ಲೋಕಸಭೆಯಲ್ಲಿ ಇಂದು ಊಟದ ವಿರಾಮ ನಿರಾಕರಿಸಿದ ಸ್ಪೀಕರ್ ಓಂ ಬಿರ್ಲಾ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ದೋಷಾರೋಪ ಪಟ್ಟಿ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚಿನ ಹಿಂಸಾಚಾರ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯಿಂದಾಗಿ ಕಳೆದ ವಾರ ಲೋಕಸಭೆಯ ಕಲಾಪಗಳ ಮೇಲೆ ಭಾರೀ ಪರಿಣಾಮ ಬೀರಿತ್ತು.
ನವದೆಹಲಿ: ಕಲಾಪ ಮುಂದೂಡಿಕೆಯಿಂದಾಗಿ ವ್ಯರ್ಥವಾದ ಸಮಯವನ್ನು ಸರಿದೂಗಿಸುವ ಉದ್ದೇಶದಿಂದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಇಂದು (ಡಿಸೆಂಬರ್ 4) ಸದನದಲ್ಲಿ ಸಂಸದರಿಗೆ ‘ಊಟದ ವಿರಾಮ’ ನೀಡಲಿಲ್ಲ. ಅದಾನಿ ದೋಷಾರೋಪ ಪಟ್ಟಿ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚಿನ ಹಿಂಸಾಚಾರ ಮತ್ತು ಇತರ ವಿಷಯಗಳ ಕುರಿತು ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಕಳೆದ ವಾರ ಲೋಕಸಭೆಯ ಕಲಾಪಗಳಿಗೆ ಅಡ್ಡಿಯಾಗಿತ್ತು.
ಇಂದು ಸದನದಲ್ಲಿ ಭೋಜನ ವಿರಾಮ ಇರುವುದಿಲ್ಲ, ಇದರಿಂದ ಕಲಾಪದ ಮುಂದೂಡಿಕೆಯಿಂದ ಕಳೆದುಹೋದ ಸಮಯವನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಬಹುದು ಎಂದು ಲೋಕಸಭೆ ಸ್ಪೀಕರ್ ಹೇಳಿದ್ದಾರೆ. ಒಂದುವೇಳೆ ಕಲಾಪ ಮುಂದೂಡಿಕೆಯಿಂದಾಗಿ ಸದನದ ಕಲಾಪ ಮತ್ತಷ್ಟು ಅಡ್ಡಿಯಾದರೆ ಸಮಯದ ಕೊರತೆಯನ್ನು ಸರಿದೂಗಿಸಲು ವಾರಾಂತ್ಯದಲ್ಲಿ ಕಲಾಪವನ್ನು ಕರೆಯಬೇಕಾಗುತ್ತದೆ ಎಂದು ನಿನ್ನೆ ಸ್ಪೀಕರ್ ಸಂಸದರಿಗೆ ಎಚ್ಚರಿಕೆ ನೀಡಿದ್ದರು.
ಸದನವು ಡಿಸೆಂಬರ್ 14, ಶನಿವಾರ ಬೆಳಿಗ್ಗೆ 11 ಗಂಟೆಗೆ ಸೇರಲಿದೆ. ನೀವು ಪ್ರಶ್ನೋತ್ತರ ಸಮಯದ ಮುಂದೂಡಿಕೆಯನ್ನು ಮುಂದುವರಿಸಿದರೆ, ಅದು ಎಷ್ಟು ದಿನಗಳು ಮುಂದೂಡಿಕೆಯಾಗುತ್ತವೆಯೋ ಅಷ್ಟು ದಿನಕ್ಕೆ ನೀವು ಶನಿವಾರ ಮತ್ತು ಭಾನುವಾರದಂದು ಸಹ ಕಲಾಪಕ್ಕೆ ಹಾಜರಾಗಬೇಕಾಗುತ್ತದೆ ಎಂದು ಬಿರ್ಲಾ ಹೇಳಿದ್ದಾರೆ.
VIDEO | “Today, there will be no lunch break in the House so that the time lost in adjournments can be compensated to some extent,” says Lok Sabha Speaker Om Birla (@ombirlakota).#ParliamentWinterSession
(Source: Third Party)
(Full video available on PTI Videos -… pic.twitter.com/vChOjjaDP4
— Press Trust of India (@PTI_News) December 4, 2024
ಈ ರೀತಿ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಗಲಾಟೆಗಳು ಮತ್ತು ಸದನವನ್ನು ಮುಂದೂಡುವುದರಿಂದ ಕಳೆದುಹೋದ ಸಮಯವನ್ನು ಸರಿದೂಗಿಸಲು ಸ್ಪೀಕರ್ ನಿರ್ಧರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ