AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಸಾವಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಯುಎಸ್ ಅಧ್ಯಕ್ಷ ಜೋ ಬೈಡೆನ್

'ಪ್ರಧಾನ ಮಂತ್ರಿಯವರ ದುಃಖ ಮತ್ತು ಸಂಕಟದ ಈ ಘಳಿಗೆಯಲ್ಲಿ ಪ್ರಾರ್ಥನೆಗಳೊಂದಿಗೆ ನಾವು ಅವರೊಂದಿಗಿದ್ದೇವೆ,' ಎಂದು ಬೈಡೆನ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಸಾವಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಯುಎಸ್ ಅಧ್ಯಕ್ಷ ಜೋ ಬೈಡೆನ್
ಅಮೆರಿಕ ಅಧ್ಯಕ್ಷ ಜೋ ಬೈಡೆನ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Dec 31, 2022 | 11:40 AM

Share

ವಾಷಿಂಗ್ಟನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ತಾಯಿ ಹೀರಾಬೆನ್ (Heeraben) ಅವರ ಸಾವಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (Joe Biden) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 99-ವರ್ಷ-ವಯಸ್ಸಿನವರಾಗಿದ್ದ ಹೀರಾಬೆನ್ ಅವರು ಗುಜರಾತ್ ಅಹ್ಮದಾಬಾದ್ ನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು. ಶುಕ್ರವಾರ ರಾತ್ರಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿರುವ ಅಧ್ಯಕ್ಷ ಬೈಡೆನ್ ಅವರು, ‘(ಪ್ರಥಮ ಮಹಿಳೆ) ಜಿಲ್ (ಬೈಡನ್) ಮತ್ತು ನಾನು ಪ್ರಧಾನ ಮಂತ್ರಿ (ನರೇಂದ್ರ ಮೋದಿ) @narendramodi ಅವರ ತಾಯಿ ಹೀರಾಬೆನ್ ಮೋದಿ ಅವರ ಸಾವಿಗೆ ಹೃದಯಾಂತರಾಳದ ಸಂತಾಪ ಸೂಚಿಸುತ್ತಿದ್ದೇವೆ,’ ಅಂತ ಹೇಳಿದ್ದಾರೆ.

‘ಪ್ರಧಾನ ಮಂತ್ರಿಯವರ ದುಃಖ ಮತ್ತು ಸಂಕಟದ ಈ ಘಳಿಗೆಯಲ್ಲಿ ಪ್ರಾರ್ಥನೆಗಳೊಂದಿಗೆ ನಾವು ಅವರೊಂದಿಗಿದ್ದೇವೆ,’ ಎಂದು ಬೈಡೆನ್ ಹೇಳಿದ್ದಾರೆ.

ಅಮೆರಿಕದ ನಾನಾ ಭಾಗಗಳಿಂದ ಹೀರಾಬೆನ್ ಅವರ ಸಾವಿಗೆ ಸಂತಾಪ ಸೂಚಿಸಿ ಸಂದೇಶಗಳು ಹರಿದುಬರುತ್ತಿವೆ. ‘ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ಸಾವಿಗೆ ನಾವು ಕಳಕಳಿಯ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ,’ ಎಂದು ಯುಎಸ್ ಇಂಡಿಯಾ ಸ್ಟ್ರಾಟಿಜಿಕ್ ಅಂಡ್ ಪಾರ್ಟನರ್​ಶಿಪ್ ಫೋರಮ್ (ಯು ಎಸ್ ಐ ಎಸ್ ಪಿ ಎಫ್) ಹೇಳಿದೆ.

ಯು ಎಸ್ ಐ ಎಸ್ ಪಿ ಎಫ್ ಅಧ್ಯಕ್ಷ ಮುಕೇಶ್ ಆಘಿ ತಮ್ಮ ಟ್ವೀಟ್ ನಲ್ಲಿ ‘ತಾಯಿಯನ್ನು ಕಳೆದುಕೊಂಡು ಅಪಾರ ದುಃಖದಲ್ಲಿರುವ @narendramodi ಅವರಿಗೆ ಹೃದಯಾಂತರಾಳದ ಸಂತಾಪಗಳು, ನಿಮಗಾಗಿ ನಾವು ಪ್ರಾರ್ಥಿಸುತ್ತಿದ್ದೇವೆ,’ ಎಂದು ಹೇಳಿದ್ದಾರೆ.

ಇದನ್ನೂ ಓದಿ:  NDTV: ಎನ್​ಡಿಟಿವಿಯಲ್ಲಿ ಪ್ರಣಯ್ ರಾಯ್, ರಾಧಿಕಾ ರಾಯ್ ಆಡಳಿತ ಸಂಪೂರ್ಣ ಅಂತ್ಯ; ನಿರ್ದೇಶಕರ ಮಂಡಳಿಗೆ ರಾಜೀನಾಮೆ

ಜನಪ್ರಿಯ ಅಮೆರಿಕನ್-ಆಪ್ರಿಕನ್ ಗಾಯಕಿ ಮೇರಿ ಮಿಲ್ಬೆನ್ ಅವರು ಸಹ ಆಪಾರ ಶೋಕ ವ್ಯಕ್ತಪಡಿಸಿದ್ದಾರೆ. ‘ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೃದಯಾಂತರಾಳದ ಸಂತಾಪಗಳು, ಯುವರ್ ಎಕ್ಸ್ಲೆನ್ಸಿ @narendramodi,’ ಅಂತ ಅವರು ಟ್ವೀಟ್ ಮಾಡಿದ್ದಾರೆ.

‘ನಿಮ್ಮ ತಾಯಿ ಬಿಟ್ಟುಹೋಗಿರುವ ಪರಂಪರೆ, ಆದರ್ಶ-ಸಿದ್ಧಾಂತಗಳು ಸದಾ ನಿಮ್ಮಲ್ಲಿ ಹಾಗೂ ಇಂಡಿಯಾದಲ್ಲಾಗಲೀ ಅಥವಾ ವಿಶ್ವದ ಯಾವುದೇ ಭಾಗದಲ್ಲಾಗಲೀ ನೀವು ಸ್ಪರ್ಶಿಸುವ ಪ್ರತಿಯೊಂದು ಆತ್ಮದಲ್ಲಿ ಜೀವಂತವಾಗಿರಲಿವೆ. ನನ್ನ ಪ್ರಾರ್ಥನೆಗಳಲ್ಲಿ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ,’ ಎಂದು ಮಿಲ್ಬೆನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು

ಜಪಾನ್, ಇಸ್ರೇಲ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ಮೊದಲಾದ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಸೇರಿದಂತೆ ವಿಶ್ವದ ಇನ್ನೂ ಹಲವಾರು ಗಣ್ಯರು ಶುಕ್ರವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿಯ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ