ಸಾಕುನಾಯಿಯ ಬಾಯಿಗೆ ಟೇಪ್ ಅಂಟಿಸಿ, ಮನೆಯೊಳಗೆ ನುಗ್ಗಿ ಹಣ, ಚಿನ್ನಾಭರಣ ದೋಚಿದ ಕಳ್ಳರು!

ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಆಘಾತಕಾರಿ ಕಳ್ಳತನದ ಘಟನೆಯೊಂದು ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಭರ್ವಾರ್ ಎಂಬ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಆ ಮನೆಯಲ್ಲಿದ್ದ ಸಾಕುನಾಯಿ ಬೊಗಳಿದರೆ ಮನೆಯವರು ಏಳುತ್ತಾರೆ ಎಂದು ಆ ನಾಯಿಯ ಬಾಯಿಗೆ ಟೇಪ್ ಅಂಟಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಹಣವನ್ನು ದೋಚಿದ್ದಾರೆ. ಭಾರೀ ಮಳೆ ಮತ್ತು ಮನೆಯಲ್ಲಿ ಕೂಲರ್ ಆನ್ ಇದ್ದುದರಿಂದ ಮನೆಯೊಳಗೆ ಕಳ್ಳರು ನುಗ್ಗಿ ದರೋಡೆ ಮಾಡಿದ್ದು ನಿದ್ರೆಯಲ್ಲಿದ್ದ ಮಾಲೀಕರಿಗೆ ಗೊತ್ತಾಗಿಲ್ಲ.

ಸಾಕುನಾಯಿಯ ಬಾಯಿಗೆ ಟೇಪ್ ಅಂಟಿಸಿ, ಮನೆಯೊಳಗೆ ನುಗ್ಗಿ ಹಣ, ಚಿನ್ನಾಭರಣ ದೋಚಿದ ಕಳ್ಳರು!
Dog Mouth Taped
Image Credit source: x

Updated on: Aug 29, 2026 | 7:05 PM

ಔರಂಗಾಬಾದ್, ಆಗಸ್ಟ್ 29: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಅತ್ಯಂತ ಆಘಾತಕಾರಿ ಕಳ್ಳತನದ (Robbery) ಪ್ರಕರಣವೊಂದು ನಡೆದಿದೆ. ದರೋಡೆಗಾಗಿ ಮನೆಯೊಳಗೆ ನುಗ್ಗುವ ಮುನ್ನ ಕಳ್ಳರು ಸಾಕುನಾಯಿಯು ಬೊಗಳಿ ಮನೆಯವರನ್ನು ಮತ್ತು ನೆರೆಹೊರೆಯವರನ್ನು ಎಚ್ಚರಿಸದಿರಲಿ ಎಂದು ಅದರ ಬಾಯಿಗೆ ಟೇಪ್ ಸುತ್ತಿ ಕಳ್ಳತನ ಮಾಡಿದ್ದಾರೆ. ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಯ ನಡುವೆ ಈ ಘಟನೆ ಸಂಭವಿಸಿದೆ. ಹೊರಗಡೆ ಸುರಿಯುತ್ತಿದ್ದ ಮಳೆಯ ಶಬ್ದ ಹಾಗೂ ಮನೆಯೊಳಗೆ ಇದ್ದ ಕೂಲರ್ ಶಬ್ದವನ್ನು ಕಳ್ಳರು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಈ ದರೋಡೆ ನಡೆಸಿದ್ದಾರೆ ಎಂದು ಮಾಲೀಕ ತಿಳಿಸಿದ್ದಾರೆ.

ಏನಿದು ಘಟನೆ?:

ಶುಕ್ರವಾರ ರಾತ್ರಿ ನಾನು ಮತ್ತು ನನ್ನ ಪತ್ನಿ ಮನೆಯಲ್ಲಿ ಮಲಗಿದ್ದೆವು. ಕುಟುಂಬದ ಇತರ ಸದಸ್ಯರು ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ 12 ಗಂಟೆಯ ಸುಮಾರಿಗೆ ಭಾರೀ ಮಳೆ ಆರಂಭವಾಯಿತು. ಮಳೆ ಮತ್ತು ಕೂಲರ್‌ನ ಶಬ್ದ ಇದ್ದುದರಿಂದ ನಮಗೆ ಯಾವುದೇ ಶಬ್ದ ಕೇಳುವುದಿಲ್ಲವೆಂದು ಕಳ್ಳರು ಮನೆಯೊಳಗೆ ನುಗ್ಗಿದರು. ಮನೆಯೊಳಗೆ ಬರುವ ಮುನ್ನ ನಾಯಿ ಬೊಗಳಬಾರದು ಎಂದು ಕಳ್ಳರು ಅಂಗಳದಲ್ಲಿ ಕಟ್ಟಿಹಾಕಿದ್ದ ಸಾಕು ನಾಯಿಯನ್ನು ಹಿಡಿದು ಅದರ ಬಾಯಿಗೆ ಟೇಪ್ ಅಂಟಿಸಿದರು. ನಂತರ ಕಳ್ಳರು ಮನೆಯ ಮೂರು ಕೋಣೆಗಳ ಬೀಗಗಳನ್ನು ಮುರಿದರು. ರೂಂಗಳ ಒಳಗೆ ಇರಿಸಲಾಗಿದ್ದ ಎರಡು ಕಪಾಟುಗಳು ಮತ್ತು ಎರಡು ಕಬ್ಬಿಣದ ಟ್ರಂಕ್‌ಗಳು ಮುರಿದುಹೋಗಿದ್ದು, ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಮನೆಯ ಮಾಲೀಕ ಅಲೋಕ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ 10ನೇ ಮಹಡಿಯಿಂದ ಜಿಗಿದ ಮಹಿಳೆಯ ಜೀವ ಕಾಪಾಡಿತು ಮರದ ಕೊಂಬೆ!

ಸುಮಾರು 4 ಲಕ್ಷ ಮೌಲ್ಯದ ಚಿನ್ನಾಭರಣಗಳ ಜೊತೆಗೆ, ಕಳ್ಳರು ಮನೆಯಲ್ಲಿಟ್ಟಿದ್ದ 40,000 ರೂ. ನಗದನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಾರೆ. ಬೆಳಿಗ್ಗೆ ಕುಟುಂಬ ಸದಸ್ಯರು ಎದ್ದಾಗ, ರೂಂಗಳ ಬೀಗಗಳು ಮುರಿದು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಆಘಾತಕ್ಕೊಳಗಾದರು. ನಂತರ ಪೊಲೀಸರಿಗೆ ವಿಷಯ ತಿಳಿಸಿದರು ಎಂದು ‘ನವಭಾರತ್ ಟೈಮ್ಸ್’ ವರದಿ ಮಾಡಿದೆ.

ಮಾಹಿತಿ ತಿಳಿದ ತಕ್ಷಣ ಮುಫಾಸಿಲ್ ಪೊಲೀಸ್ ಠಾಣೆಯ ತಂಡ ಭರವಾರ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕಳ್ಳರಿಗಾಗಿ ಹುಡುಕಾಟ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us