Himachal Pradesh: ಹಿಮಾಚಲಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿ ಭರವಸೆ
ಹಿಮಾಚಲ ಪ್ರದೇಶ ಚುನಾವಣೆಗಾಗಿ ಬಿಜೆಪಿಯು ಭಾನುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹಿಮಾಚಲ ಪ್ರದೇಶದ ಮತದಾನಕ್ಕೆ ಮೊದಲು, ಆಡಳಿತಾರೂಢ ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯನ್ನು ತರುವುದಾಗಿ ಭಾನುವಾರ ಭರವಸೆ ನೀಡಿದೆ.
ಹಿಮಾಚಲ ಪ್ರದೇಶ ಚುನಾವಣೆಗಾಗಿ ಬಿಜೆಪಿಯು ಭಾನುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹಿಮಾಚಲ ಪ್ರದೇಶದ ಮತದಾನಕ್ಕೆ ಮೊದಲು, ಆಡಳಿತಾರೂಢ ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯನ್ನು ತರುವುದಾಗಿ ಭಾನುವಾರ ಭರವಸೆ ನೀಡಿದೆ.
ಇದು ಮುಸ್ಲಿಮರಲ್ಲಿ ವಿವಾದಾಸ್ಪದ ವಿಷಯವಾಗಿದೆ ಏಕೆಂದರೆ ಅದು ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಧರ್ಮ-ನಿರ್ದಿಷ್ಟ ಕಾನೂನುಗಳನ್ನು ತೆಗೆದುಹಾಕುತ್ತದೆ. ಮುಂದಿನ ತಿಂಗಳು ಮತದಾನ ನಡೆಯಲಿರುವ ಗುಜರಾತ್‌ನಲ್ಲಿ ಈ ಕ್ರಮವನ್ನು ಪ್ರತಿಪಕ್ಷಗಳು ಹಿಂದೂ ಬಹುಸಂಖ್ಯಾತರ ಮತಗಳನ್ನು ಹೆಚ್ಚಿಸುವ ಗಿಮಿಕ್ ಎಂದು ಟೀಕಿಸಿದ್ದಾರೆ ಏಕೆಂದರೆ ನಾಗರಿಕ ಸಂಹಿತೆಯು ರಾಜ್ಯಕ್ಕಿಂತ ಹೆಚ್ಚಾಗಿ ಕೇಂದ್ರದ ಡೊಮೇನ್ ಎಂದು ವ್ಯಾಪಕವಾಗಿ ನಂಬಲಾಗಿದೆ.
ಇನ್ನು ಗುಜರಾತ್‌ನಲ್ಲಿ ಕೂಡ ಇಂಥದ್ದೇ ಭರವಸೆ ನೀಡಲಾಗಿದೆ. ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಮೋದಿ (Narendra Modi) ತವರು ಗುಜರಾತ್‌ನಲ್ಲಿ ಏಕರೂಪದ ನಾಗರಿಕ ಸಂಹಿತೆ’ (UCC) ಜಾರಿ ಸಂಬಂಧ ಬಿಜೆಪಿ ಸರ್ಕಾರ ಮಹತ್ವದ ತೀರ್ಮಾನ ಪ್ರಕಟಿಸಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಲುವಾಗಿ ಸವಿಸ್ತಾರ ಅಧ್ಯಯನ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸವುದಾಗಿ ಘೋಷಿಸಿದೆ.
ಬಿಜೆಪಿ 2019ರ ಲೋಕಸಭಾ ಚುನಾವಣೆಯ (Elections) ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರೋದಾಗಿ ಭರವಸೆ ನೀಡಿತ್ತು. ಇತ್ತೀಚೆಗೆ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳೂ ಸಂಹಿತೆ ಜಾರಿಗೊಳಿಸಲು ಸಮಿತಿಗಳನ್ನು ರಚನೆ ಮಾಡಿದ್ದವು.
ಈ ರಾಜ್ಯಗಳ ಸಾಲಿಗೆ ಇದೀಗ ಗುಜರಾತ್ ಸಹ ಸೇರ್ಪಡೆಯಾಗಿದೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಏಕರೂಪ ಸಂಹಿತೆ ಎಂದರೇನು? ಹಿಂದೂ, ಮುಸ್ಲಿಂ, ಸಿಖ್ಖರು ಸೇರಿದಂತೆ ದೇಶದ ವಿವಿಧ ಧರ್ಮಗಳ ಜನರು ವಿವಾಹ, ಆಸ್ತಿ ಹಂಚಿಕೆ ಸೇರಿ ವಿವಿಧ ಉದ್ದೇಶಗಳೊಗೆ ತಮ್ಮ ಸಮುದಾಯದ ವೈಯಕ್ತಿಕ ಕಾನೂನುಗಳನ್ನು ಪಾಲಿಸುತ್ತಿದ್ದಾರೆ. ಹಾಗಾಗಿ ಎಲ್ಲ ಧರ್ಮದವರಿಗೂ ವಿವಾಹ ವಿಚ್ಛೇದನ, ಅಸ್ತಿ ದತ್ತುಗೆ ಸಂಬಂಧಿಸಿದ ವಿಚಾರಗಳಿಗೆ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ.