ಪ್ರತಿಪಕ್ಷಗಳು ಪ್ರಚೋದಿಸುತ್ತಿರಲಿ, ನೀವು ನಿಮ್ಮ ಮಾತನ್ನು ನಿಯಂತ್ರಣದಲ್ಲಿರಿಸಿ: ಬಿಜೆಪಿ ಸಂಸದರಿಗೆ ಮೋದಿ ಕಿವಿಮಾತು

ಚುನಾವಣೆಯಲ್ಲಿ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಸದರು ಮಾಡಬಹುದಾದ ಕೆಲಸಗಳಿಗೆ ಒತ್ತು ನೀಡಿದ ಪ್ರಧಾನಿ ಮೋದಿ, ಎಲ್ಲರೂ ಸಂಯಮದಿಂದ ವರ್ತಿಸುವಂತೆ ಸೂಚಿಸಿದರು. ಪ್ರತಿಪಕ್ಷಗಳು ಪ್ರಚೋದನೆ ನೀಡುತ್ತವೆ, ಆದರೆ ವಿವಾದಕ್ಕೆ ಅವಕಾಶವಾಗದಂತೆ ನಿಮ್ಮಮಾತುಗಳನ್ನು ನಿಯಂತ್ರಿಸಿ ಎಂದು ಪ್ರಧಾನಿ ಹೇಳಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.

ಪ್ರತಿಪಕ್ಷಗಳು ಪ್ರಚೋದಿಸುತ್ತಿರಲಿ, ನೀವು ನಿಮ್ಮ ಮಾತನ್ನು ನಿಯಂತ್ರಣದಲ್ಲಿರಿಸಿ: ಬಿಜೆಪಿ ಸಂಸದರಿಗೆ ಮೋದಿ ಕಿವಿಮಾತು
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Aug 03, 2023 | 3:37 PM

ದೆಹಲಿ ಆಗಸ್ಟ್ 03: 2024ರ ಚುನಾವಣೆಗೆ ಆಡಳಿತಾರೂಢ (2024 Lok Sabha Election) ಮೈತ್ರಿಕೂಟದ ಸಿದ್ಧತೆಯನ್ನು ಚುರುಕುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂಸದರಿಗೆ ವಿಜಯ ಮಂತ್ರಗಳನ್ನು ನೀಡಿದ್ದು, ವಿಪಕ್ಷಗಳು ಪ್ರಚೋದಿಸುತ್ತಲೇ ಇರಲಿ. ನೀವು ನಿಮ್ಮ ಮಾತುಗಳಲ್ಲಿ ಸಂಯಮ ಕಾಪಾಡಿ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸಂಸದರ ಸಣ್ಣ ಗುಂಪುಗಳೊಂದಿಗೆ ತಮ್ಮ ಸಭೆಗಳನ್ನು ನಡೆಸುವುದನ್ನು ಮುಂದುವರಿಸಿದ ಪ್ರಧಾನಿ, ಬುಧವಾರ ವಿವಿಧ ರಾಜ್ಯಗಳ 45 ಕ್ಕೂ ಹೆಚ್ಚು ಸಂಸತ್ ಸದಸ್ಯರ ಗುಂಪನ್ನು ಉದ್ದೇಶಿಸಿ ಮಾತನಾಡಿದರು. ಬಡವರಿಗಾಗಿ ಕೆಲಸ ಮಾಡುವಂತೆ ಸಂಸದರನ್ನು ಒತ್ತಾಯಿಸಿದ ಅವರು, ಉಚಿತಗಳ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರತಿಪಕ್ಷಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಸದರು ಮಾಡಬಹುದಾದ ಕೆಲಸಗಳಿಗೆ ಒತ್ತು ನೀಡಿದ ಪ್ರಧಾನಿ ಮೋದಿ, ಎಲ್ಲರೂ ಸಂಯಮದಿಂದ ವರ್ತಿಸುವಂತೆ ಸೂಚಿಸಿದರು. ಪ್ರತಿಪಕ್ಷಗಳು ಪ್ರಚೋದನೆ ನೀಡುತ್ತವೆ, ಆದರೆ ವಿವಾದಕ್ಕೆ ಅವಕಾಶವಾಗದಂತೆ ನಿಮ್ಮ ಮಾತುಗಳನ್ನು ನಿಯಂತ್ರಿಸಿ ಎಂದು ಪ್ರಧಾನಿ ಹೇಳಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.

ಎನ್‌ಡಿಎ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲದ ದಕ್ಷಿಣ ಭಾರತದಲ್ಲಿನ ರಾಜ್ಯಗಳ ಮೇಲೆ ತಮ್ಮ ಗಮನವನ್ನು ಹೆಚ್ಚಿಸಲು ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಹೊಸದಾಗಿ ರೂಪುಗೊಂಡ ವಿರೋಧ ಪಕ್ಷದ ಒಕ್ಕೂಟವಾದ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (INDIA) ಅನ್ನು ಎದುರಿಸುವಂತೆ ಅವರು ಸಂಸದರನ್ನು ಕೇಳಿಕೊಂಡರು.

ಸರ್ಕಾರ ಕೈಗೊಂಡಿರುವ ಕಾಮಗಾರಿಗಳ ಪ್ರಚಾರ ಮತ್ತು ಪ್ರಚಾರದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಸಂಸದರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಸಂಪರ್ಕವನ್ನು ಹೆಚ್ಚಿಸಿಕೊಂಡು ಬಡವರು ಮತ್ತು ಸಮಾಜದ ಎಲ್ಲಾ ವರ್ಗದವರಿಗಾಗಿ ಕೆಲಸ ಮಾಡುವಂತೆ ಅವರು ಹೇಳಿದ್ದಾರೆ.

ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರಬೇಕು. ಅಗತ್ಯವಿದ್ದರೆ ವೃತ್ತಿಪರರಿಂದ ಸಹಾಯ ಪಡೆಯಬೇಕು. ಸಂಸದರು ಹೊಸ ಯೋಜನೆಗಳತ್ತ ಹೆಚ್ಚು ಗಮನಹರಿಸದೆ, ಇದುವರೆಗೆ ಸರ್ಕಾರ ಮಾಡಿರುವ ಎಲ್ಲ ಕೆಲಸಗಳ ಬಗ್ಗೆ ಪ್ರಚಾರ ಮಾಡಬೇಕು. ಇದಕ್ಕಾಗಿ ಕಾಲ್ ಸೆಂಟರ್ ಗಳನ್ನೂ ಸ್ಥಾಪಿಸಬಹುದು ಎಂದು ಮೋದಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ನಿಮಗೆ ಕೋಪ ಬಂದಿದೆ ಎಂದ ಖರ್ಗೆ; ನನಗೆ ಮದುವೆಯಾಗಿ 45 ವರ್ಷಗಳಾಯ್ತು, ನಾನು ಸಿಟ್ಟಾಗಲ್ಲ ಎಂದು ಉತ್ತರಿಸಿದ ಧನ್ಖರ್

ಹಿಂದಿನ ಸಭೆಯಲ್ಲಿ ರಾಜ್ಯಸಭಾ ಸಂಸದರು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪ್ರಧಾನಿ ಹೇಳಿದ್ದರು. ಎಲ್ಲವೂ ಚೆನ್ನಾಗಿರುತ್ತದೆ. ಸಂಸದರು ತಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಜನರ ನಡುವೆ ಹೋಗಬೇಕು ಎಂದು ಅವರು ಹೇಳಿದ್ದಾರೆ

ಬಿಜೆಪಿಯು 430 ಎನ್‌ಡಿಎ ಸಂಸದರನ್ನು 11 ಗುಂಪುಗಳಾಗಿ ವಿಂಗಡಿಸಿ ಪ್ರಧಾನಿ ಜೊತೆ ಪ್ರತ್ಯೇಕ ಸಭೆ ನಡೆಸಿದೆ. ಜುಲೈ 31 ರಂದು ಪ್ರಾರಂಭವಾದ ಸಭೆಗಳು ಆಗಸ್ಟ್ 10 ರವರೆಗೆ ನಡೆಯುವ ನಿರೀಕ್ಷೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Thu, 3 August 23