AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿ, ಹಿಂದೂಗಳ ಶಿರಚ್ಛೇದ ಮಾಡುತ್ತೇವೆ: ಯುಪಿ ಐಎಂಸಿ ನಾಯಕ ಮೊಯಿನ್

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಧ್ಯೆ, ಉತ್ತರ ಪ್ರದೇಶದ ಬರೇಲಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಐಎಂಸಿ ನಾಯಕ ಮೊಯಿನ್ ಸಿದ್ದಿಕಿ(Moin Siddique) ಹಿಂದೂಗಳ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಮ್ಮ ಸರ್ಕಾರ ಬಂದರೆ, ಹಿಂದೂ ಮನೆಗಳಲ್ಲಿ ಒಬ್ಬ ಮನುಷ್ಯನೂ ಉಳಿಯುವುದಿಲ್ಲ ಎಂದು ಮೊಯಿನ್ ಸಿದ್ದಿಕಿ ಅಲಿಯಾಸ್ ಚೋಟಿ ಕಟ್ವಾ ಹೇಳಿದ್ದಾನೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿ, ಹಿಂದೂಗಳ ಶಿರಚ್ಛೇದ ಮಾಡುತ್ತೇವೆ: ಯುಪಿ ಐಎಂಸಿ ನಾಯಕ ಮೊಯಿನ್
ಮೊಯಿನ್
ನಯನಾ ರಾಜೀವ್
|

Updated on: Apr 24, 2025 | 3:33 PM

Share

ಲಕ್ನೋ, ಏಪ್ರಿಲ್ 24: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಧ್ಯೆ, ಉತ್ತರ ಪ್ರದೇಶದ ಬರೇಲಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಐಎಂಸಿ ನಾಯಕ ಮೊಯಿನ್ ಸಿದ್ದಿಕಿ(Moin Siddique) ಹಿಂದೂಗಳ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಮ್ಮ ಸರ್ಕಾರ ಬಂದರೆ, ಹಿಂದೂ ಮನೆಗಳಲ್ಲಿ ಒಬ್ಬನೂ ಉಳಿಯುವುದಿಲ್ಲ ಎಂದು ಮೊಯಿನ್ ಸಿದ್ದಿಕಿ ಅಲಿಯಾಸ್ ಚೋಟಿ ಕಟ್ವಾ ಹೇಳಿದ್ದಾನೆ.

ಮೊಯಿನ್ ಸಿದ್ದಿಕಿಯ ಬೆದರಿಕೆಯ ನಂತರ, ಆ ಪ್ರದೇಶದ ಹಿಂದೂಗಳು ಭಯಭೀತರಾಗಿದ್ದಾರೆ. ಹಿಂದೂ ಮಹಿಳೆಯೊಬ್ಬರ ಮಗನ ಶಿರಚ್ಛೇದ ಮಾಡುವುದಾಗಿ ಐಎಂಸಿ ನಾಯಕ ಮೊಯಿನ್ ಸಿದ್ದಿಕಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಸರ್ಕಾರ ಬದಲಾದ ನಂತರ, ಹಿಂದೂಗಳ ಮನೆಗಳಿಗೆ ನುಗ್ಗಿ ಅವರನ್ನು ಕೊಲ್ಲುತ್ತೇನೆ ಎಂದು ಮೊಯಿನ್ ಹೇಳಿದ್ದಾನೆ. ಹಿಂದೂ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಲೋಧಿ ಟೋಲಾದ ನಿವಾಸಿ ಮಾಯಾ ದೇವಿ ಮಾತನಾಡಿ, ತಮ್ಮ ಮನೆಯ ಬಳಿ ಒಂದು ಪುರಾತನ ಬಾವಿ ಇದೆ. ಈ ಕಾಲೋನಿಯ ಎಲ್ಲಾ ಹಿಂದೂಗಳು ಈ ಬಾವಿಯಲ್ಲಿ ಪೂಜೆ ಸಲ್ಲಿಸುತ್ತಾರೆ ಎಂದು ಅವರು ಹೇಳಿದರು. ಐಎಂಸಿ ನಾಯಕ ಮೊಯಿನ್ ಸಿದ್ದಿಕಿ ಮತ್ತು ಕೆಲವು ಜನರು ಇದನ್ನು ವಿರೋಧಿಸುತ್ತಿದ್ದಾರೆ.

ಮಾಯಾ ದೇವಿಯ ಮಗ ಜಿತು ಈ ವಿಷಯದ ಬಗ್ಗೆ ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರು. ಈ ದೂರಿನ ಬಗ್ಗೆ ಮೊಯಿನ್ ಸಿದ್ದಿಕಿ ದ್ವೇಷ ಕಾರುತ್ತಿದ್ದರು.

ಮತ್ತಷ್ಟು ಓದಿ: ಒಬ್ಬೊಬ್ಬ ಉಗ್ರನನ್ನೂ ಹುಡುಕಿ ಹೊಡೆಯಲಿದ್ದೇವೆ, ತಕ್ಕ ಶಾಸ್ತಿ ಮಾಡಿಯೇ ಸಿದ್ಧ: ಬಿಹಾರದಲ್ಲಿ ಮೋದಿ ಖಡಕ್ ಸಂದೇಶ

ಮೊಯಿನ್ ಸಿದ್ದಿಕಿ ಮಾಯಾ ದೇವಿಯನ್ನು ಸುತ್ತುವರೆದಿದ್ದ, ಮೊಯಿನ್ ಆ ಮಹಿಳೆಗೆ ಬೆದರಿಕೆ ಹಾಕಿ,  ಒಂದು ದಿನ ನಾನು ನಿನ್ನ ಮಗನ ತಲೆಯನ್ನು ಕತ್ತರಿಸಿ ನೇತು ಹಾಕುತ್ತೇನೆ ಎಂದು ಹೇಳಿದ್ದಾಗಿ ಆರೋಪಿಸಲಾಗಿದೆ.

ಮಹಿಳೆಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬರಾದರಿ ಪೊಲೀಸ್ ಠಾಣೆಯ ಉಸ್ತುವಾರಿ ಧನಂಜಯ್ ಪಾಂಡೆ ತಿಳಿಸಿದ್ದಾರೆ.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು