ಭಾರತದಲ್ಲಿ ಶೇ 67 ಗರ್ಭಪಾತಗಳು ಅಸುರಕ್ಷಿತವಾಗಿದ್ದು, ಪ್ರತಿದಿನ ಸುಮಾರು 8 ಸಾವುಗಳು ಸಂಭವಿಸುತ್ತವೆ: ವರದಿ

ಭಾರತದಲ್ಲಿನ ಅಧ್ಯಯನಗಳು ಅನಪೇಕ್ಷಿತ ಗರ್ಭಧಾರಣೆಗಳು ತಾಯಿಯ ಆರೋಗ್ಯಕ್ಕೆ ಕಡಿಮೆ ಕಾಳಜಿ ಮತ್ತು ದುರ್ಬಲ ಶಿಶು ಮತ್ತು ತಾಯಿಯ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ ಎಂದು ಸೂಚಿಸುತ್ತವೆ. 15-19 ವರ್ಷ ವಯಸ್ಸಿನ ಮಹಿಳೆಯರು ಗರ್ಭಪಾತ-ಸಂಬಂಧಿತ ತೊಡಕುಗಳಿಂದ ಸಾಯುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಶೇ 67 ಗರ್ಭಪಾತಗಳು ಅಸುರಕ್ಷಿತವಾಗಿದ್ದು, ಪ್ರತಿದಿನ ಸುಮಾರು 8 ಸಾವುಗಳು  ಸಂಭವಿಸುತ್ತವೆ: ವರದಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 31, 2022 | 8:01 PM

ಅಸುರಕ್ಷಿತ ಗರ್ಭಪಾತಗಳು (Abortions) ಭಾರತದಲ್ಲಿ ತಾಯಂದಿರ ಮರಣಕ್ಕೆ ಮೂರನೇ ಪ್ರಮುಖ ಕಾರಣವಾಗಿದೆ. ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ (UNFPA)ನ ವಿಶ್ವ ಜನಸಂಖ್ಯೆಯ ವರದಿ 2022 ರ ಪ್ರಕಾರ ಪ್ರತಿ ದಿನ ಸುಮಾರು 8 ಮಹಿಳೆಯರು ಅಸುರಕ್ಷಿತ ಗರ್ಭಪಾತಕ್ಕೆ ಸಂಬಂಧಿಸಿದ ಕಾರಣಗಳಿಂದ ಸಾಯುತ್ತಾರೆ. 2007 – 2011 ನಡುವೆ  ಭಾರತದಲ್ಲಿ ಶೇಕಡಾ 67 ರಷ್ಟು ಗರ್ಭಪಾತಗಳನ್ನು ಅಸುರಕ್ಷಿತವೆಂದು ವರ್ಗೀಕರಿಸಲಾಗಿದೆ. ಬುಧವಾರ ಬಿಡುಗಡೆಯಾದ ವರದಿಯು ‘ಸೀಯಿಂಗ್ ದಿ ಅನ್‌ಸೀನ್: ದಿ ಕೇಸ್ ಫಾರ್ ಆಕ್ಷನ್ ಇನ್ ದಿಗ್ಲೆಕ್ಟೆಡ್ ಕ್ರೈಸಿಸ್ ಆಫ್ ಅನ್‌ಇನ್‌ಟೆಂಡೆಡ್ ಪ್ರೆಗ್ನೆನ್ಸಿ’, (‘Seeing the Unseen: the case for action in the neglected crisis of unintended pregnancy’) ಜಾಗತಿಕವಾಗಿ ಪ್ರತಿ ವರ್ಷ 121 ಮಿಲಿಯನ್ ಅನಪೇಕ್ಷಿತ ಗರ್ಭಧಾರಣೆಗಳು ಸಂಭವಿಸುತ್ತವೆ ಎಂದು ಕಂಡುಹಿಡಿದಿದೆ. ಅಂದರೆ ದಿನಕ್ಕೆ ಸರಾಸರಿ 3,31,000. ವಿಶ್ವದ ಏಳು ಅನಿರೀಕ್ಷಿತ ಗರ್ಭಧಾರಣೆಗಳಲ್ಲಿ ಒಂದು ಭಾರತದಲ್ಲಿ ನಡೆಯುತ್ತದೆ. ಅನಪೇಕ್ಷಿತ ಗರ್ಭಧಾರಣೆಗಳು ಮತ್ತು ನಂತರದ ಗರ್ಭಪಾತಗಳು ದೇಶದ ಒಟ್ಟಾರೆ ಅಭಿವೃದ್ಧಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿವೆ. ಶಿಕ್ಷಣ ಮತ್ತು ಆದಾಯದ ಮಟ್ಟಗಳು ಹೆಚ್ಚಾದಂತೆ ಇದು ಅನಪೇಕ್ಷಿತ ಗರ್ಭಧಾರಣೆಯನ್ನು ಕಡಿಮೆ ಮಾಡುತ್ತದೆ ಎಂದು ವರದಿ ಹೇಳುತ್ತದೆ. ವಿಶ್ವದಲ್ಲಿ ಅನಪೇಕ್ಷಿತ ಗರ್ಭಧಾರಣೆಯ ದಿಗ್ಭ್ರಮೆಗೊಳಿಸುವ ಸಂಖ್ಯೆಯನ್ನು ಯುಎನ್‌ಎಫ್‌ಪಿಎ, “ಮೂಲಭೂತ ಮಾನವ ಹಕ್ಕನ್ನು ಎತ್ತಿಹಿಡಿಯುವಲ್ಲಿ ಜಾಗತಿಕ ವೈಫಲ್ಯ” ಎಂದು ಕರೆದಿದೆ.

“ಜಾಗತಿಕವಾಗಿ, ಗರ್ಭಧಾರಣೆಯನ್ನು ತಪ್ಪಿಸಲು ಬಯಸುವ ಅಂದಾಜು 257 ಮಿಲಿಯನ್ ಮಹಿಳೆಯರು ಸುರಕ್ಷಿತ, ಆಧುನಿಕ ಗರ್ಭನಿರೋಧಕ ವಿಧಾನಗಳನ್ನು ಬಳಸುತ್ತಿಲ್ಲ. ಅವರಲ್ಲಿ 172 ಮಿಲಿಯನ್ ಮಹಿಳೆಯರು ಯಾವುದೇ ವಿಧಾನವನ್ನು ಬಳಸುತ್ತಿಲ್ಲ” ಎಂದು ಅದು ಹೇಳುತ್ತದೆ. ಪ್ರತಿ 1,000 ಮಹಿಳೆಯರ ಪೈಕಿ 64 ಅನಪೇಕ್ಷಿತ ಗರ್ಭಧಾರಣೆಯಾಗಿದ್ದು ಪ್ರಸ್ತುತ ದರವು ಪ್ರತಿ ವರ್ಷ ಸುಮಾರು 6 ಪ್ರತಿಶತದಷ್ಟು ವಿಶ್ವದ ಮಹಿಳೆಯರು ಅನಪೇಕ್ಷಿತ ಗರ್ಭಧಾರಣೆ ಮಾಡುತ್ತಾರೆ ಎಂಬುದನ್ನು ತೋರಿಸುತ್ತದೆ.

“ಅನೇಕ ವಿಷಯಗಳಲ್ಲಿ ಲಿಂಗ ತಾರತಮ್ಯದ ಕಾರಣ ಮತ್ತು ಪರಿಣಾಮವಾಗಿ ಅನಪೇಕ್ಷಿತ ಗರ್ಭಧಾರಣೆಯನ್ನು ಕಾಣಬಹುದು. ಲಿಂಗ ಸಮಾನತೆ ಮತ್ತು ವಯಸ್ಸಿನ ಅಂತರದಿಂದಾಗಿ ಇದು ಸಾಮಾನ್ಯವಾಗಿ ಸಂಭವಿಸುತ್ತದೆ ಎಂದು ವರದಿ ಹೇಳಿದೆ. 60 ಪ್ರತಿಶತದಷ್ಟು ಅನಪೇಕ್ಷಿತ ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ ಮತ್ತು ಹೆಚ್ಚಾಗಿ, ಈ ಗರ್ಭಪಾತಗಳು ಅಸುರಕ್ಷಿತವಾಗಿವೆ – ಅವು ತಾಯಿಯ ಮರಣ ಮತ್ತು ಮಹಿಳೆಯರ ಆಸ್ಪತ್ರೆ ದಾಖಲಾತಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

“ಒಂದು ಅಂದಾಜಿನ ಪ್ರಕಾರ ಎಲ್ಲಾ ಗರ್ಭಪಾತಗಳಲ್ಲಿ ಶೇಕಡಾ 45 ರಷ್ಟು ಅಸುರಕ್ಷಿತವಾಗಿದೆ. ಇವುಗಳು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿದ್ದು  ಜಾಗತಿಕವಾಗಿ ವರ್ಷಕ್ಕೆ ಏಳು ಮಿಲಿಯನ್ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಚಿಕಿತ್ಸೆಯ ವೆಚ್ಚ ವರ್ಷಕ್ಕೆ ಅಂದಾಜು 553 ಮಿಲಿಯನ್ ಡಾಲರ್  ಆಗಿದೆ. ಎಲ್ಲಾ ತಾಯಂದಿರ ಕಾಯಿಲೆಗಳಲ್ಲಿ ಗಮನಾರ್ಹ ಪಾಲನ್ನು ಮತ್ತು ಎಲ್ಲಾ ತಾಯಿಯ ಮರಣಗಳಲ್ಲಿ 4.7ರಿಂದ–13.2 ಪ್ರತಿಶತದಷ್ಟು ಮರಣಗಳಿಗೆ ಇದು ಕಾರಣವಾಗುತ್ತದೆ ಎಂದು ವರದಿ ಹೇಳುತ್ತದೆ.

ಭಾರತದಲ್ಲಿನ ಅಧ್ಯಯನಗಳು ಅನಪೇಕ್ಷಿತ ಗರ್ಭಧಾರಣೆಗಳು ತಾಯಿಯ ಆರೋಗ್ಯಕ್ಕೆ ಕಡಿಮೆ ಕಾಳಜಿ ಮತ್ತು ದುರ್ಬಲ ಶಿಶು ಮತ್ತು ತಾಯಿಯ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ ಎಂದು ಸೂಚಿಸುತ್ತವೆ. 15-19 ವರ್ಷ ವಯಸ್ಸಿನ ಮಹಿಳೆಯರು ಗರ್ಭಪಾತ-ಸಂಬಂಧಿತ ತೊಡಕುಗಳಿಂದ ಸಾಯುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ವರದಿ ಹೇಳಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಎಲ್ಲಾ ಯುವತಿಯರಲ್ಲಿ (ಹದಿಹರೆಯದವರು) 13 ಪ್ರತಿಶತದಷ್ಟು ಜನರು ಮಗುವನ್ನು ಹೆರಲು ಪ್ರಾರಂಭಿಸುತ್ತಾರೆ ಎಂದು ವರದಿ ಹೇಳುತ್ತದೆ. 14 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮೊದಲ ಮಗುವಿನ ಜನನದ ಮುಕ್ಕಾಲು ಭಾಗದಷ್ಟು ಹುಡುಗಿಯರು 20 ವರ್ಷ ತುಂಬುವ ಮೊದಲು ಎರಡನೇ ಮಗುವನ್ನು ಹೊಂದಿದ್ದರು. 40 ಪ್ರತಿಶತದಷ್ಟು ಎರಡು ಹೆರಿಗೆಗಳು 20 ವರ್ಷ ತುಂಬುವ ಮೊದಲು ಮೂರನೇ ಮಗುವನ್ನು ಹೊಂದಿರುತ್ತಾರೆ. ಮೊದಲ ಜನನದ ಅರ್ಧದಷ್ಟು ಹುಡುಗಿಯರು 15-17 ವಯಸ್ಸಿನ ನಡುವೆ 20 ವರ್ಷ ತುಂಬುವ ಮೊದಲು ಎರಡನೇ ಮಗು ಹೊಂದಿದ್ದರು.

ಭಾರತದಲ್ಲಿ ಹದಿಹರೆಯದವರ ಗರ್ಭಧಾರಣೆ ಬಗ್ಗೆ ಹೇಳುವುದಾದರೆ, 15-19 ವಯಸ್ಸಿನ ಮಹಿಳೆಯರು ಪ್ರತಿ 1,000 ಮಹಿಳೆಯರಲ್ಲಿ 43 ಮಹಿಳೆಯರಿಗೆ ಹೆರಿಗೆಯಾಗಿದೆ (NFHS-5, 2019-21), ಇದು NFHS-4 (2015-16) ಸಮಯದಲ್ಲಿ 51 ರಿಂದ ಕಡಿಮೆಯಾಗಿದೆ. 20-24 ವರ್ಷ ವಯಸ್ಸಿನ ಒಟ್ಟು 23.3 ಪ್ರತಿಶತ ಮಹಿಳೆಯರು 18 ವರ್ಷಕ್ಕಿಂತ ಮುಂಚೆಯೇ ವಿವಾಹವಾದರು. (NFHS-5), NFHS-4 ನಿಂದ ಕೇವಲ 3.5 ಅಂಕಗಳ ಕುಸಿತ ಕಂಡಿದೆ. ಮೊದಲ ಹೆರಿಗೆಯ ಸರಾಸರಿ ವಯಸ್ಸು 21 ವರ್ಷಗಳು ಮತ್ತು 20-24 ವರ್ಷ ವಯಸ್ಸಿನ 9.3 ರಷ್ಟು ಮಹಿಳೆಯರು 18 ವರ್ಷಕ್ಕಿಂತ ಮುಂಚೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

ಭಾರತದಲ್ಲಿ ಹದಿಹರೆಯದ ಗರ್ಭಧಾರಣೆಯು ಶೇಕಡಾ 1 ರಷ್ಟು ಕಡಿಮೆಯಾಗಿದೆ ಎಂದು ವರದಿ ತೋರಿಸುತ್ತದೆ. 1971ರ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್ ಮತ್ತು ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ತಿದ್ದುಪಡಿ) ಆಕ್ಟ್ 2021, ಕಾಯಿದೆಯ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಸುರಕ್ಷಿತ ಗರ್ಭಪಾತಗಳಿಗೆ ಪ್ರಚೋದನೆಯನ್ನು ನೀಡುತ್ತದೆ ಎಂದು ವರದಿಯು ಹೇಳುತ್ತದೆ.

NFHS 4 ಮತ್ತು 5 ರ ನಡುವೆ ಆಧುನಿಕ ಗರ್ಭನಿರೋಧಕ ವಿಧಾನಗಳ ಬಳಕೆಯಲ್ಲಿ 9 ಪ್ರತಿಶತದಷ್ಟು ಹೆಚ್ಚಳದೊಂದಿಗ ದೇಶಾದ್ಯಂತ ಹೆಚ್ಚಿದ ಗರ್ಭನಿರೋಧಕ ಬಳಕೆಯ NFHS 5 ಸಂಶೋಧನೆಗಳು ಪ್ರೋತ್ಸಾಹದಾಯಕವಾಗಿವೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಗರ್ಭನಿರೋಧಕ ವಿಧಾನವಾಗಿ ಮಹಿಳೆಯ ಸಂತಾನಹರಣ ಶೇಕಡಾ 37 ರಷ್ಟಿದೆ ಮತ್ತು “ತುಂಬಾ ಹೆಚ್ಚು” ಎಂದು ಅದು ಸೂಚಿಸುತ್ತದೆ.

ಭಾರತದಲ್ಲಿ ಆಧುನಿಕ ಗರ್ಭನಿರೋಧಕ ವಿಧಾನಗಳ ಪ್ರವೇಶ ಮತ್ತು ಬಳಕೆಯನ್ನು ಹೆಚ್ಚಿಸುವುದು, ವಿಶೇಷವಾಗಿ ಲೈಂಗಿಕ ಶಿಕ್ಷಣದ ಮೂಲಕ ಹದಿಹರೆಯದ ಹುಡುಗಿಯರಲ್ಲಿ ಜಾಗೃತಿ ಮೂಡಿಸುವುದು, ಅನಪೇಕ್ಷಿತ ಗರ್ಭಧಾರಣೆ ಮತ್ತು ಅಸುರಕ್ಷಿತ ಗರ್ಭಪಾತಗಳನ್ನು ತಡೆಯುವ ಏಕೈಕ ಮಾರ್ಗವಾಗಿದೆ ಎಂದು ಯುಎನ್​​ಎಫ್​​ಪಿಎ ಪ್ರತಿಪಾದಿಸಿದೆ.

“ಹೆಣ್ಣುಮಕ್ಕಳಿಗೆ ಶಾಲೆಯಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ನೀಡದಿದ್ದರೆ, ಅವಳು ನಿಖರವಾದ ಮಾಹಿತಿಯ ಕೊರತೆಯನ್ನು ಹೊಂದಿರಬಹುದು. ಗರ್ಭಾವಸ್ಥೆಯು ಅವಳ ಡೀಫಾಲ್ಟ್ ಆಯ್ಕೆಯಾಗಿರಬಹುದು ಏಕೆಂದರೆ ಅವಳ ಜೀವನದಲ್ಲಿ ಅವಳಿಗೆ ಕೆಲವು ಅವಕಾಶಗಳು ಮತ್ತು ಆಯ್ಕೆಗಳಿವೆ. ತನ್ನ ಶಿಕ್ಷಣವನ್ನು ಮುಗಿಸಲು ಅವಕಾಶವಿಲ್ಲದೆ, ಉದಾಹರಣೆಗೆ  ಅವಳು ಮಗುವನ್ನು ಹೆರುವುದನ್ನು ಮುಂದೂಡಲು ಕಾರಣವನ್ನು ಕಾಣದೇ ಇರಬಹುದು,” ಎಂದು ಯುಎನ್​​ಎಫ್​​ಪಿಎ ಹೇಳಿದೆ.

ಇದನ್ನೂ ಓದಿ: ಭಾರತದ ದೊಡ್ಡ ಪಕ್ಷ ಗೂಂಡಾಗಿರಿ ನಡೆಸಿದರೆ ಅದು ತಪ್ಪು ಸಂದೇಶ ರವಾನಿಸುತ್ತದೆ, ದೇಶಕ್ಕಾಗಿ ನಾನು ಪ್ರಾಣ ಕೊಡಬಲ್ಲೆ: ಅರವಿಂದ ಕೇಜ್ರಿವಾಲ್

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ