ಗಂಗಾ ನದಿಯಲ್ಲಿ ಇಫ್ತಾರ್ ಕೂಟ: ಬಿರಿಯಾನಿ ತಿಂದು ಮೂಳೆಗಳನ್ನು ನದಿಗೆ ಎಸೆದ್ರಾ ಮುಸ್ಲಿಂ ಯುವಕರು? 14 ಮಂದಿ ಅರೆಸ್ಟ್

ವಾರಣಾಸಿಯ ಗಂಗಾ ನದಿಯಲ್ಲಿ ಇಫ್ತಿಯಾರ್ ಆಚರಿಸಿದ 14 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ದೂರಿನ ಮೇರೆಗೆ, ದೋಣಿಯ ಮೇಲೆ ಮಾಂಸಾಹಾರ ಸೇವಿಸಿ ಮೂಳೆಗಳನ್ನು ನದಿಗೆ ಎಸೆಯುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳ ಹಕ್ಕುಗಳ ಕುರಿತು ಚರ್ಚೆ ಹುಟ್ಟುಹಾಕಿದೆ.

ಗಂಗಾ ನದಿಯಲ್ಲಿ ಇಫ್ತಾರ್ ಕೂಟ: ಬಿರಿಯಾನಿ ತಿಂದು ಮೂಳೆಗಳನ್ನು ನದಿಗೆ ಎಸೆದ್ರಾ ಮುಸ್ಲಿಂ ಯುವಕರು? 14 ಮಂದಿ ಅರೆಸ್ಟ್
ವಿಡಿಯೋ
Edited By:

Updated on: Mar 17, 2026 | 4:41 PM

ವಾರಣಾಸಿ, ಮಾ.17: ಗಂಗಾ ನದಿಯಲ್ಲಿ ದೋಣಿಯ ಮೇಲೆ ಕುಳಿತು ರಂಜಾನ್ ಉಪವಾಸ ಬಿಡುತ್ತಿದ್ದ (ಇಫ್ತಿಯಾರ್) 14 ಯುವಕರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಮವಾರ ಸಂಜೆ ಪಂಚಗಂಗಾ ಘಾಟ್ ಸಮೀಪದ ದೋಣಿಯೊಂದರಲ್ಲಿ ಈ ಯುವಕರ ತಂಡ ಇಫ್ತಿಯಾರ್ ಕೂಟ ಏರ್ಪಡಿಸಿತ್ತು. ಈ ವೇಳೆ ಅವರು ಆಹಾರ ಸೇವಿಸುತ್ತಿರುವ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾಕ್ಕೆ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ.

ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ರಜತ್ ಜೈಸ್ವಾಲ್ ಅವರು ಕೋತ್ವಾಲಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಪವಿತ್ರ ಗಂಗಾ ನದಿಯ ಮೇಲೆ ದೋಣಿಯಲ್ಲಿ ಕುಳಿತು ಈ ಯುವಕರು ಬಿರಿಯಾನಿ (ಮಾಂಸಾಹಾರ) ಸೇವಿಸುತ್ತಿದ್ದರು. ಬಿರಿಯಾನಿ ಸೇವಿಸಿದ ನಂತರ ಅದರ ಮೂಳೆಗಳನ್ನು ಪವಿತ್ರ ಗಂಗೆಗೆ ಎಸೆಯುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್: ಭಯಾನಕ ದೃಶ್ಯ ವೈರಲ್

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಕೋತ್ವಾಲಿ ಪೊಲೀಸರು, ವಿಡಿಯೋದಲ್ಲಿರುವ 14 ಯುವಕರನ್ನು ಗುರುತಿಸಿ ಬಂಧಿಸಿದ್ದಾರೆ. ಇವರ ಮೇಲೆ “ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ” ಆರೋಪದಡಿ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೀಗ ಈ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪವು ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಹಕ್ಕಿನ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.ರಾಮನವಮಿ ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ಹೆಚ್ಚುತ್ತಿರುವ ಅವಧಿಯಲ್ಲಿ ಈ ಬಂಧನಗಳು ನಡೆದಿದ್ದು, ವಾರಣಾಸಿಯ ಸೂಕ್ಷ್ಮ ರಾಜಕೀಯ ವಾತಾವರಣವು ಪೊಲೀಸರ ಪ್ರತಿಕ್ರಿಯೆಯ ಸಮಯ ಮತ್ತು ಪ್ರಮಾಣದ ಮೇಲೆ ಪ್ರಭಾವ ಬೀರಿದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us