ಉತ್ತರ ಪ್ರದೇಶ: 111 ಕಿಲೋಮೀಟರ್ ಕನ್ವರ್ ಮಾರ್ಗ ನಿರ್ಮಾಣಕ್ಕಾಗಿ 1 ಲಕ್ಷ ಮರ ಕಡಿಯಲಾಗಿತ್ತೇ?

ನ್ಯಾಯಮಂಡಳಿಯು ರಚಿಸಿರುವ ಜಂಟಿ ಸಮಿತಿಯು ಭಾರತೀಯ ಅರಣ್ಯ ಸಮೀಕ್ಷೆಯ ನಿರ್ದೇಶಕರು, ಕೇಂದ್ರ ಪರಿಸರ ಸಚಿವಾಲಯದ ಹಿರಿಯ ವಿಜ್ಞಾನಿ, ಯುಪಿ ಮುಖ್ಯ ಕಾರ್ಯದರ್ಶಿ ಮತ್ತು ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಪ್ರತಿನಿಧಿಯನ್ನು ಒಳಗೊಂಡಿರುತ್ತದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರು ಈ ತಿಂಗಳ ಆರಂಭದಲ್ಲಿ ಹೊರಡಿಸಿದ ಆದೇಶದಲ್ಲಿ ಅರ್ಜಿದಾರರು ಜೆಸಿಬಿ ಯಂತ್ರಗಳೊಂದಿಗೆ ಮರಗಳನ್ನು ಕಿತ್ತುಹಾಕಿದ ಛಾಯಾಚಿತ್ರ ಪುರಾವೆಗಳನ್ನು ಸಲ್ಲಿಸಿದ್ದಾರೆ ಎಂದು ಗಮನಿಸಿದರು.

ಉತ್ತರ ಪ್ರದೇಶ: 111 ಕಿಲೋಮೀಟರ್ ಕನ್ವರ್ ಮಾರ್ಗ ನಿರ್ಮಾಣಕ್ಕಾಗಿ 1 ಲಕ್ಷ ಮರ ಕಡಿಯಲಾಗಿತ್ತೇ?
ಕನ್ವಾರಿಯಾ
Follow us
ರಶ್ಮಿ ಕಲ್ಲಕಟ್ಟ
|

Updated on: Aug 13, 2024 | 8:24 PM

ಲಕ್ನೋ ಆಗಸ್ಟ್ 13: ಉತ್ತರ ಪ್ರದೇಶದಲ್ಲಿ (Uttar Pradesh) 111 ಕಿಮೀ ಕನ್ವರ್ ಮಾರ್ಗದ (Kanwar route) ನಿರ್ಮಾಣಕ್ಕಾಗಿ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂಬ ಆರೋಪದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತನಿಖೆಯನ್ನು (National Green Tribunal) ಪ್ರಾರಂಭಿಸಲು ಸಜ್ಜಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತನಿಖೆಗಾಗಿ ನಾಲ್ವರು ಸದಸ್ಯರ ಜಂಟಿ ಸಮಿತಿಯನ್ನು ರಚಿಸಿದ್ದು, ಅಕ್ರಮವಾಗಿ ಮರಗಳನ್ನು ಕಡಿಯದಂತೆ ನೋಡಿಕೊಳ್ಳಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಮುರಾದ್‌ನಗರ (ಗಾಜಿಯಾಬಾದ್ ಜಿಲ್ಲೆ)ಯಿಂದ ಉತ್ತರಾಖಂಡ ಗಡಿ ಬಳಿ ಇರುವ ಪುರ್ಕಾಜಿ (ಮುಜಾಫರ್‌ನಗರ ಜಿಲ್ಲೆ ) ವರೆಗಿನ ಕನ್ವರ್ ರಸ್ತೆ ನಿರ್ಮಾಣಕ್ಕಾಗಿ ಗಾಜಿಯಾಬಾದ್, ಮೀರತ್ ಮತ್ತು ಮುಜಾಫರ್‌ನಗರದ ಮೂರು ಅರಣ್ಯ ವಿಭಾಗಗಳಾದ್ಯಂತ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಮತ್ತು ಪೊದೆಗಳನ್ನು ಕಡಿಯಲಾಗಿದೆ ಎಂಬ ಆರೋಪದ ಬಗ್ಗೆ ಎನ್‌ಜಿಟಿ ವಿಚಾರಣೆ ನಡೆಸುತ್ತಿದೆ.

ನ್ಯಾಯಮಂಡಳಿಯು ರಚಿಸಿರುವ ಜಂಟಿ ಸಮಿತಿಯು ಭಾರತೀಯ ಅರಣ್ಯ ಸಮೀಕ್ಷೆಯ ನಿರ್ದೇಶಕರು, ಕೇಂದ್ರ ಪರಿಸರ ಸಚಿವಾಲಯದ ಹಿರಿಯ ವಿಜ್ಞಾನಿ, ಯುಪಿ ಮುಖ್ಯ ಕಾರ್ಯದರ್ಶಿ ಮತ್ತು ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಪ್ರತಿನಿಧಿಯನ್ನು ಒಳಗೊಂಡಿರುತ್ತದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರು ಈ ತಿಂಗಳ ಆರಂಭದಲ್ಲಿ ಹೊರಡಿಸಿದ ಆದೇಶದಲ್ಲಿ ಅರ್ಜಿದಾರರು ಜೆಸಿಬಿ ಯಂತ್ರಗಳೊಂದಿಗೆ ಮರಗಳನ್ನು ಕಿತ್ತುಹಾಕಿದ ಛಾಯಾಚಿತ್ರ ಪುರಾವೆಗಳನ್ನು ಸಲ್ಲಿಸಿದ್ದಾರೆ ಎಂದು ಗಮನಿಸಿದರು.

ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠವು, ಇದೇ ಮಾರ್ಗದಲ್ಲಿ ಎಂಟು ಪಥಗಳ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಯುಪಿ ಸರ್ಕಾರದ ಪ್ರಸ್ತಾವನೆಯನ್ನು ಪರಿಸರ ಕಾಳಜಿಯಿಂದಾಗಿ ಹಿಂದೆ ತಿರಸ್ಕರಿಸಲಾಗಿತ್ತು.

ಎಕ್ಸ್‌ಪ್ರೆಸ್‌ವೇ ಗಂಗಾನದಿಯ ಮೇಲ್ಭಾಗದ ಉದ್ದಕ್ಕೂ ಸಸ್ಯವರ್ಗಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ ಮತ್ತು ವನ್ಯಜೀವಿಗಳ ಆವಾಸಸ್ಥಾನಕ್ಕೆ ತೊಂದರೆಯಾಗುತ್ತದೆ ಎಂದು ಹಿಂದಿನ ವರದಿಯು ಒತ್ತಿಹೇಳಿದೆ ಎಂದು ಎನ್‌ಜಿಟಿ ಪೀಠ ಹೇಳಿದೆ. ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಯ ಕಾರ್ಯಸಾಧ್ಯತೆಯನ್ನು ಪ್ರಶ್ನಿಸಿದ ವರದಿಯು ಈಗಾಗಲೇ ಘಾಜಿಯಾಬಾದ್, ಮೀರತ್ ಮತ್ತು ಮುಜಾಫರ್‌ನಗರವನ್ನು ಉತ್ತರಾಖಂಡದೊಂದಿಗೆ NH-58 ಮೂಲಕ ಸಂಪರ್ಕಿಸುವ ಎರಡು ರಸ್ತೆಗಳಿವೆ ಎಂದು ಹೇಳಿದೆ. ಮೇಲಿನ ಗಂಗಾ ಕಾಲುವೆಯ ಎಡದಂಡೆಯಲ್ಲಿ ಕನ್ವರ್ ರಸ್ತೆಯೂ ಇದೆ.

ಹೊಸ ನಿರ್ಧಾರವನ್ನು ತೆಗೆದುಕೊಳ್ಳುವಾಗ, 2010 ರ ಹಿಂದಿನ ವರದಿ ಮತ್ತು ಅದರಲ್ಲಿ ದಾಖಲಿಸಲಾದ ತೀರ್ಮಾನವನ್ನು ಪರಿಗಣಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ನ್ಯಾಯಮಂಡಳಿ ಗಮನಿಸಿತು. ನಂತರ ಎನ್ ಜಿಟಿ ಸಹಾಯಕ ಸಾಲಿಸಿಟರ್ ಜನರಲ್ ಅವರ ಸಲ್ಲಿಕೆಗಳನ್ನು ಪರಿಗಣಿಸಿತು. ಅದರ ಪ್ರಕಾರ ಸುಮಾರು 33,000 ಮರಗಳು ನಿರ್ಮಾಣಕ್ಕಾಗಿ ತೆಗೆಯಲಾಗಿದೆ. ಅದರಲ್ಲಿ 17,450 ಮರಗಳನ್ನು ಈಗಾಗಲೇ ಕತ್ತರಿಸಲಾಗಿದೆ.

ಇದನ್ನೂ ಓದಿ: ಟಿಎಂಸಿ ಸಂಸದ ಸಾಕೇತ್ ಗೋಖಲೆ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ

ಇದನ್ನು ಗಮನಿಸಿದ ನ್ಯಾಯಪೀಠ, ಯೋಜನೆಗೆ ಮೊದಲು ಅಸ್ತಿತ್ವದಲ್ಲಿದ್ದ ಮರಗಳ ಭೂ ನಿರ್ದೇಶಾಂಕಗಳು ಮತ್ತು ಕತ್ತರಿಸಿದ ಮರಗಳ ಭೂ ನಿರ್ದೇಶಾಂಕಗಳು ಅಧಿಕಾರಿಗಳ ಬಳಿ ಲಭ್ಯವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದೇ ಹೋಲಿಕೆಯಿಂದ, ಈ ಪ್ರಕ್ರಿಯೆಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ