
ಸೋನಿಪತ್, ಆಗಸ್ಟ್ 06:: ಒಂದು ಕಾಲದಲ್ಲಿ ಮುಂಬೈನ ಬೃಹತ್ ಜವಳಿ ಉದ್ಯಮದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ವ್ಯಕ್ತಿ, ತನ್ನ ಜೀವನದ ಕಡೆಗಾಲದಲ್ಲಿ ವೃದ್ಧಾಶ್ರಮದಲ್ಲಿ ಒಂಟಿಯಾಗಿ ಪ್ರಾಣ ಬಿಡುವ ಪರಿಸ್ಥಿತಿ ಬಂದೊದಗಿತ್ತು. ಎಂದು ಯಾರೂ ಊಹಿಸಿರಲಿಲ್ಲ. ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ನಿಧನರಾದ 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಅವರ ದಾರುಣ ಅಂತ್ಯ, ಇಂದಿನ ಆಧುನಿಕ ಸಮಾಜದಲ್ಲಿ ಹೆತ್ತವರ ಸ್ಥಾನಮಾನ ಹಾಗೂ ನಶಿಸುತ್ತಿರುವ ಸೋದರ-ಕುಟುಂಬ ಸಂಬಂಧಗಳ ಕಠೋರ ವಾಸ್ತವಕ್ಕೆ ಕನ್ನಡಿ ಹಿಡಿದಿದೆ.
ಶಿವಚರಣ್ ಗುಪ್ತಾ ಅವರು ಮುಂಬೈನಲ್ಲಿ ಯಶಸ್ವಿ ಜವಳಿ ಉದ್ಯಮಿಯಾಗಿದ್ದರು. ಆದರೆ, ಕಾಲಕ್ರಮೇಣ ವ್ಯವಹಾರದಲ್ಲಾದ ಹಿನ್ನಡೆ ಮತ್ತು ಕುಟುಂಬದ ದೂರದಿಂದಾಗಿ ಅವರು ತಮ್ಮ ಪತ್ನಿಯೊಂದಿಗೆ ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮಕ್ಕೆ ಬಂದು ಸೇರಿದ್ದರು.
ಸುಮಾರು ಎರಡು ವರ್ಷಗಳ ಹಿಂದೆ ಅವರ ಪತ್ನಿಯೂ ಅದೇ ವೃದ್ಧಾಶ್ರಮದಲ್ಲಿ ನಿಧನರಾಗಿದ್ದರು. ಪತ್ನಿಯ ಅಗಲಿಕೆಯ ನಂತರ ಸಂಪೂರ್ಣವಾಗಿ ಒಂಟಿಯಾಗಿದ್ದ ಶಿವಚರಣ್, ಕಳೆದ ಮೂರು ವರ್ಷಗಳಿಂದ ವೃದ್ಧಾಶ್ರಮವನ್ನೇ ತಮ್ಮ ಮನೆಯಾಗಿಸಿಕೊಂಡಿದ್ದರು.
ಮುಂಬೈಗೆ ಕೊಂಡೊಯ್ಯಲು ನಿರಾಕರಣೆ: ಶಿವಚರಣ್ ನಿಧನರಾದ ತಕ್ಷಣ ವೃದ್ಧಾಶ್ರಮದ ಆಡಳಿತ ಮಂಡಳಿಯು ಮುಂಬೈನಲ್ಲಿ ನೆಲೆಸಿರುವ ಅವರ ಮೂವರು ಹೆಣ್ಣುಮಕ್ಕಳನ್ನು ಸಂಪರ್ಕಿಸಿತು. ಆದರೆ, ಮೃತದೇಹವನ್ನು ಮುಂಬೈಗೆ ತರಲು ಅಥವಾ ತಾವು ಸೋನಿಪತ್‌ಗೆ ಬರಲು ಹೆಣ್ಣುಮಕ್ಕಳು ನಿರಾಕರಿಸಿದರು.ಕೊನೆಗೆ ಆನ್‌ಲೈನ್ ಮೂಲಕ 5,100 ರೂ. ಕಳುಹಿಸಿದ ಮಕ್ಕಳು, ಸೋನಿಪತ್‌ನಲ್ಲೇ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸುವಂತೆ ಆಡಳಿತ ಮಂಡಳಿಗೆ ವಿನಂತಿಸಿದರು.
ವೃದ್ಧಾಶ್ರಮದ ನಿರ್ದೇಶಕ ಆನಂದ್ ಕುಮಾರ್ ಅವರು ತಾವೇ ನಿಂತು ಅಂತ್ಯಕ್ರಿಯೆಯ ವ್ಯವಹಾರಗಳನ್ನು ನೆರವೇರಿಸಿ, ಹೆಣ್ಣುಮಕ್ಕಳಿಗೆ ವೀಡಿಯೊ ಕರೆ ಮೂಲಕ ಪ್ರಕ್ರಿಯೆಯನ್ನು ತೋರಿಸಿದರು. ತಂದೆಯ ಚಿತೆ ಉರಿಯುತ್ತಿದ್ದಾಗ ಫೋನ್‌ನಲ್ಲಿದ್ದ ಮಗಳು, “ಈ ಅಂತ್ಯಕ್ರಿಯೆ ಮುಗಿಯಲು ಇನ್ನು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?” ಎಂದು ಪದೇ ಪದೇ ಪ್ರಕ್ರಿಯೆಯ ಸಮಯದ ಕುರಿತು ಕೇಳುತ್ತಿದ್ದುದು ಅಲ್ಲಿದ್ದವರ ಕಣ್ಣುಗಳಲ್ಲಿ ನೀರು ತರಿಸಿತು. ಚಿತಾಭಸ್ಮವನ್ನು ಸಂಗ್ರಹಿಸಲು ಬರಬೇಕೆಂದು ಕೇಳಿಕೊಂಡಾಗಲೂ, “‘ನೋಡೋಣ, ಆದ್ರೆ ಬರ್ತೀವಿ ಎಂಬ ಉತ್ತರ ನೀಡಿದ್ದಾರೆ.
ವಿಡಿಯೋ
What’s even the point of life if you can’t be there for your parents’ last rites ? video from Sonipat Imagine attending the funeral of the people who raised you stood by you your whole life through a video call. No one should ever have to go through this. pic.twitter.com/qrAqOYFWzT
— Nikhil saini (@iNikhilsaini) August 5, 2026
ಈ ಘಟನೆ ಹೊರಬೀಳುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೆತ್ತ ತಂದೆ-ತಾಯಿಯನ್ನು ಕಡೆಗಣಿಸುವ ಇಂತಹ ಮಕ್ಕಳು ಯಾರಿಗೂ ಬೇಡ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ‘ಹಿರಿಯ ನಾಗರಿಕರ ಮತ್ತು ಪೋಷಕರ ಪೋಷಣೆ ಹಾಗೂ ಕಲ್ಯಾಣ ಕಾಯ್ದೆ-2007’ ಜಾರಿಯಲ್ಲಿದ್ದರೂ, ಅನೇಕ ವೃದ್ಧರು ಮಕ್ಕಳಿಂದ ಕಾನೂನಾತ್ಮಕ ಅಥವಾ ಭಾವನಾತ್ಮಕ ಬೆಂಬಲ ಸಿಗದೆ ವೃದ್ಧಾಶ್ರಮಗಳಲ್ಲಿ ಕಳೆಯುವಂತಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Thu, 6 August 26