ಮಿತ್ರ ಪಕ್ಷಗಳು ಘೋಷಿಸುವ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬೇಷರತ್ತಾಗಿ ಬೆಂಬಲಿಸುತ್ತೇವೆ: ಉದ್ಧವ್ ಠಾಕ್ರೆ

ಮಿತ್ರ ಪಕ್ಷಗಳು ಘೋಷಿಸುವ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬೇಷರತ್ತಾಗಿ ಬೆಂಬಲಿಸುತ್ತೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ರಾಜ್ಯದ ಸ್ವಾಭಿಮಾನವನ್ನು ರಕ್ಷಿಸುವ ಹೋರಾಟವಾಗಿದೆ ಎಂದು ಎಂವಿಎ ಸಭೆಯಲ್ಲಿ ಠಾಕ್ರೆ ಒತ್ತಿ ಹೇಳಿದರು.

ಮಿತ್ರ ಪಕ್ಷಗಳು ಘೋಷಿಸುವ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬೇಷರತ್ತಾಗಿ ಬೆಂಬಲಿಸುತ್ತೇವೆ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us
ನಯನಾ ರಾಜೀವ್
|

Updated on: Aug 16, 2024 | 12:56 PM

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಘೋಷಿಸಿದ ಯಾವುದೇ ಅಭ್ಯರ್ಥಿಯನ್ನು ತಮ್ಮ ಪಕ್ಷ ಬೇಷರತ್ತಾಗಿ ಬೆಂಬಲಿಸುತ್ತದೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಮೈತ್ರಿ ಪಾಲುದಾರ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ರಾಜ್ಯದ ಸ್ವಾಭಿಮಾನವನ್ನು ರಕ್ಷಿಸುವ ಹೋರಾಟವಾಗಿದೆ ಎಂದು ಎಂವಿಎ ಸಭೆಯಲ್ಲಿ ಠಾಕ್ರೆ ಒತ್ತಿ ಹೇಳಿದರು. ಎಂವಿಎ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಊಹಾಪೋಹಗಳಿವೆ.

ಪೃಥ್ವಿರಾಜ್ ಚವಾಣ್ ಆಗಲಿ ಅಥವಾ ಶರದ್ ಪವಾರ್ ಆಗಲಿ ಮೈತ್ರಿಕೂಟದ ಎಲ್ಲಾ ನಾಯಕರಿಗೆ ಸಿಎಂ ಆಯ್ಕೆಯನ್ನು ಘೋಷಿಸುವಂತೆ ನಾನು ಮನವಿ ಮಾಡುತ್ತೇನೆ ಮತ್ತು ನಾನು ಅವರನ್ನು ಬೇಷರತ್ತಾಗಿ ಬೆಂಬಲಿಸುತ್ತೇನೆ ಎಂದು ಠಾಕ್ರೆ ಹೇಳಿದರು. ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ನಂತರ ಪ್ರಚಾರ ಆರಂಭಿಸಿ ಎಂದು ಅವರು ಎಂವಿಎ ಪಾಲುದಾರರನ್ನು ಒತ್ತಾಯಿಸಿದರು.

ಮತ್ತಷ್ಟು ಓದಿ: ನಮ್ಮನ್ನು ಏಕೆ ಅನರ್ಹಗೊಳಿಸಿಲ್ಲ?: ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿದ ಉದ್ದವ್ ಠಾಕ್ರೆ

ಯಾರು ಹೆಚ್ಚು ಸೀಟು ಗೆದ್ದರೂ ಅವರಿಗೆ ಸಿಎಂ ಸ್ಥಾನ ಸಿಗುತ್ತದೆ ಎಂಬ ನಿಯಮವನ್ನು ನಾವು ಅನುಸರಿಸುತ್ತಿದ್ದೆವು. ಹಿಂದಿನ ಮೈತ್ರಿಗಳಲ್ಲಿ ನಾವು ಕೂಡ ಇದೇ ಸೂತ್ರವನ್ನು ಅನುಸರಿಸಿದ್ದೇವೆ. ಹಾಗಾಗಿ ಮೊದಲು ನಾವು ಸಿಎಂ ಮುಖವನ್ನು ಘೋಷಿಸಬೇಕು ಮತ್ತು ನಂತರ ನಮ್ಮ ಪ್ರಚಾರವನ್ನು ಪ್ರಾರಂಭಿಸಬಹುದು ಎಂದು ನಾನು ಮನವಿ ಮಾಡುತ್ತೇನೆ ಎಂದು ಅವರು ಒತ್ತಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ