ಪುರಾತನ ಪಾತಕಿ ಮತ್ತೆ ಜೈಲೊಳಕ್ಕೆ ಬತ್ತೀನಿ ಅಂದ್ರೂ, ಪೊಲೀಸ್ರು ಬಿಟ್ಕೊಳ್ಳಲಿಲ್ಲ! ಯಾಕೆ?

ಆ ದಿನಗಳಲ್ಲಿ ಕುಖ್ಯಾತಿಯ ತುದಿಯೇರಿದ್ದ ಗ್ಯಾಂಗ್​ಸ್ಟರ್ ಅವ. ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ಆದ್ರೆ ಪೆರೋಲ್ ಮುಗಿದಿದೆ. ಶರಣಾಗಿ ಒಳಗೆ ಬರುವೆ, ಬಿಟ್ಕೊಳ್ಳಿ ಅಂತಾ ಸೀದಾ ಜೈಲಿನ ಮುಂದೆ ಬಂದು ನಿಂತ. ಆದ್ರೆ ಜೈಲೊಳಕ್ಕೆ ಬತ್ತೀನಿ ಅಂತಾ ಕೈಮುಗಿದು ನಿಂತಿದ್ದ ಆ ಡಾನ್​ನನ್ನು ಪೊಲೀಸರು ಬಿಲ್ಕುಲ್ ಒಳಕ್ಕೆ ಬಿಟ್ಕೊಳ್ಳಲಿಲ್ಲ! ತಳೋಜಾ ಕಾರಾಗೃಹದ ಮುಂದೆ ದೊಡ್ಡ ಹೈಡ್ರಾಮಾನೇ ನಡೆಯಿತು! ಇದೆಲ್ಲ ನಡೆದಿದ್ದು ಮೊನ್ನೆ.. ನವಿ ಮುಂಬೈನಲ್ಲಿರುವ ತಳೋಜಾ ಮಧ್ಯವರ್ತಿ ಕಾರಾಗೃಹದಲ್ಲಿ. ಪುರಾತನ ಪಾತಕಿ ಅರುಣ್ ಗಾವಳಿ ತನ್ನ ವಕೀಲರ […]

ಪುರಾತನ ಪಾತಕಿ ಮತ್ತೆ ಜೈಲೊಳಕ್ಕೆ ಬತ್ತೀನಿ ಅಂದ್ರೂ, ಪೊಲೀಸ್ರು ಬಿಟ್ಕೊಳ್ಳಲಿಲ್ಲ! ಯಾಕೆ?
ಸಾಧು ಶ್ರೀನಾಥ್​ Edited By:

Updated on: May 29, 2020 | 2:53 PM

ಆ ದಿನಗಳಲ್ಲಿ ಕುಖ್ಯಾತಿಯ ತುದಿಯೇರಿದ್ದ ಗ್ಯಾಂಗ್​ಸ್ಟರ್ ಅವ. ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ಆದ್ರೆ ಪೆರೋಲ್ ಮುಗಿದಿದೆ. ಶರಣಾಗಿ ಒಳಗೆ ಬರುವೆ, ಬಿಟ್ಕೊಳ್ಳಿ ಅಂತಾ ಸೀದಾ ಜೈಲಿನ ಮುಂದೆ ಬಂದು ನಿಂತ. ಆದ್ರೆ ಜೈಲೊಳಕ್ಕೆ ಬತ್ತೀನಿ ಅಂತಾ ಕೈಮುಗಿದು ನಿಂತಿದ್ದ ಆ ಡಾನ್​ನನ್ನು ಪೊಲೀಸರು ಬಿಲ್ಕುಲ್ ಒಳಕ್ಕೆ ಬಿಟ್ಕೊಳ್ಳಲಿಲ್ಲ!

ತಳೋಜಾ ಕಾರಾಗೃಹದ ಮುಂದೆ ದೊಡ್ಡ ಹೈಡ್ರಾಮಾನೇ ನಡೆಯಿತು!
ಇದೆಲ್ಲ ನಡೆದಿದ್ದು ಮೊನ್ನೆ.. ನವಿ ಮುಂಬೈನಲ್ಲಿರುವ ತಳೋಜಾ ಮಧ್ಯವರ್ತಿ ಕಾರಾಗೃಹದಲ್ಲಿ. ಪುರಾತನ ಪಾತಕಿ ಅರುಣ್ ಗಾವಳಿ ತನ್ನ ವಕೀಲರ ಜೊತೆ ತಳೋಜಾ ಜೈಲಿಗೆ ಆಗಮಿಸಿದ್ದ. ಆದ್ರೆ ಕೋಟೆ ಕಟ್ಟಿಕೊಂಡ ಜೈಲು ಪೊಲೀಸರು ಆತನನ್ನು ಒಳಕ್ಕೆ ಬರಲೇಬೇಡ ಎಂದು ದುಂಬಾಲುಬಿದ್ದರು. ಬಟ್ ವೈ ಎಂದು ವಕೀಲ ಮೀರ್ ಅಲಿ ಕೇಳಿದ್ದಕ್ಕೆ ಕೊರೊನಾ ರಾಕ್ಷಸನ ಹಾವಳಿ. ಅದಕ್ಕೇ ಗಾವಳಿ ಒಳಕ್ಕೆ ಬರೋದು ಬೇಡ, ವಾಪಸ್​ ಕರಕೊಂಡು ಹೋಗು ಅಂದಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ಗಾವಳಿಯ ಶತ್ರುಗಳೆನಿಸಿರುವ ಅಬುಸಲೇಂ ಮತ್ತು ಅಶ್ವಿನ್ ನಾಯ್ಕ್ ಎಂಬ ಇನ್ನಿಬ್ಬರು ಡಾನ್​ಗಳು ಈಗಾಗಲೇ ತಳೋಜಾ ಕಾರಾಗೃಹದಲ್ಲಿದ್ದಾರೆ. ಹಾಗಾಗಿ ಗಾವಳಿಗೆ ಜೀವ ಬೆದರಿಕೆ ಎದುರಾಗುತ್ತದೆ ಎಂದು ಎಣಿಸಿದ ಪೊಲೀಸರು ಗಾವಳಿಗೆ ಬರುವುದು ಬೇಡ ಎಂದಿರುವುದಾಗಿ ತಿಳಿದುಬಂದಿದೆ.

ಈ ಮಧ್ಯೆ ಬಾಂಬೆ ಹೈಕೋರ್ಟ್​ನ ನಾಗಪುರ ಪೀಠವು ಗಾವಳಿಗೆ ಪೆರೋಲ್ ಅವಧಿಯನ್ನು ಇನ್ನೂ 5 ಕ್ಕೆ ವಿಸ್ತರಿಸುವ ಮೂಲಕ ಪೊಲೀಸರ ಆತಂಕವನ್ನು ದೂರ ಮಾಡಿದೆ. ಅಂಡರ್​ವರ್ಲ್ಡ್​ ಡಾನ್ ಅರುಣ್ ಗಾವಳಿ ಶಿವಸೇನೆಯ ಕಾರ್ಪೊರೆಟರ್​ನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

Published On - 2:39 pm, Fri, 29 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us