AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದರಸಾದಲ್ಲಿ ಪೆನ್ನಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಪೆನ್ನಿಗಾಗಿ ಶುರುವಾದ ಜಗಳ ಮುಗ್ಧ ಬಾಲಕನನ್ನು ಬಲಿಪಡೆದಿರುವ ಘಟನೆ ಉತ್ತರ ಪ್ರದೇಶದ ಮದರಸಾದಲ್ಲಿ ನಡೆದಿದೆ. ಪೆನ್ನಿನ ಕಾರಣದಂದಾಗಿ ಇಬ್ಬರ ನಡುವೆ ಕಲಹ ನಡೆದಿತ್ತು, ಬಳಿಕ ಆರೋಪಿ ವಿದ್ಯಾರ್ಥಿ ಹೊರಗೆ ಹೋಗಿ ಚಾಕು ಖರೀದಿಸಿ ತಂದು ಆತನ ಹೊಟ್ಟೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ.

ಮದರಸಾದಲ್ಲಿ ಪೆನ್ನಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಮದರಸಾ
ನಯನಾ ರಾಜೀವ್
|

Updated on: Aug 05, 2024 | 9:47 AM

Share

ಮದರಸಾದಲ್ಲಿ ಪೆನ್ನಿಗಾಗಿ ಶುರುವಾದ ಕಲಹ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದಿದೆ. ಮದರಸಾದಲ್ಲಿ ಆಗಸ್ಟ್​ 2ರಂದು 12 ವರ್ಷದ ಬಾಲಕನ ಶವ ಪತ್ತೆಯಾಗಿತ್ತು. ಇದೀಗ ಆತನೊಂದಿಗೆ ಓದುತ್ತಿದ್ದ ವಿದ್ಯಾರ್ಥಿಯೇ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಇಬ್ಬರೂ ಮದರಸಾದಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ವಿಚಾರಣೆ ವೇಳೆ ಅಪ್ರಾಪ್ತ ಆರೋಪಿಯು ಮೃತ ವಿದ್ಯಾರ್ಥಿಯೊಂದಿಗೆ ಜಗಳವಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈ ವೇಳೆ ಇಬ್ಬರೂ ಪರಸ್ಪರ ಬೆದರಿಕೆ ಹಾಕಿದ್ದರು.

ಹೀಗಾಗಿ ಆರೋಪಿ ವಿದ್ಯಾರ್ಥಿಯನ್ನು ಹತ್ಯೆ ಮಾಡಲು ಯೋಜಿಸಿದ್ದ ಎಂದು ಹೆಚ್ಚುವರಿ ಎಸ್ಪಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ. ಘಟನೆ ನಡೆಯುವ ಕೆಲ ದಿನಗಳ ಹಿಂದೆ ಆರೋಪಿಗಳು ಮಾರುಕಟ್ಟೆಯಿಂದ ಚಾಕು ಖರೀದಿಸಿ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟಿದ್ದ.

ಘಟನೆಗೆ ಬಳಸಿದ್ದ ಚಾಕು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬಲರಾಂಪುರ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ತುಳಸಿಪುರ ಇಟ್ವಾ ರಸ್ತೆಯಲ್ಲಿರುವ ಜಾಮಿಯಾ ನೈಮಿಯಾನ್ ಇರ್ವಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಓದಿ: ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲೇ ಅಳಿಯನ ಹತ್ಯೆ; ಕೃತ್ಯವೆಸಗಿದ್ದು ಅಮಾನತುಗೊಂಡ ಪಂಜಾಬ್ ಪೊಲೀಸ್ ಎಐಜಿ

ಆಗಸ್ಟ್ 2ರಂದು ಜಾಮಿಯಾ ನೈಮಿಯಾನ್​ ಕ್ಲಾಸ್​ನ ಬೆಂಚ್ ಮೇಲೆ ವಿದ್ಯಾರ್ಥಿಯ ಶವ ಬಿದ್ದಿತ್ತು. ಈ ಪ್ರಕರಣದಲ್ಲಿ ಪ್ರಾಂಶುಪಾಲರು, ಶಿಕ್ಷಕ ಸೇರಿದಂತೆ 7 ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವಿಚಾರದಲ್ಲಿ ಹಲವು ಮಕ್ಕಳನ್ನೂ ವಿಚಾರಣೆಗೊಳಪಡಿಸಲಾಗಿದೆ.

ಮೃತರು ಛತ್ರ ಪೊಲೀಸ್ ಠಾಣೆ ವ್ಯಾಪ್ತಿಯ ಭಗವಾನ್‌ಪುರ ಗ್ರಾಮದ ನಿವಾಸಿಯಾಗಿದ್ದಾರೆ. 3 ತಿಂಗಳ ಹಿಂದೆಯಷ್ಟೇ ಮದರಸಾದಲ್ಲಿ ಪ್ರವೇಶ ಪಡೆದಿದ್ದರು.

ಅಪ್ರಾಪ್ತ ಆರೋಪಿಯು ಪೊಲೀಸರಿಗೆ ಒಂದು ವಾರದ ಹಿಂದೆ ಮೃತ ವಿದ್ಯಾರ್ಥಿಯಿಂದ ಪೆನ್ ಕೇಳಿದ್ದಾಗಿ ತಿಳಿಸಿದ್ದಾನೆ. ಆದರೆ ಆತ ಪೆನ್ನು ಕೊಟ್ಟಿರಲಿಲ್ಲ, ಇದರಿಂದಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿತ್ತು. ಈ ಜಗಳದಲ್ಲಿ ಇಬ್ಬರೂ ಪರಸ್ಪರ ಕೊಲೆ ಬೆದರಿಕೆ ಹಾಕಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ