ನವದೆಹಲಿ, ಮಾರ್ಚ್ 31: ಭಾರತದ ರೈಲ್ವೆ ವಲಯದಲ್ಲಿ ಕ್ರಾಂತಿಯನ್ನುಂಟುಮಾಡುವ ನಿಟ್ಟಿನಲ್ಲಿ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡುವೆ ಹೊಸ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ರೈಲು ಸೇವೆಗಳು (Indian Railway Service) ಪ್ರಾರಂಭವಾದ ನಂತರ ಯುಎಇ ಮತ್ತು ಭಾರತದ ನಡುವಿನ ಪ್ರಯಾಣವು ಹೆಚ್ಚು ಸುಲಭವಾಗುತ್ತದೆ. ವರದಿಗಳ ಪ್ರಕಾರ, ದುಬೈ ಮತ್ತು ಮುಂಬೈ ನಡುವೆ 1,200 ಮೈಲಿ (ಸುಮಾರು 2,000 ಕಿಮೀ) ಉದ್ದದ ನೀರೊಳಗಿನ ರೈಲು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ನೀರಿನ ಅಡಿಯಲ್ಲಿ ಪ್ರಯಾಣಿಸುವುದು ಸಂಪೂರ್ಣವಾಗಿ ವಿಭಿನ್ನ ಅನುಭವವಾಗಿರುತ್ತದೆ. ಇದು ಇದು ಗ್ಲಾಸ್ನಿಂದ ನಿರ್ಮಿತವಾದ ರೈಲು ಭೋಗಿಯಾಗಿದ್ದು, ಇದರ ಮೂಲಕ ಪ್ರಯಾಣದ ಸಮಯದಲ್ಲಿ ಜನರು ನೀರೊಳಗಿನ ಪ್ರಪಂಚವನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ಕ್ಲಾಸ್ಟ್ರೋಫೋಬಿಯಾ ಇರುವವರಿಗೆ ಇದು ಭಯಾನಕವಾಗಬಹುದು.
ಇದನ್ನೂ ಓದಿ: Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್ಪ್ರೆಸ್ ರೈಲು
ಭಾರತ ಮತ್ತು ದುಬೈ ನಡುವೆ ಹೊಸ ಸಾರಿಗೆ ಸೌಲಭ್ಯವನ್ನು ಒದಗಿಸಲು ಯುಎಇಯ ರಾಷ್ಟ್ರೀಯ ಸಲಹೆಗಾರ ಬ್ಯೂರೋ ಲಿಮಿಟೆಡ್ ಈ ಯೋಜನೆಯನ್ನು ಪ್ರಸ್ತಾಪಿಸಿದೆ. ಹೆಚ್ಚುವರಿಯಾಗಿ, ಈ ಯೋಜನೆಯ ಪೂರ್ಣಗೊಳಿಸುವಿಕೆಯು ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಬಲಪಡಿಸುತ್ತದೆ.
ಅಂಡರ್ವಾಟರ್ ರೈಲಿನ ವಿಶೇಷತೆಗಳು:
ಇದನ್ನೂ ಓದಿ: ಬೆಂಗಳೂರಿನಿಂದ ಮುಂಬೈ, ಕೋಲ್ಕತ್ತಾಗೆ ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ