ಖನಿಜ ಗಣಿಗಾರಿಕೆ ಪ್ರವೇಶಿಸುವ ಸ್ಟಾರ್ಟ್ ಅಪ್ ಗಳು ಭವಿಷ್ಯದ ಆಶಾಕಿರಣ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ

Pralhad Joshi: ಮಹಾರಾಷ್ಟ್ರದ ಮುಂಬೈನಲ್ಲಿರುವ IITಯಲ್ಲಿಂದು ಪ್ರಪ್ರಥಮ ಮೈನಿಂಗ್ ಸ್ಟಾರ್ಟ್ಅಪ್ ಶೃಂಗಸಭೆಯನ್ನುದ್ದೇಶಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾತನಾಡಿದರು.

ಖನಿಜ ಗಣಿಗಾರಿಕೆ ಪ್ರವೇಶಿಸುವ ಸ್ಟಾರ್ಟ್ ಅಪ್ ಗಳು ಭವಿಷ್ಯದ ಆಶಾಕಿರಣ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ
ಖನಿಜ ಗಣಿಗಾರಿಕೆ ಪ್ರವೇಶಿಸುವ ಸ್ಟಾರ್ಟ್ ಅಪ್ ಗಳು ಭವಿಷ್ಯದ ಆಶಾಕಿರಣ
ಸಾಧು ಶ್ರೀನಾಥ್​

Updated on: May 29, 2023 | 5:26 PM

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ IITಯಲ್ಲಿಂದು ಪ್ರಪ್ರಥಮ ಮೈನಿಂಗ್ ಸ್ಟಾರ್ಟ್ಅಪ್ ಶೃಂಗಸಭೆಯನ್ನುದ್ದೇಶಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಮಾತನಾಡಿದರು. ಪರಿಶೋಧನೆ, ಆಟೊಮೇಷನ್, ಡ್ರೋನ್ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಪ್ರಮುಖ ತ‌ಂತ್ರಜ್ಞಾನದ ಕಂಪನಿಗಳು ಈ ಮೈನಿಂಗ್ (mineral mining) ಸ್ಟಾರ್ಟ್ಅಪ್ (Startups) ಶೃಂಗಸಭೆಯಲ್ಲಿ ಭಾಗವಹಿಸಿದ್ದರಿಂದಾಗಿ ಈ ಪ್ರಥಮ ಶೃಂಗಸಭೆಯ ಉದ್ದೇಶ ಸಾರ್ಥಕವಾದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವದ ಬ್ಯಾಂಕ್ ನಿಂದ ಹಿಡಿದು ವಿಶ್ವದ ಕಾರ್ಖಾನೆಯಾಗುವವರೆಗೆ, ಪ್ರಧಾನಿ ನರೇಂದ್ರ ಮೋದಿಯವರ ‌ನೇತೃತ್ವದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ ಎಂದ ಅವರು, ಈ ಶೃಂಗಸಭೆಯಲ್ಲಿ, ಖನಿಜ ಗಣಿಗಾರಿಕೆ ಕ್ಷೇತ್ರವನ್ನು ಪ್ರವೇಶಿಸುವ ಸ್ಟಾರ್ಟ್‌ಅಪ್‌ಗಳು ಯಾವ ರೀತಿ ಎಲ್ಲರಿಗೂ ಉಪಯುಕ್ತ ಎಂಬುದರ ಬಗ್ಗೆಯೂ ಬೆಳಕು ಚೆಲ್ಲಿದರು.

Also Read: ರಾಜ್ಯಕ್ಕೆ ಬರುವ ಕೇಂದ್ರದ ಹಣ ಕಡಿಮೆ ಎಂಬ ಆರೋಪಕ್ಕೆ ಅಂಕಿ-ಸಂಖ್ಯೆಯೊಂದಿಗೆ ತಿರುಗೇಟು ಕೊಟ್ಟ ಸಚಿವ ಜೋಶಿ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಿಂದ ನಾವು ನಿರಂತರವಾಗಿ ಭೂವಿಜ್ಞಾನ ಪರಿಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ ಎಂದ ಅವರು, ಹೀಗೆ ಪರಿಶೋಧನೆಯಲ್ಲಿರುವ ಪ್ರದೇಶದ ವಿಸ್ತೀರ್ಣವೀಗ ಸುಮಾರು 2 ಲಕ್ಷ ಚದರ ಮೀಟರ್‌ಗೆ ತಲುಪಿದೆ. ಇದರಿಂದಾಗಿ ಶೇಕಡಾ 40% ಕ್ಕಿಂತ ಹೆಚ್ಚು ಅನ್ವೇಷಣೆಯನ್ನು ಈವರೆಗೆ ಸಾಧಿಸಲಾಗಿದೆ ಎಂದರು.

ಈ ಪ್ರಪ್ರಥಮ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಜೊತೆ ಮಹಾರಾಷ್ಟ್ರದ ಸಚಿವ ದಾದಾಜಿ ಭೂಸೆಯವರು ಉಪಸ್ಥಿತರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Mon, 29 May 23

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us