AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುರ್ಖಾ ಹಾಕದೆ ಹೊರಬಂದಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಲಕ್ನೋದಲ್ಲಿ ಬುರ್ಖಾ ಧರಿಸದೆ ಮನೆಯಿಂದ ಹೊರಬಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿ ಶೌಚಾಲಯದ ಗುಂಡಿಯೊಳಗೆ ಹೂತುಹಾಕಿದ್ದಾನೆ. ಫಾರೂಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಐದು ದಿನಗಳ ನಂತರ ಶವಗಳನ್ನು ಪತ್ತೆ ಹಚ್ಚಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬುರ್ಖಾ ಹಾಕದೆ ಹೊರಬಂದಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿದ ವ್ಯಕ್ತಿ
ಅಪರಾಧ ನಡೆದ ಜಾಗ
ನಯನಾ ರಾಜೀವ್
|

Updated on:Dec 17, 2025 | 10:06 AM

Share

ಲಕ್ನೋ, ಡಿಸೆಂಬರ್ 17: ಬುರ್ಖಾ ಧರಿಸದೆ ಮನೆಯಿಂದ ಹೊರಬಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತ್ನಿ ಬುರ್ಖಾ ಧರಿಸದೆ ಹೊರಗೆ ಹೊರಟಿದ್ದಕ್ಕೆ ಆರಂಭವಾದ ಜಗಳ ಕೊಲೆ(Murder)ಯಲ್ಲಿ ಅಂತ್ಯವಾಗಿದೆ. ಫಾರೂಕ್ ಎಂಬಾತ ಮೂವರನ್ನು ಕೊಲೆ ಮಾಡಿ ಹೂತುಹಾಕಿದ್ದಾನೆ.

ಫಾರೂಕ್ ಅವರ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ ಮತ್ತು ಸಹ್ರೀನ್ ಐದು ದಿನಗಳ ಕಾಲ ಕಾಣೆಯಾದ ನಂತರ ಫಾರೂಕ್  ತಂದೆ ದಾವೂದ್ ಎಫ್ಐಆರ್ ದಾಖಲಿಸಿದ್ದರು. ವಿಚಾರಣೆಯ ಸಮಯದಲ್ಲಿ, ಫಾರೂಕ್ ಹೇಳಿಕೆಗಳಲ್ಲಿ ಅನುಮಾನ ಮೂಡುವ ಅಂಶವನ್ನು ಪೊಲೀಸರು ಗಮನಿಸಿದ್ದರು, ಬಳಿಕ ತೀವ್ರ ವಿಚಾರಣೆ ನಡೆಸಿದ್ದರು. ಫಾರೂಕ್ ಅಂತಿಮವಾಗಿ ತನ್ನ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ, ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು, ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಅವರ ಶವಗಳನ್ನು ಅಡಗಿಸಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವಗಳನ್ನು ಹೊರತೆಗೆಯುತ್ತಿರುವ ವಿಡಿಯೋ

ಪೊಲೀಸರು ಶವಗಳನ್ನು ವಶಪಡಿಸಿಕೊಂಡ ನಂತರ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದರು, ಅದರಲ್ಲಿ ಸೆಕ್ಷನ್ 103 (ಕೊಲೆ) ಸೇರಿದೆ. ಬಟ್ಟೆಗಳು ಯಾರ ಜೀವಕ್ಕಿಂತ ಹೆಚ್ಚು ಅಮೂಲ್ಯವಲ್ಲ. ಈ ಕಾರಣಕ್ಕಾಗಿ ಕೊಲೆ ಮಾಡುವ ವ್ಯಕ್ತಿ ಗಂಡನಲ್ಲ, ಅವನು ಅಪರಾಧಿ ಮತ್ತು ಕಠಿಣ ಶಿಕ್ಷೆಗೆ ಅರ್ಹ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಮತ್ತಷ್ಟು ಓದಿ: ಹೈದರಾಬಾದ್​​ನಲ್ಲಿ ಮಲತಂದೆಯಿಂದ 11 ವರ್ಷದ ಬಾಲಕನ ಕೊಲೆ

ಅವರು ಬುರ್ಖಾ ಇಲ್ಲದೆ ಮನೆಯಿಂದ ಹೊರಗೆ ಬಂದಿದ್ದರೂ ಅದು ಪಾಪವಾಗುತ್ತಿರಲಿಲ್ಲ. ಆದರೆ ನಿಮ್ಮ ಕೊಳಕು ಮನಸ್ಥಿತಿ ಎಲ್ಲದಕ್ಕಿಂತ ಹೊಲಸು ಎಂದು ಮತ್ತೊಬ್ಬರು ಹೇಳಿದ್ದಾರೆ. ಅತ್ಯಂತ ದುಃಖಕರ ಸಂಗತಿಯೆಂದರೆ, ಸುರಕ್ಷಿತ ಸ್ಥಳವಾಗಿರಬೇಕಾದ ಮನೆ ಜೀವಗಳನ್ನು ಬಲಿ ಪಡೆವ ಸ್ಥಳವಾಯಿತಲ್ಲಾ ಎಂಬುದೇ ಬೇಸರದ ಸಂಗತಿ, ಕಾನೂನು ಮಾತ್ರವಲ್ಲ, ಸಮಾಜವೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:06 am, Wed, 17 December 25