ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಗದರಿದ್ದಕ್ಕೆ ಬಾವಿಗೆ ಹಾರಿದ ಬಾಲಕಿ

ಮೊಬೈಲ್(Mobile) ನೋಡುವುದು ಬಿಟ್ಟು ಸ್ನಾನ ಮಾಡು ಎಂದು ಪೋಷಕರು ಗದರಿದ್ದಕ್ಕೆ 17 ವರ್ಷದ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ಆಸಿಫಾಬಾದ್​ನ ಸಂದೀಪ್​ ನಗರದಲ್ಲಿ ನಡೆದಿದೆ. ಸ್ವರ್ಣಲತಾ ಮತ್ತು ಪೋಚಿರಾಮ್ ದಂಪತಿಯ 17 ವರ್ಷದ ಮಗಳು ಸಾತ್ವಿಕಾ ಇಂಟರ್ಮೀಡಿಯೇಟ್ (ಪಿಯುಸಿ) ಮೊದಲ ವರ್ಷ ಮುಗಿಸಿ ದ್ವಿತೀಯ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಬುಧವಾರದಂದು ಸಾತ್ವಿಕಾ ಮನೆಯಲ್ಲಿ ಸ್ನಾನ ಮಾಡದೆ ಗಂಟೆಗಟ್ಟಲೆ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಗದರಿದ್ದಕ್ಕೆ ಬಾವಿಗೆ ಹಾರಿದ ಬಾಲಕಿ
ಬಾಲಕಿ
Image Credit source: Tv9 Telugu

Updated on: May 21, 2026 | 1:16 PM

ಆಸಿಫಾಬಾದ್, ಮೇ 21: ಮೊಬೈಲ್(Mobile) ನೋಡುವುದು ಬಿಟ್ಟು ಸ್ನಾನ ಮಾಡು ಎಂದು ಪೋಷಕರು ಗದರಿದ್ದಕ್ಕೆ 17 ವರ್ಷದ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ಆಸಿಫಾಬಾದ್​ನ ಸಂದೀಪ್​ ನಗರದಲ್ಲಿ ನಡೆದಿದೆ. ಸ್ವರ್ಣಲತಾ ಮತ್ತು ಪೋಚಿರಾಮ್ ದಂಪತಿಯ 17 ವರ್ಷದ ಮಗಳು ಸಾತ್ವಿಕಾ ಇಂಟರ್ಮೀಡಿಯೇಟ್ (ಪಿಯುಸಿ) ಮೊದಲ ವರ್ಷ ಮುಗಿಸಿ ದ್ವಿತೀಯ ವರ್ಷಕ್ಕೆ ಕಾಲಿಟ್ಟಿದ್ದಾಳೆ.

ಬುಧವಾರದಂದು ಸಾತ್ವಿಕಾ ಮನೆಯಲ್ಲಿ ಸ್ನಾನ ಮಾಡದೆ ಗಂಟೆಗಟ್ಟಲೆ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ತಕ್ಷಣ ಹೋಗಿ ಸ್ನಾನ ಮಾಡುವಂತೆ ಗದರಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಮತ್ತು ಕೋಪಗೊಂಡ ಬಾಲಕಿ, ಮನೆಯಿಂದ ಹೊರಗೆ ಓಡಿಹೋಗಿ ಮುಂದಿನ ಬೀದಿಯಲ್ಲಿದ್ದ ಬಾವಿಗೆ ಧುಮುಕಿದ್ದಾಳೆ.

ಜೀವಭಯದಿಂದ ಕಿರುಚಾಟ, ನೆರವಾದ ಕಾಲೋನಿ ನಿವಾಸಿಗಳು
ಕೋಪದಲ್ಲಿ ಬಾವಿಗಂತೂ ಹಾರಿದ ಬಾಲಕಿಗೆ ನೀರಿನಲ್ಲಿ ಮುಳುಗುತ್ತಿದ್ದಂತೆ ಜೀವಭಯ ಶುರುವಾಗಿದೆ. ಆಕೆ ಬಾವಿಯ ನೀರಿನಲ್ಲಿ ಒದ್ದಾಡುತ್ತಾ ಜೋರಾಗಿ ಕಿರುಚಲು ಆರಂಭಿಸಿದ್ದಾಳೆ. ಬಾಲಕಿಯ ಕೂಗು ಕೇಳಿ ಓಡಿಬಂದ ಕಾಲೋನಿ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು?

ಮಾಹಿತಿ ಸಿಗುತ್ತಿದ್ದಂತೆ ಎಸ್‌ಎಚ್‌ಒ (SHO) ಬಾಲಾಜಿ ವರಪ್ರಸಾದ್ ಅವರ ನೇತೃತ್ವದ ಪೊಲೀಸ್ ತಂಡ ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಧಾವಿಸಿತು. ಅಗ್ನಿಶಾಮಕ ಸಿಬ್ಬಂದಿಗಳಾದ ನರೇಶ್, ರಾಮು ಮತ್ತು ಚಾಲಕ ಪ್ರವೀಣ್ ಕುಮಾರ್ ಅವರು ಸಮಯಪ್ರಜ್ಞೆ ಮೆರೆದು ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಬಾಲಕಿಗೆ ಲೈಫ್ ಜಾಕೆಟ್ ಧರಿಸಿ, ಆಕೆಯನ್ನು ಅತ್ಯಂತ ಸುರಕ್ಷಿತವಾಗಿ ಬಾವಿಯಿಂದ ಹೊರಗೆ ತಂದಿದ್ದಾರೆ.

ಸಕಾಲದಲ್ಲಿ ಸ್ಪಂದಿಸಿ ಬಾಲಕಿಯ ಜೀವ ಉಳಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಕಾರ್ಯವನ್ನು ಉನ್ನತ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬಾವಿಗೆ ಹಾರಿದ ರಭಸಕ್ಕೆ ಬಾಲಕಿಯ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟು ಸಣ್ಣ ವಿಷಯಕ್ಕೆ ಪ್ರಾಣ ಕಳೆದುಕೊಳ್ಳಲು ಮುಂದಾದ ಬಾಲಕಿಗೆ ಪೊಲೀಸರು ಬುದ್ಧಿವಾದ ಹೇಳಿ ಕೌನ್ಸೆಲಿಂಗ್ (Counseling) ನಡೆಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:15 pm, Thu, 21 May 26

Loading...
Unable to load recommendations.
Follow Us