ಇದು ಬಹಳ ಅಮೂಲ್ಯವಾದ ಮಾಹಿತಿ ಕಣಜದಂತಾಗಿದೆ. ಅಂತಾರಾಷ್ಟ್ರೀಯ ಸಮುದಾಯವೂ ಕೂಡ ಈ ಕಾರ್ಯವನ್ನು ಸ್ಲಾಘಿಸಿದೆ.

ಇದಲ್ಲದೇ ಉತ್ತರಾಖಂಡ್​ನ ಮಾಲಗಾನ್​ನಲ್ಲಿ ಹರ್ಬಲ್ ವರ್ಲ್ಡ್ ಸೆಂಟರ್ ಮೂಲಕ ಆಚಾರ್ಯರು ವಿಶ್ವಾದ್ಯಂತ ಇರುವ ವಿವಿಧ ಸಾಂಪ್ರದಾಯಿಕ ವೈದ್ಯಕೀಯ ಆಚರಣೆಗಳನ್ನು ಪ್ರಚುರಗೊಳಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ