AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಪಾಲರನ್ನು ಭೇಟಿಯಾಗಿ ತಮಿಳುನಾಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಟಿವಿಕೆ ಮುಖ್ಯಸ್ಥ ವಿಜಯ್

ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಇಂದು ತಮಿಳುನಾಡು ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ತಮಿಳುನಾಡು ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಈ ಮೂಲಕ ಸರ್ಕಾರದ ರಚನೆಯ ಬಗ್ಗೆ 2 ದಿನಗಳಿಂದ ಇದ್ದ ಅನಿಶ್ಚಿತತೆಯನ್ನು ಕೊನೆಗೊಳಿಸಿದರು. ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ ಸರ್ಕಾರ ರಚಿಸಲು ಬಹುಮತ ಇರಲಿಲ್ಲ. ಹೀಗಾಗಿ, ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಮೊದಲು ಕಾಂಗ್ರೆಸ್ ಪಕ್ಷ ಮುಂದೆ ಬಂದು ಬೆಂಬಲ ನೀಡುವುದಾಗಿ ಘೋಷಿಸಿದೆ. ಈ ಮೂಲಕ ತಮಿಳುನಾಡಿನಲ್ಲಿ 55 ವರ್ಷಗಳ ಡಿಎಂಕೆ- ಕಾಂಗ್ರೆಸ್ ಮೈತ್ರಿ ಮುರಿದುಬಿದ್ದಿದೆ.

ರಾಜ್ಯಪಾಲರನ್ನು ಭೇಟಿಯಾಗಿ ತಮಿಳುನಾಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಟಿವಿಕೆ ಮುಖ್ಯಸ್ಥ ವಿಜಯ್
Vijay Meets GovernorImage Credit source: PTI
ಸುಷ್ಮಾ ಚಕ್ರೆ
|

Updated on:May 06, 2026 | 6:01 PM

Share

ಚೆನ್ನೈ, ಮೇ 6: ಟಿವಿಕೆ ಮುಖ್ಯಸ್ಥ ವಿಜಯ್ (Vijay) ಇಂದು ತಮಿಳುನಾಡಿನ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಟಿವಿಕೆ ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಇಲ್ಲದ ಕಾರಣದಿಂದ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಟಿವಿಕೆಗೆ ಸಾಧ್ಯವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಬೆಂಬಲ ನೀಡಿರುವುದರಿಂದ ವಿಜಯ್ ತಮ್ಮ ಪಕ್ಷ ಸರ್ಕಾರ ರಚಿಸಲು ಅವಕಾಶ ನೀಡಲು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

234 ಸದಸ್ಯರನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು 118 ಸ್ಥಾನಗಳ ಬಹುಮತದ ಅಗತ್ಯವಿತ್ತು. ಆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ವಿಜಯ್ ಇತರೆ ಪಕ್ಷಗಳ ಬೆಂಬಲ ಕೋರಿದ್ದರು.

ಇದನ್ನೂ ಓದಿ: ತಾಯಿ ಹಿಂದೂ, ತಂದೆ ಕ್ರಿಶ್ಚಿಯನ್… ದಳಪತಿ ವಿಜಯ್ ಯಾವ ಧರ್ಮವನ್ನು ಅನುಸರಿಸುತ್ತಾರೆ?

ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸಿದ್ದರೂ ವಿಜಯ್ ಅವರ ಪಕ್ಷಕ್ಕೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇಂದು ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತು. ಈ ಮೂಲಕ 55 ವರ್ಷದ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಇದರ ಜೊತೆಗೆ ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ಹೊರಗಿಡುವಂತೆ ಟಿವಿಕೆಗೆ ಕಾಂಗ್ರೆಸ್ ಷರತ್ತು ಹಾಕಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ‘ದಳಪತಿ’ ಸರ್ಕಾರಕ್ಕೆ ಕೈ ಬಲ: ಟಿವಿಕೆ ಕಚೇರಿಯಲ್ಲಿ ವಿಜಯ್ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು

ವಿಜಯ್ ಗುರುವಾರ ಬೆಳಿಗ್ಗೆ (ಮೇ 7) ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಭ ಮುಹೂರ್ತದ ಪ್ರಕಾರ ಬೆಳಿಗ್ಗೆ 10ರಿಂದ 11.15ರ ನಡುವೆ ಪ್ರಮಾಣವಚನ ಸಮಾರಂಭವನ್ನು ನಿಗದಿಪಡಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Wed, 6 May 26

Follow Us
ದಾವಣಗೆರೆ: ಕಾಂಗ್ರೆಸ್​​ ಗೆಲುವಿಗೆ ಕಾರಣ ಯಾರು? ಜಬ್ಬಾರ್​ ಹೇಳಿದ್ದಿಷ್ಟು
ದಾವಣಗೆರೆ: ಕಾಂಗ್ರೆಸ್​​ ಗೆಲುವಿಗೆ ಕಾರಣ ಯಾರು? ಜಬ್ಬಾರ್​ ಹೇಳಿದ್ದಿಷ್ಟು
ಸರಿಪಡಿಸದಿದ್ರೆ ‌ಮತ್ತೆ ಅನಾಹುತಗಳಾಗುತ್ತೆ: ಕೈಗೆ ಜಬ್ಬಾರ್ ಎಚ್ಚರಿಕೆ
ಸರಿಪಡಿಸದಿದ್ರೆ ‌ಮತ್ತೆ ಅನಾಹುತಗಳಾಗುತ್ತೆ: ಕೈಗೆ ಜಬ್ಬಾರ್ ಎಚ್ಚರಿಕೆ
ಮದುವೆ ಬಗ್ಗೆ ನೂತನ ಶಾಸಕ ಸಮರ್ಥ್ ಶಾಮನೂರು ಹೇಳಿದ್ದೇನು?
ಮದುವೆ ಬಗ್ಗೆ ನೂತನ ಶಾಸಕ ಸಮರ್ಥ್ ಶಾಮನೂರು ಹೇಳಿದ್ದೇನು?
ಅಜ್ಜನಂತೆ ಅಜಾತಶತ್ರು ಆಗುವುದೇ ನನ್ನ ಗುರಿ: ಸಮರ್ಥ್​​ ಶಾಮನೂರು
ಅಜ್ಜನಂತೆ ಅಜಾತಶತ್ರು ಆಗುವುದೇ ನನ್ನ ಗುರಿ: ಸಮರ್ಥ್​​ ಶಾಮನೂರು
ರಾಜಕೀಯ ಎಂಟ್ರಿ ಯಾವಾಗ? ಉತ್ತರಿಸಿದ ‘ದುನಿಯಾ’ ವಿಜಯ್
ರಾಜಕೀಯ ಎಂಟ್ರಿ ಯಾವಾಗ? ಉತ್ತರಿಸಿದ ‘ದುನಿಯಾ’ ವಿಜಯ್
IPL ಫೈನಲ್ ಬೆಂಗಳೂರಿನಿಂದ ಶಿಫ್ಟ್ ಮಾಡಿದ್ಯಾಕೆ? ಡಿಕೆಶಿ ಹೇಳಿದ್ದಿಷ್ಟು
IPL ಫೈನಲ್ ಬೆಂಗಳೂರಿನಿಂದ ಶಿಫ್ಟ್ ಮಾಡಿದ್ಯಾಕೆ? ಡಿಕೆಶಿ ಹೇಳಿದ್ದಿಷ್ಟು
ಸಾರ್ವಜನಿಕರ ಗಮನಕ್ಕೆ: ಮೇ 9ರಂದು ಬಸ್ ಸಂಚಾರದಲ್ಲಿ ವ್ಯತ್ಯಯ
ಸಾರ್ವಜನಿಕರ ಗಮನಕ್ಕೆ: ಮೇ 9ರಂದು ಬಸ್ ಸಂಚಾರದಲ್ಲಿ ವ್ಯತ್ಯಯ
ಡಿ.ಕೆ. ಶಿವಕುಮಾರ್ ಜನ್ಮದಿನಕ್ಕೆ ಹೈಕಮಾಂಡ್‌ನಿಂದ 'ಗಿಫ್ಟ್'?
ಡಿ.ಕೆ. ಶಿವಕುಮಾರ್ ಜನ್ಮದಿನಕ್ಕೆ ಹೈಕಮಾಂಡ್‌ನಿಂದ 'ಗಿಫ್ಟ್'?
ಹೈಕಮಾಂಡ್​​ ನಿರ್ಧಾರವೇ ಫೈನಲ್ ಶಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ
ಹೈಕಮಾಂಡ್​​ ನಿರ್ಧಾರವೇ ಫೈನಲ್ ಶಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ
ದಯವಿಟ್ಟು ಬದುಕಲು ಬಿಡಿ: ಸಿಎಂಗೆ ಕೈಮುಗಿದು ಬೇಡಿದ ನೂತನ ಶಾಸಕ ಜೀವರಾಜ್
ದಯವಿಟ್ಟು ಬದುಕಲು ಬಿಡಿ: ಸಿಎಂಗೆ ಕೈಮುಗಿದು ಬೇಡಿದ ನೂತನ ಶಾಸಕ ಜೀವರಾಜ್