ಅಕ್ರಮ ಕಟ್ಟಡದ ಮೇಲೊಂದು ಮಂದಿರ, ಅದರ ಮುಂದೆ ಮೋದಿ ಪ್ರತಿಮೆ; ವ್ಯಾಪಾರಿಯ ಉಪಾಯಕ್ಕೆ ಅಧಿಕಾರಿಗಳೇ ಸುಸ್ತು

ಗುಜರಾತಿನಲ್ಲಿ ಅಕ್ರಮ ಕಟ್ಟಡವೊಂದನ್ನು ನಿರ್ಮಿಸಿರುವ ವ್ಯಾಪಾರಿಯೊಬ್ಬರು ಭರೂಚ್-ಅಂಕಲೇಶ್ವರ ನಗರಾಭಿವೃದ್ಧಿ ಪ್ರಾಧಿಕಾರ ಅದನ್ನು ಕೆಡವದೇ ಇರಲು ಉಪಾಯ ಮಾಡಿದ್ದಾರೆ. ಅದೇನೆಂದರೆ ಆ ಕಟ್ಟದ ಮೇಲೆ ರಾಮನಿಗೆ ಮಂದಿರವೊಂದನ್ನು ನಿರ್ಮಿಸಿ, ಮೋದಿ,ಯೋಗಿ ಆದಿತ್ಯನಾಥ್ ಹೋಲುವ ಪ್ರತಿಮೆಗಳನ್ನು ಕಟ್ಟಡಕ್ಕೆ ಕಾವಲಾಗಿ ನಿಲ್ಲಿಸಿದ್ದಾರೆ.

ಅಕ್ರಮ ಕಟ್ಟಡದ ಮೇಲೊಂದು ಮಂದಿರ, ಅದರ ಮುಂದೆ ಮೋದಿ ಪ್ರತಿಮೆ; ವ್ಯಾಪಾರಿಯ ಉಪಾಯಕ್ಕೆ ಅಧಿಕಾರಿಗಳೇ ಸುಸ್ತು
ಭರೂಚ್​​ನಲ್ಲಿರುವ ಅಕ್ರಮ ಕಟ್ಟಡ
Follow us
ರಶ್ಮಿ ಕಲ್ಲಕಟ್ಟ
|

Updated on: Jan 31, 2024 | 6:08 PM

ಭರೂಚ್ ಜನವರಿ 31: ಗುಜರಾತಿನಲ್ಲಿ (Gujarat) ಗುಜರಿ ವಸ್ತು ವ್ಯಾಪಾರಿಯೊಬ್ಬರ ಅನಧಿಕೃತ ಕಟ್ಟಡವೊಂದನ್ನು ನೆಲಸಮಗೊಳಿಸುವುದಾಗಿ ಭರೂಚ್-ಅಂಕಲೇಶ್ವರ ನಗರಾಭಿವೃದ್ಧಿ ಪ್ರಾಧಿಕಾರದ (BAUDA) ಅಧಿಕಾರಿಗಳನ್ನು ಹೇಳಿದ್ದರು. ಕಟ್ಟಡವನ್ನು ಅಧಿಕಾರಿಗಳು ನೆಲಸಮಗೊಳಿಸದೇ ಇರಲು ಈ ವ್ಯಾಪಾರಿ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ಕಳೆದ ವರ್ಷ ಖರೀದಿಸಿದ ಕಟ್ಟಡದಲ್ಲಿ ಹೆಚ್ಚುವರಿ ಮಹಡಿ ನಿರ್ಮಿಸಿದ ಮೋಹನ್‌ಲಾಲ್ ಗುಪ್ತಾ, ಈಗ ರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳಿರುವ “ದೇವಾಲಯ” ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಮೇಲ್ಛಾವಣಿ ದೇಗುಲದ ಹೊರಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೋಲುವ ಪ್ರತಿಮೆಗಳನ್ನು ಕಾವಲಾಗಿ ಇರಿಸಲಾಗಿದೆ.

ಉತ್ತರ ಪ್ರದೇಶ ಮೂಲದ ಗುಪ್ತಾ ಅವರು ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಜನವರಿ 22 ರಂದು ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೊಂದಿಕೆಯಾಗುವಂತೆ ಉದ್ದೇಶಿತ ಅಕ್ರಮ ಸ್ಕ್ರ್ಯಾಪ್ ಗೋಡೌನ್ ಮೇಲಿನ ದೇವಾಲಯವನ್ನು ಉದ್ಘಾಟಿಸಿದ್ದಾರೆ.

ಅಂಕಲೇಶ್ವರದ ಗಡ್ಖೋಲ್ ಗ್ರಾಮದ ಜನತಾನಗರ ಸೊಸೈಟಿಯ ನಿವಾಸಿ ಮನ್ಸುಖ್ ರಖಾಸಿಯಾ ಅವರ ದೂರಿನ ಮೇರೆಗೆ ಬೌಡಾ ಅಧಿಕಾರಿಗಳು ಕಟ್ಟಡವನ್ನು ಪರಿಶೀಲಿಸಿದ ನಂತರ ಸ್ಕ್ರ್ಯಾಪ್ ವ್ಯಾಪಾರಿಯ ಈ ಉಪಾಯ ಗಮನಕ್ಕೆ ಬಂದಿದೆ ಮೇಲ್ಛಾವಣಿ ದೇವಸ್ಥಾನದ ಬಗ್ಗೆ ಹೊಸ ದೂರುಗಳ ನಂತರ, ಬೌಡಾ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಗುಪ್ತಾ ಅವರು ಪೂರ್ವಾನುಮತಿ ಇಲ್ಲದೆ ಹೆಚ್ಚುವರಿ ಮಹಡಿಯನ್ನು ನಿರ್ಮಿಸಿದ್ದಾರೆ ಎಂದು ಕಂಡುಹಿಡಿದಿದ್ದಾರೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಲು ಗುಪ್ತಾ ಅವರಿಗೆ ಬೌಡಾ ಅಧಿಕಾರಿಗಳು ಏಳು ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ, ಗುಪ್ತಾ ಅವರ ಪ್ರಕಾರ, ಕಳೆದ ವರ್ಷ ಆಸ್ತಿಯನ್ನು ಖರೀದಿಸಿದ್ದ ಜಿತೇಂದ್ರ ಓಜಾ ಅವರು ಈಗಾಗಲೇ 2012 ರಲ್ಲಿ ಗಡ್ಖೋಲ್ ಗ್ರಾಮ ಪಂಚಾಯಿತಿಯಿಂದ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು.

ಅಸೂಯೆಯಿಂದ ಜನರು ಈ ಕಟ್ಟಡ ವಿರುದ್ಧ ದೂರು ನೀಡಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ. “ನಾನು ಕೆಲವು ಭಾಗಗಳನ್ನು ಕೆಡವುವ ಮೂಲಕ ಆಸ್ತಿಗೆ ಬದಲಾವಣೆ ಮಾಡಿದ್ದೇನೆ. ನನ್ನ ಮೇಲೆ ಅಸೂಯೆ ಇರುವ ಕೆಲವರು ಕಟ್ಟಡವನ್ನು ಕೆಡವುವಂತೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಬಳಿಯೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರು ನಮ್ಮ ರಿದ್ಧಿ ಸಿದ್ಧಿ ಸಮಾಜದಿಂದ ದೂರವಿರುವ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದಾರೆ.  ಜುಲೈ 11, 2023 ರಂದು ಸಲ್ಲಿಸಿದ ರಾಖಾಸಿಯಾ ಅವರ ಮೊದಲ ದೂರಿನ ಪ್ರಕಾರ, ಗ್ರಾಮದ ಮೂರು ವಸತಿ ಸಂಘಗಳಲ್ಲಿ ಗುಪ್ತಾ ಸೇರಿದಂತೆ ಆಪಾದಿತ ಅಕ್ರಮ ನಿರ್ಮಾಣಗಳಿಗೆ “ಯಾವುದೇ ಪೂರ್ವಾನುಮತಿ ತೆಗೆದುಕೊಂಡಿಲ್ಲ”.

ರಿದ್ಧಿ ಸಿದ್ಧಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಗುಪ್ತಾ ಅವರ ಎರಡು ಅಂತಸ್ತಿನ ಕಟ್ಟಡದ ಹೊರತಾಗಿ, ಅರುಣೋದಯನಗರ ಸೊಸೈಟಿಯಲ್ಲಿ ರಾಮ್‌ಜಿಕುಮಾರ್ ಮೌರ್ಯ ನಿರ್ಮಿಸಿದ ಮತ್ತು ಇನ್ನೊಂದು ನಿರವ್‌ಕುಂಜ್ ಸೊಸೈಟಿಯಲ್ಲಿ ರವಿ ವಿಶ್ವಕರ್ಮ ನಿರ್ಮಿಸಿದ ಇನ್ನೆರಡು ಕಟ್ಟಡಗಳನ್ನು ದೂರುದಾರರು ಹೆಸರಿಸಿದ್ದಾರೆ.

ಇದನ್ನೂ ಓದಿ: Budget session 2024: ಇಂದು ಮುರ್ಮು ಭಾಷಣ, ನಾಳೆ ಸೀತಾರಾಮನ್ ಬಜೆಟ್ ಮಂಡನೆ, ಇದು ನಾರಿ ಶಕ್ತಿಯ ಹಬ್ಬ: ಪಿಎಂ ಮೋದಿ

ದೂರು ಕ್ರಮ ಕೈಗೊಳ್ಳಲು ವಿಫಲವಾದ ನಂತರ, ಅವರು ಡಿಸೆಂಬರ್ 1 ರಂದು ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಅವರಿಗೆ ಮತ್ತೊಂದು ಅರ್ಜಿ ಸಲ್ಲಿಸಿದರು. ಇದರ ನಂತರ, ಬೌಡಾ ಅಧಿಕಾರಿಗಳು ಡಿಸೆಂಬರ್ 21 ರಂದು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದರು. ಈ ವರ್ಷದ ಜನವರಿ 1 ರಂದು, ರಾಖಾಸಿಯಾ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಮೂರು ನಿರ್ಮಾಣಗಳ ಬಗ್ಗೆ ವಿವರವಾಗಿ ಪತ್ರ ಬರೆದಿದ್ದು, ನಿರ್ಲಕ್ಷ್ಯ ವಹಿಸಿರುವ ಬೌಡಾ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳವಾರ, ಉದ್ಘಾಟನಾ ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೊಗಳೊಂದಿಗೆ ರಾಖಾಸಿಯಾ ಅವರನ್ನು ಮತ್ತೆ ಸಂಪರ್ಕಿಸಿದ ನಂತರ ಬೌಡಾ ತಂಡವು ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿತು, ಇದಕ್ಕಾಗಿ ಗ್ರಾಮದ ಸರಪಂಚ್ ಮತ್ತು ನಿವಾಸಿಗಳಿಗೆ ಆಹ್ವಾನವನ್ನು ನೀಡಲಾಯಿತು.

ಗಡ್ಖೋಲ್ ಗ್ರಾಮದ ಸರಪಂಚ್ ಮಂಜುಳಾಬೆನ್ ಪಟೇಲ್ ಅವರು ಉದ್ಘಾಟನೆಗೆ ಹಾಜರಾಗಲಿಲ್ಲ, ಆದರೆ “ಹೆಚ್ಚಿನ ಸಂಖ್ಯೆಯ ಜನರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು” ಎಂದು ತಿಳಿದು ಬಂದಿದೆ. ಈ ಘಟನೆಯ ಫೋಟೋಗಳು ಮತ್ತು ವಿಡಿಯೊಗಳು ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಕಟ್ಟಡದ ಅಗತ್ಯ ದಾಖಲೆಗಳು ಮತ್ತು ಇತರ ವಿವರಗಳನ್ನು ಸಲ್ಲಿಸಲು ಗುಪ್ತಾ ಅವರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಪ್ರಾಥಮಿಕವಾಗಿ, ಇಡೀ ಕಟ್ಟಡವನ್ನು ನವೀಕರಿಸಲಾಗಿಲ್ಲ (ಹೇಳುವಂತೆ) ಆದರೆ ಹೊಸದಾಗಿ ನಿರ್ಮಿಸಲಾಗಿದೆ ಎಂದು ಕಂಡುಬಂದಿದೆ. ಗುಪ್ತಾ ಅವರು ರಿದ್ಧಿ ಸಿದ್ಧಿ ಸೊಸೈಟಿಯ ಹೊಸ ಕಟ್ಟಡದ ಎದುರಿನ ಮನೆಯಲ್ಲಿದ್ದಾರೆ. ಇದೊಂದು ರೆಸಿಡೆನ್ಶಿಯಲ್ ಸೊಸೈಟಿಯಾಗಿದ್ದು, ಈ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಾರೆ . ಅವರು ಎರಡು ಶಟರ್‌ಗಳನ್ನು ಸಹ ಮಾಡಿದ್ದಾರೆ. ಏಳು ದಿನಗಳ ನಂತರ, ಗುಪ್ತಾ ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬೌಡಾ ಇನ್‌ಚಾರ್ಜ್ ಟೌನ್ ಪ್ಲಾನರ್ ನಿತಿನ್ ಪಟೇಲ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಇದಲ್ಲದೆ, ಓಝಾ ಅವರಿಂದ ಕಟ್ಟಡವನ್ನು  ಖರೀದಿಸಿದ ನಂತರ ಗುಪ್ತಾ ಅವರು ಜನವರಿ 21, 2023 ರಂದು ತಮ್ಮ ಪತ್ನಿ ಕಿರಣ್ ಹೆಸರಿನಲ್ಲಿ ಸೇಲ್ ಡೀಡ್ ದಾಖಲೆಗಳನ್ನು ಮಾಡಿದ್ದಾರೆ. ಸೇಲ್ ಡೀಡ್ ಡಾಕ್ಯುಮೆಂಟ್ ನೆಲಮಹಡಿಯನ್ನು ಮಾತ್ರ ತೋರಿಸುತ್ತದೆ, ಆದರೆ ನಮ್ಮ ತಂಡವು ಮಂಗಳವಾರ ಹೊಸದಾಗಿ ನಿರ್ಮಿಸಲಾದ ನೆಲ ಮಹಡಿ ಜೊತೆಗೆ ಒಂದು ಮಹಡಿ ಮತ್ತು ಟೆರೇಸ್‌ನೊಂದಿಗೆ ಛಾವಣಿಯ ಮೇಲೆ ದೇವಸ್ಥಾನವನ್ನು ಕಂಡುಹಿಡಿದಿದೆ ಎಂದು ಅವರು ಹೇಳಿದರು. ಸ್ಕ್ರ್ಯಾಪ್ ಗೋಡೌನ್ ಹಿಂದೆ, ತ್ಯಾಜ್ಯ ಗೋಣಿ ಚೀಲಗಳನ್ನು ಇಡಲು ಗುಪ್ತಾ ಸಾಮಾನ್ಯ ತೆರೆದ ಪ್ಲಾಟ್ ಅನ್ನು ಬಳಸುತ್ತಾರೆ ಎಂದು ಅವರು ಹೇಳಿದರು. “ಆದಾಗ್ಯೂ, ಅದರ ಮೇಲೆ ಯಾವುದೇ ನಿರ್ಮಾಣ ಚಟುವಟಿಕೆಯನ್ನು ಮಾಡಲಾಗಿಲ್ಲ” ಎಂದು ಪಟೇಲ್ ಹೇಳಿದರು.

ಆದರೂ ಅಧಿಕಾರಿಗಳು ಗ್ರಾಮದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಖಾಸಿಯಾ ಆರೋಪಿಸಿದ್ದಾರೆ. ನಾವು ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಪತ್ರ ಬರೆದಿದ್ದೇವೆ ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ” ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಪ್ರತಿಮೆಗಳನ್ನು ಹೊಂದಿರುವ ಮೇಲ್ಛಾವಣಿ ದೇವಾಲಯವು ಕಟ್ಟಡ ಕೆಡವದೇ ಇರಲು ಗುಪ್ತಾ ಮಾಡಿದ ಉಪಾಯ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ದೂರುದಾರರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ. ನಾನು ಮೇಲ್ಛಾವಣಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿಜಿ ಅವರ ಪ್ರತಿಮೆಗಳನ್ನು ಸ್ಥಾಪಿಸಿದ್ದೇನೆ. ಮನ್ಸುಖ್ ಮತ್ತು ಇತರರು ಅದನ್ನು ಇಷ್ಟಪಡಲಿಲ್ಲ ಎಂದು ನಾನು ನಂಬುತ್ತೇನೆ. ಅವರು ನನಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಇಂತಹವರಿಂದ ನನ್ನನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ