AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚರ, ಎಚ್ಚರ… ಮರುಸೋಂಕಿಗೆ ಒಳಗಾದರೆ ಅಪಾಯ ಹೆಚ್ಚು!

ಅಧ್ಯಯನದ ಪ್ರಕಾರ ಮರುಸೋಂಕಿಗೆ ಸಿಲುಕುವ ಸಾಧ್ಯತೆ ಆರೋಗ್ಯ ಕಾರ್ಯಕರ್ತರಲ್ಲಿ ಮೂರುಪಟ್ಟು ಅಧಿಕವಾಗಿದ್ದು ಕೊರೊನಾ ಸೋಂಕಿತರೊಂದಿಗೆ ಅತಿ ಹೆಚ್ಚು ಸಂಪರ್ಕದಲ್ಲಿರುವವರಿಗೂ ಅಪಾಯವಿದೆ.

ಎಚ್ಚರ, ಎಚ್ಚರ... ಮರುಸೋಂಕಿಗೆ ಒಳಗಾದರೆ ಅಪಾಯ ಹೆಚ್ಚು!
ಸಾಂದರ್ಭಿಕ ಚಿತ್ರ
Skanda
| Edited By: |

Updated on: Nov 30, 2020 | 11:52 AM

Share

ಗುವಾಹತಿ: ಕೊರೊನಾ ಸೋಂಕಿನ ತೀವ್ರತೆಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹಾಗೂ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಮರುಸೋಂಕು ಹೆಚ್ಚು ಅಪಾಯಕಾರಿ! ಕೊರೊನಾ ಸೋಂಕಿಗೆ ಮೊದಲ ಬಾರಿ ತುತ್ತಾಗುವವರಿಗಿಂತ ಅಧಿಕ ಅಪಾಯ ಮರು ಸೋಂಕಿಗೆ ಒಳಗಾಗುವವರಿಗೆ ಇದೆ ಎಂಬ ಸಂಗತಿ ಈ ಅಧ್ಯಯನದಲ್ಲಿ ಬಯಲಾಗಿದೆ. ವೈದ್ಯಕೀಯವಾಗಿ ಎರಡು ಅಥವಾ ಮೂರನೇ ಬಾರಿ ಸೋಂಕಿಗೆ ತುತ್ತಾಗುವವರನ್ನು ಗುಣಪಡಿಸುವುದು ಸವಾಲಾಗಿದೆ ಎಂದು ತಿಳಿದುಬಂದಿದೆ.

ಈ ಅಧ್ಯಯನವನ್ನು ಗಾಯತ್ರಿ ಗೊಗಾಯ್, ಮೊಂದಿತಾ ಬರ್ಗೋಹೈನ್, ಅನೂಪ್ ದಾಸ್, ಬಿಸ್ವಜ್ಯೋತಿ ಬರ್ಕಕೋಟಿ ಹಾಗೂ ಮಂದಾಕಿನಿ ದಾಸ್ ಎಂಬ ತಜ್ಞರು ನಡೆಸಿದ್ದು ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ ಮರುಸೋಂಕಿಗೆ ಒಳಗಾದವರಿಗೆ ಗುಣವಾಗಲು ಹೆಚ್ಚು ಸಮಯ ಬೇಕು ಎಂಬ ವಿಚಾರ ಗೊತ್ತಾಗಿದೆ.

ಸಂಪರ್ಕದಲ್ಲಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಅಧ್ಯಯನದ ಪ್ರಕಾರ ಮರುಸೋಂಕಿಗೆ ಸಿಲುಕುವ ಸಾಧ್ಯತೆ ಆರೋಗ್ಯ ಕಾರ್ಯಕರ್ತರಲ್ಲಿ ಮೂರುಪಟ್ಟು ಅಧಿಕವಾಗಿದ್ದು ಕೊರೊನಾ ಸೋಂಕಿತರೊಂದಿಗೆ ಅತಿ ಹೆಚ್ಚು ಸಂಪರ್ಕದಲ್ಲಿರುವವರಿಗೂ ಅಪಾಯ ಹೆಚ್ಚಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೊರೊನಾ.. ರಾಜ್ಯದಲ್ಲಿ ಯಾವ ವಯಸ್ಸಿನ ಜನರು ಸೋಂಕಿಗೆ ಹೆಚ್ಚು ಬಲಿಯಾಗಿದ್ದಾರೆ..?

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ