ಮೊಬೈಲ್ ಚಾರ್ಜ್ಗೆ ಹಾಕುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟ ಬಾಲಕ, ಆತನನ್ನು ರಕ್ಷಿಸಲು ಹೋದ ತಾಯಿಯೂ ಸಾವು
ಮೊಬೈಲ್ ಚಾರ್ಜ್ಗೆ ಇಡುವ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನೊಬ್ಬ ಮೃತಪಟ್ಟಿದ್ದು, ಆತನ್ನು ರಕ್ಷಿಸಲು ಹೋದ ತಾಯಿಯು ಕೂಡ ಕೊನೆಯುಸಿರೆಳೆದಿದ್ದಾರೆ
ಮೊಬೈಲ್ ಚಾರ್ಜ್ಗೆ ಇಡುವ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನೊಬ್ಬ ಮೃತಪಟ್ಟಿದ್ದು, ಆತನ್ನು ರಕ್ಷಿಸಲು ಹೋದ ತಾಯಿಯು ಕೂಡ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಭವಾನಿಪುರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ತಾಯಿ-ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಮಹೇಶ್ ಪಾಂಡೆ ತಿಳಿಸಿದ್ದಾರೆ.
ರೋಹಿತ್ ಜೈಸ್ವಾಲ್ (15) ರಾತ್ರಿ ತನ್ನ ತಾಯಿ ರಾಮ್ ಸಹೇಲಿಯೊಂದಿಗೆ ತಮ್ಮ ಮನೆಯೊಳಗೆ ಮಲಗಿದ್ದರು. ರಾತ್ರಿ ಎಚ್ಚರಗೊಂಡು ಮೋಬೈಲ್ ಚಾರ್ಜ್ ಮಾಡಲು ಹೋಗಿದ್ದ, ಆ ವೇಳೆ ರೋಹಿತ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ಕಂಡ ತಾಯಿ ಆತನನ್ನು ರಕ್ಷಿಸಲು ಯತ್ನಿಸಿದರಾದರೂ ಆಕೆಯೂ ಕೂಡ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: Belagavi News: ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು, ಅಯ್ಯೋ ವಿಧಿಯೇ!
ಕುಟುಂಬ ಸದಸ್ಯರು ಕೋಣೆಯಲ್ಲಿ ತಾಯಿ-ಮಗ ಇಬ್ಬರೂ ಶವವಾಗಿ ಬಿದ್ದಿರುವುದನ್ನು ಕಂಡರು. ಕುಟುಂಬದವರು ಶವಪರೀಕ್ಷೆಗೆ ನಿರಾಕರಿಸಿ ಅಂತಿಮ ವಿಧಿವಿಧಾನ ನೆರವೇರಿಸಿದರು.
ಮತ್ತೊಂದು ಘಟನೆ: ಮೊಬೈಲ್ ಚಾರ್ಜ್ಗೆ ಹಾಕಿ ಸ್ವಿಚ್ ಆಫ್ ಮಾಡದಿದ್ದ ಚಾರ್ಜರ್ನನ್ನು ಬಾಯಿಗೆ ಹಾಕಿ, ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ಇತ್ತೀಚೆಗೆ ನಡೆದಿದೆ.
ಸಂತೋಷ ಹಾಗೂ ಸಂಜನಾ ದಂಪತಿಯ ಮಗು ದುರಂತ ಅಂತ್ಯಕಂಡಿದೆ. ಮನೆಯಲ್ಲಿ ಪೋಷಕರು ಮೊಬೈಲ್ ಚಾರ್ಜ್ ಹಾಕಿ ನಂತರ ಮೊಬೈಲ್ ತೆಗೆದುಕೊಂಡು ಸ್ವಿಚ್ ಆಫ್ ಮಾಡಿರಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ