ಮುಂಬೈ: ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಹಕ್ಕಿಯನ್ನು ಕಾಪಾಡಲು ಹೋದವರೇ ದುರಂತ ಅಂತ್ಯ ಕಂಡು ಘಟನೆ ಮುಂಬೈನಲ್ಲಿ ನಡೆದಿದೆ. ಬಾಂದ್ರಾ-ವರ್ಲಿ ಸೀ ಲಿಂಕ್ ರಸ್ತೆಯಲ್ಲಿ (Bandra-Worli Sea Link Road) ಗಾಯಗೊಂಡ ಪಕ್ಷಿಯನ್ನು ರಕ್ಷಿಸಲು ಕಾರಿನಿಂದ ಇಳಿದ 43 ವರ್ಷದ ಉದ್ಯಮಿ ಮತ್ತು ಅವರ ಚಾಲಕನಿಗೆ ಹಿಂದಿನಿಂದ ವೇಗವಾಗಿ ಬಂದ ಟ್ಯಾಕ್ಸಿ ಡಿಕ್ಕಿ ಹೊಡೆದ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಅಪಘಾತದ (Accident) ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇಂದು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮೇ 30ರಂದು ಮಧ್ಯಾಹ್ನ ಉದ್ಯಮಿ ಅಮರ್ ಮನೀಷ್ ಜರಿವಾಲಾ ಅವರು ನೆಪಿನ್‌ಸಿಯಾ ರಸ್ತೆಯ ನಿವಾಸಿ ಮಲಾಡ್ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಬಾಂದ್ರಾ ವರ್ಲಿ ಸೀ ಲಿಂಕ್ ಮಾರ್ಗದಲ್ಲಿ ಅವರ ಕಾರಿಗೆ ಒಂದು ಹದ್ದು ಡಿಕ್ಕಿ ಹೊಡೆದಿತ್ತು ಕಾರಿಗೆ ಗುದ್ದಿದ್ದರಿಂದ ಆ ಹಕ್ಕಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿತ್ತು. ಮಾನವೀಯ ದೃಷ್ಟಿಯಿಂದ ಆ ಹಕ್ಕಿಯನ್ನು ಕಾಪಾಡಲು ರಸ್ತೆ ಮಧ್ಯದಲ್ಲೇ ಕಾರು ನಿಲ್ಲಿಸಿ ಇಳಿದ ಅಮರ್ ಮನೀಶ್ ಜರಿವಾಲಾ ಎಂಬ ಉದ್ಯಮಿ ಪಕ್ಷಿಯನ್ನು ಮೇಲೆತ್ತಿ ಕಾರಿನಲ್ಲಿ ಕರೆದುಕೊಂಡು ಹೋಗಲು ಕಾರಿನತ್ತ ಬರುತ್ತಿದ್ದರು. ಅವರಿಗೆ ಸಹಾಯ ಮಾಡಲು ಅವರ ಕಾರಿನ ಚಾಲಕ ಸುಂದರ್ ಕಾಮತ್ ಕೂಡ ಕೆಳಗೆ ಇಳಿದಿದ್ದರು.
ಇದನ್ನೂ ಓದಿ: Shocking Video: ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಅಳಿಯನಿಗೆ ಗುಂಡು ಹಾರಿಸಿ ಕೊಂದ ಮಾವ; ಶಾಕಿಂಗ್ ವಿಡಿಯೋ ವೈರಲ್
ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ಯಾಕ್ಸಿ ಜರಿವಾಲಾ ಮತ್ತು ಅವರ ಡ್ರೈವರ್ ಶ್ಯಾಮ್ ಸುಂದರ್ ಕಾಮತ್‌ಗೆ ಡಿಕ್ಕಿ ಹೊಡೆದಿದೆ. ಆಗ ಅವರಿಬ್ಬರೂ ಹಾರಿ ಬಿದ್ದಿದ್ದಾರೆ. ಬೇರೆ ವಾಹನದವರು ಅವರಿಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದು, ಜರಿವಾಲಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವಾಗಲೇ ಡ್ರೈವರ್ ಕಾಮತ್ ಕೂಡ ಸಾವನ್ನಪ್ಪಿದ್ದಾರೆ.
What a tragedy. This is Mumbai’s Bandra Worli Sea Link pic.twitter.com/VSTQz27vqY
— Singh Varun (@singhvarun) June 10, 2022
ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, 43 ವರ್ಷದ ಅಮರ್ ಮನೀಶ್ ಜರಿವಾಲಾ ಅವರು ಮೇ 30ರಂದು ಬಾಂದ್ರಾ-ವರ್ಲಿ ಸೀ ಲಿಂಕ್ ಮಾರ್ಗವಾಗಿ ಮಲಾಡ್‌ಗೆ ಹೋಗುತ್ತಿದ್ದಾಗ ಅವರ ಕಾರಿಗೆ ಹದ್ದು ಡಿಕ್ಕಿ ಹೊಡೆದಿತ್ತು. ಜರಿವಾಲಾ ತನ್ನ ಚಾಲಕ ಶ್ಯಾಮ್ ಸುಂದರ್ ಕಾಮತ್‌ಗೆ ಕಾರನ್ನು ನಿಲ್ಲಿಸಲು ಹೇಳಿದರು. ಆ ಗಾಯಗೊಂಡ ಪಕ್ಷಿಯನ್ನು ರಕ್ಷಿಸಲು ಇಬ್ಬರೂ ಹೋದಾಗ ಈ ಅಪಘಾತ ಸಂಭವಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Sat, 11 June 22