UP Accident: ಶಹಜಹಾನ್‌ಪುರದಲ್ಲಿ ಬಸ್​ ಮೇಲೆ ಉರುಳಿಬಿದ್ದ ಲಾರಿ, 11 ಮಂದಿ ಸಾವು, 25 ಮಂದಿಗೆ ಗಾಯ

ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ಲಾರಿಯೊಂದು ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

UP Accident: ಶಹಜಹಾನ್‌ಪುರದಲ್ಲಿ ಬಸ್​ ಮೇಲೆ ಉರುಳಿಬಿದ್ದ ಲಾರಿ, 11 ಮಂದಿ ಸಾವು, 25 ಮಂದಿಗೆ ಗಾಯ
ಅಪಘಾತ

Updated on: May 26, 2024 | 8:23 AM

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತ(Accident)ದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಓವರ್ ಲೋಡ್ ಡಂಪರ್ ನಿಯಂತ್ರಣ ತಪ್ಪಿ ಬಸ್ ಮೇಲೆ ಉರುಳಿಬಿದ್ದು, ಅಪಘಾತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇವರೆಲ್ಲರೂ ಉತ್ತರ ಪ್ರದೇಶದ ಸೀತಾಪುರದಿಂದ ಉತ್ತರಾಖಂಡದ ಪೂರ್ಣಂಗಿರಿಗೆ ಹೋಗುತ್ತಿದ್ದರು. ಶನಿವಾರ ರಾತ್ರಿ 12.15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ 25 ಭಕ್ತರು ಗಾಯಗೊಂಡಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಬಸ್ ಪ್ರಯಾಣಿಕರು ರಾತ್ರಿ ಶಹಜಹಾನ್‌ಪುರದಲ್ಲಿ ಊಟಕ್ಕೆಂದು ಇಳಿದಿದ್ದರು. ಆಗ ಹಿಂಬದಿಯಿಂದ ಬಂದ ಡಂಪರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಈ ರಸ್ತೆ ಅಪಘಾತದಲ್ಲಿ 25 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮತ್ತಷ್ಟು ಓದಿ: Porsche Accident: ವೇದಾಂತ್​ ತಂದೆಯ ಸೂಚನೆ ಮೇರೆಗೆ ನಾನು ಪ್ಯಾಸೆಂಜರ್​ ಸೀಟ್​ ಅಲ್ಲಿ ಕೂತಿದ್ದೆ ಎಂದ ಡ್ರೈವರ್

ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಇವರೆಲ್ಲರೂ ಉತ್ತರಾಖಂಡದ ಪೂರ್ಣಂಗಿರಿಯಲ್ಲಿರುವ ಮಾತೆಯ ಆಸ್ಥಾನಕ್ಕೆ ಹೋಗುತ್ತಿದ್ದರು. ಪ್ರತಿದಿನ ಮಾತೆಯ ಆಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಸೀತಾಪುರದ ಸಿಂಧೌಲಿಯ ಭಕ್ತರು ಇಲ್ಲಿ ದರ್ಶನಕ್ಕೆ ಹೋಗುತ್ತಿದ್ದರು. ಕೆಲವರು ಬಸ್ಸಿನಲ್ಲಿ ಕುಳಿತಿದ್ದರೆ ಕೆಲವರು ಹೊರಗೆ ಅಡ್ಡಾಡುತ್ತಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us