Bird Flu: ಭಾರತದಲ್ಲಿ 5 ವರ್ಷಗಳ ಬಳಿಕ ಮಾನವನಲ್ಲಿ ಪತ್ತೆಯಾಯ್ತು ಹಕ್ಕಿಜ್ವರ, ಇದು ಎರಡನೇ ಪ್ರಕರಣ

ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿನಲ್ಲಿ H9N2 ವೈರಸ್‌ನಿಂದ ಉಂಟಾದ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಫೆಬ್ರವರಿಯಲ್ಲಿ ನಿರಂತರ ತೀವ್ರವಾದ ಉಸಿರಾಟದ ಸಮಸ್ಯೆಗಳು, ಅಧಿಕ ಜ್ವರ ಮತ್ತು ಹೊಟ್ಟೆಯ ಸೆಳೆತದಿಂದಾಗಿ ರೋಗಿಯನ್ನು ಸ್ಥಳೀಯ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿತ್ತು.

Bird Flu: ಭಾರತದಲ್ಲಿ 5 ವರ್ಷಗಳ ಬಳಿಕ ಮಾನವನಲ್ಲಿ ಪತ್ತೆಯಾಯ್ತು ಹಕ್ಕಿಜ್ವರ, ಇದು ಎರಡನೇ ಪ್ರಕರಣ
ಹಕ್ಕಿಜ್ವರ
Follow us
ನಯನಾ ರಾಜೀವ್
|

Updated on:Jun 12, 2024 | 10:15 AM

ಭಾರತದಲ್ಲಿ ಐದು ವರ್ಷಗಳ ಬಳಿಕ ವ್ಯಕ್ತಿಯೊಬ್ಬರಲ್ಲಿ ಹಕ್ಕಿಜ್ವರ(Bird Flu) ಪತ್ತೆಯಾಗಿದೆ. ಇದು ಇಲ್ಲಿಯವರೆಗಿನ ಎರಡನೇ ಪ್ರಕರಣವಾಗಿದೆ. 4 ವರ್ಷದ ಮಗು ಹಕ್ಕಿ ಜ್ವರದಿಂದ ಬಳಲುತ್ತಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ದೃಢಪಡಿಸಿದೆ. H9N2 ವೈರಸ್‌ನಿಂದ ಉಂಟಾಗುವ ಹಕ್ಕಿ ಜ್ವರದಿಂದ ಮಾನವ ಸೋಂಕಿನ ಪ್ರಕರಣವನ್ನು ದೃಢಪಡಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿಗೆ ಹಕ್ಕಿ ಜ್ವರ ತಗುಲಿದೆ, ವೈರಸ್‌ನಿಂದ ಬಳಲುತ್ತಿರುವ ಮಗುವನ್ನು ಪಶ್ಚಿಮ ಬಂಗಾಳದ ಸ್ಥಳೀಯ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿತ್ತು. ವೈರಸ್‌ನಿಂದ ಬಳಲುತ್ತಿರುವ ಮಗುವಿಗೆ ಫೆಬ್ರವರಿಯಿಂದ ತೀವ್ರ ಉಸಿರಾಟದ ತೊಂದರೆ, ತೀವ್ರ ಜ್ವರ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈರಸ್‌ನಿಂದ ಬಳಲುತ್ತಿರುವ ಮಗು ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಕೋಳಿಗಳೊಂದಿಗೆ ಸಂಪರ್ಕ ಹೊಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮಗುವಿನ ಕುಟುಂಬದ ಇತರ ಸದಸ್ಯರಲ್ಲಿ H9N2 ವೈರಸ್‌ನ ಲಕ್ಷಣಗಳು ಕಂಡುಬಂದಿಲ್ಲ.

ಈ ವರ್ಷ ಹಕ್ಕಿಜ್ವರದಿಂದ ಮೊದಲ ಸಾವು ಸಂಭವಿಸಿದೆ ಹಕ್ಕಿಜ್ವರ(Bird Flu)ದಿಂದ ವಿಶ್ವದಲ್ಲೇ ಮೊದಲ ಸಾವು ಸಂಭವಿಸಿದೆ, ಮೆಕ್ಸಿಕೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೊರೊನಾಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳುತ್ತಿರುವ ಹಕ್ಕಿಜ್ವರ(Bird Flu) ಅನೇಕ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಇತ್ತೀಚಿನ ವರದಿಗಳಲ್ಲಿ ಹಸುಗಳು ಮತ್ತು ಹಾಲಿನ ಮೂಲಕ ಮನುಷ್ಯರಿಗೆ ಹರಡುವ ಪ್ರಕರಣಗಳು ಅಮೆರಿಕದ ಅನೇಕ ನಗರಗಳಲ್ಲಿ ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಎಚ್​5ಎನ್​1 ವೈರಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ಭಾರತವೂ ಎಚ್ಚರಿಕೆ ನೀಡಿತ್ತು.

ಮತ್ತಷ್ಟು ಓದಿ: Bird Flu Death: ಹಕ್ಕಿಜ್ವರದಿಂದ ವಿಶ್ವದಲ್ಲೇ ಮೊದಲ ಸಾವು, ಭಾರತದ 4 ರಾಜ್ಯಗಳಿಗೆ ಎಚ್ಚರಿಕೆ

H5N1 ವೈರಸ್ ಅನ್ನು ಪಕ್ಷಿ ಜ್ವರ ಎಂದೂ ಕರೆಯುತ್ತಾರೆ. ಈ ತಿಂಗಳ ಆರಂಭದಲ್ಲಿ , ಆಂಧ್ರಪ್ರದೇಶ (ನೆಲ್ಲೂರು ಜಿಲ್ಲೆ), ಮಹಾರಾಷ್ಟ್ರ (ನಾಗ್ಪುರ ಜಿಲ್ಲೆ), ಜಾರ್ಖಂಡ್ (ರಾಂಚಿ ಜಿಲ್ಲೆ) ಮತ್ತು ಕೇರಳ (ಆಲಪ್ಪುಳ, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳು) ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ.

ಹಕ್ಕಿ ಜ್ವರ ಎಂದರೇನು? ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ.

ಹಕ್ಕಿ ಜ್ವರ ಮೊದಲು ಕಾಣಿಸಿಕೊಂಡಿದ್ದೆಲ್ಲಿ? ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.

ಮೊಟ್ಟೆ ಮತ್ತು ಹಾಲಿನಿಂದ ಸೋಂಕು ಹರಡುವುದೇ? ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಸಮಯದಲ್ಲಿ ಮೊಟ್ಟೆಗಳು ಕಟ್ಟುನಿಟ್ಟಾದ ನಿಯಮಗಳು ಮತ್ತು ನೈರ್ಮಲ್ಯ ಪ್ರೋಟೊಕಾಲ್‌ಗಳನ್ನು ಅನುಸರಿಸಲಾಗುತ್ತದೆ. ಇದು ಮಾಲಿನ್ಯದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನೀವು ಮನೆಯಲ್ಲಿ ಅವುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದೇ ಬಹಳ ಮುಖ್ಯವಾಗಿದೆ. ಅದನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅದರ ಹಳದಿ ಅಂಶ ಕೂಡ ಹಸಿಯಾಗಿರಬಾರದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:15 am, Wed, 12 June 24

ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ