ಜಮ್ಮುವಿನಲ್ಲಿ ಬುಡಕಟ್ಟು ಜನಾಂಗದವರ ಮನೆಗಳನ್ನು ನೆಲಸಮ ಮಾಡಿದ ಸ್ಥಳೀಯ ಆಡಳಿತ; ನಡುಗುವ ಚಳಿಯಲ್ಲಿ ಧರಣಿ ನಡೆಸುತ್ತಿರುವ ಜನರು

ಮನೆ ಕಳೆದುಕೊಂಡ ಕುಟುಂಬಗಳ ಜತೆಗೆ, ಈಗಾಗಲೇ ಹಲವು ಹಿಂದು-ಸಿಖ್​ ಸಮುದಾಯದ ಜನರು ಪ್ರತಿಭಟನೆಗೆ ಕುಳಿತಿದ್ದಾರೆ. ನಾವು ನಮ್ಮ ಆಶ್ರಯಕ್ಕಾಗಿ ಹೋರಾಡುತ್ತಿದ್ದೇವೆ. ಇದು ಸಂವಿಧಾನ ನೀಡಿರುವ ಹಕ್ಕು ಎನ್ನುತ್ತಿದ್ದಾರೆ.

ಜಮ್ಮುವಿನಲ್ಲಿ ಬುಡಕಟ್ಟು ಜನಾಂಗದವರ ಮನೆಗಳನ್ನು ನೆಲಸಮ ಮಾಡಿದ ಸ್ಥಳೀಯ ಆಡಳಿತ; ನಡುಗುವ ಚಳಿಯಲ್ಲಿ ಧರಣಿ  ನಡೆಸುತ್ತಿರುವ ಜನರು
ಕೆಡವಲಾದ ಮನೆಗಳು
Follow us
TV9 Web
| Updated By: Lakshmi Hegde

Updated on: Jan 29, 2022 | 9:49 AM

ಶ್ರೀನಗರ: ಜಮ್ಮುವಿನ ರೂಪ್​ ನಗರ ಎಂಬಲ್ಲಿ ಬುಡಕಟ್ಟು ಜನಾಂಗದ (Tribal Community) ಸುಮಾರು 12 ಮುಸ್ಲಿಂ ಕುಟುಂಬಗಳು ಕಳೆದ ಎರಡು ವಾರಗಳಿಂದಲೂ ಧರಣಿ ನಡೆಸುತ್ತಿವೆ. ನಡುಗುವ ಚಳಿಯನ್ನೂ ಲೆಕ್ಕಿಸದೆ, ಇವರೆಲ್ಲ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇವರ ಮನೆಗಳನ್ನೆಲ್ಲ ಕೆಡವಿದ್ದೇ ಪ್ರತಿಭಟನೆಗೆ ಕಾರಣ. ರೂಪ್​ ನಗರದಲ್ಲಿ ಹೆಚ್ಚಾಗಿ ಗುಜ್ಜರ್​ ಮತ್ತು ಬಕರ್ವಾಲ್​ ಕುಟುಂಬಗಳ ಜನರೇ ಇಲ್ಲಿದ್ದು, ಇಲ್ಲಿ ನಮ್ಮ ಮನೆಗಳು ಕಳೆದ 70 ವರ್ಷಗಳಿಂದಲೂ ಇದ್ದವು. ಆದರೆ ಇದೀಗ ಜಮ್ಮು ಅಭಿವೃದ್ಧಿ ಪ್ರಾಧಿಕಾರ (Jammu Development Authority) ಅವುಗಳನ್ನು ಕೆಡವಿದೆ. ನಮಗೆಲ್ಲ ಮನೆ ಇಲ್ಲದಂತಾಗಿದೆ. ಈ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.

ಆದರೆ ಜಮ್ಮು ಅಭಿವೃದ್ಧಿ ಪ್ರಾಧಿಕಾರ ಹೇಳುವುದೇ ಬೇರೆ. ಇವರೆಲ್ಲರೂ ಸರ್ಕಾರಿ ಭೂಮಿಯಲ್ಲಿ ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಹಾಗಿದ್ದಾಗ್ಯೂ ಕೂಡ ನಾವು ದಶಕಗಳಿಂದಲೂ ಹಾಗೆ ಬಿಟ್ಟಿದ್ದೆವು. ಅಲ್ಲದೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೆವು. 1998ರಲ್ಲಿಯೇ ಈ ಭೂಮಿಗಳನ್ನು ನಮ್ಮ ವಶಕ್ಕೆ ಪಡೆಯಲಾಗಿದೆ. ಆದರೆ ಅವರೆಲ್ಲ ಮನೆ ಕಟ್ಟಿಕೊಂಡಿದ್ದಾರೆ, ನಿರಾಶ್ರಿತರನ್ನಾಗಿ ಮಾಡಬಾರದು ಎಂಬ ಕಾರಣಕ್ಕೆ ಸಹಿಸಿಕೊಂಡಿದ್ದೆವು. ಆದರೆ ಇದೀಗ ನಮ್ಮ ಕೆಲಸವನ್ನು ನಾವು ಮಾಡಲೇಬೇಕಾಗಿದೆ ಎಂದು ಸ್ಥಳೀಯ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಮನೆ ಕೆಡವದಂತೆ ಜಮ್ಮು ಸೆಷನ್ಸ್ ಕೋರ್ಟ್ ಆದೇಶ ನೀಡಿದ್ದರೂ ಕೂಡ ಜಮ್ಮು ಸ್ಥಳೀಯ ಆಡಳಿತ ಅವುಗಳನ್ನು ನಾಶ ಮಾಡಿದೆ ಎಂದು ಹಿರಿಯ ವಕೀಲರು ಹೇಳಿದ್ದಾರೆ. ಅವರೆಲ್ಲ ಬಡವರು ಎಂಬ ಒಂದೇ ಕಾರಣಕ್ಕೆ ಅವರ ಮನೆಗಳನ್ನು ಕಿತ್ತುಕೊಳ್ಳಲಾಗಿದೆ. ಜಮ್ಮು ಅಭಿವೃದ್ಧಿ ಪ್ರಾಧಿಕಾರ ನಿಜಕ್ಕೂ ಕಾನೂನು ಬದ್ಧವಾಗಿಯೇ ಮನೆಗಳನ್ನು ಕೆಡವಿದೆ ಎಂದಾದರೆ, ಹಾಗೆ ನಾಶ ಮಾಡುವುದಕ್ಕೂ ಮೊದಲು ಅವರಿಗೆಲ್ಲ ನೋಟಿಸ್​ ನೀಡಬೇಕಿತ್ತು. ಅಷ್ಟೇ ಅಲ್ಲ, ಮಾರ್ಚ್​ವರೆಗೂ ಮನೆಗಳನ್ನು ಕೆಡವಬೇಡಿ ಎಂದು ಜಮ್ಮು ಸೆಷನ್ಸ್ ಕೋರ್ಟ್​ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಆದರೆ ಸ್ಥಳೀಯ ಆಡಳಿತ ಸ್ವಲ್ಪವೂ ಕೂಡ ಆದೇಶ ಪಾಲನೆ ಮಾಡಿಲ್ಲ ಎಂದು ಜಮ್ಮು-ಕಾಶ್ಮೀರ ಹೈಕೋರ್ಟ್​ ವಕೀಲರಾದ ಶಕೀಲ್​ ಅಹ್ಮದ್​ ತಿಳಿಸಿದ್ದಾರೆ.

ಮನೆ ಕಳೆದುಕೊಂಡ ಕುಟುಂಬಗಳ ಜತೆಗೆ, ಈಗಾಗಲೇ ಹಲವು ಹಿಂದು-ಸಿಖ್​ ಸಮುದಾಯದ ಜನರು ಪ್ರತಿಭಟನೆಗೆ ಕುಳಿತಿದ್ದಾರೆ. ನಾವು ನಮ್ಮ ಆಶ್ರಯಕ್ಕಾಗಿ ಹೋರಾಡುತ್ತಿದ್ದೇವೆ. ಇದು ಸಂವಿಧಾನ ನೀಡಿರುವ ಹಕ್ಕು. ಪ್ರತಿಭಟನೆ ನಡೆಸುತ್ತಿರುವ ಬುಡಕಟ್ಟು ಜನಾಂಗದವರು ಅತಿಕ್ರಮಣದಾರರೂ ಅಲ್ಲ, ಭೂಗಳ್ಳರೂ ಅಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸತ್ವೀರ್ ಸಿಂಗ್​ ಮನ್​ಹಾಸ್​ ತಿಳಿಸಿದ್ದಾರೆ. ಇನ್ನೊಂದೆಡೆ ಜಮ್ಮು ಬಲಪಂಥೀಯ ಗುಂಪು, ಜಮ್ಮು ಅಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಬಲ ಸೂಚಿಸಿದೆ. ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಆರ್ಟಿಕಲ್​ 370ನ್ನು ತೆಗೆದ ಬಳಿಕ, ಅಲ್ಲಿನ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ ಕಳೆದ ಎರಡು ವರ್ಷಗಳಿಂದಲೂ ಗುಜ್ಜರ್​ ಮತ್ತು ಬಕರ್ವಾಲ್​ ಜನಾಂಗದ ಕುಟುಂಬಗಳ ಮನೆಗಳನ್ನು ಕೆಡವಲಾಗುತ್ತಿದೆ.

ಇದನ್ನೂ ಓದಿ: ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?