AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಣೆಯಾದ 35ವರ್ಷದ ಯೋಧ ನಕ್ಸಲರ ಬಂಧನದಲ್ಲಿ; ‘ನನ್ನ ಪತಿಯನ್ನು ಬಿಡಿಸಿಕೊಡಿ’ ಎಂದು ಕಣ್ಣೀರು ಹಾಕುತ್ತಿರುವ ಪತ್ನಿ

ರಾಕೇಶ್ವರ್​ ಸಿಂಗ್​ ಮೂಲತಃ ಜಮ್ಮುದವರಾಗಿದ್ದು, ಅವರ ಪತ್ನಿ ಅಲ್ಲಿಯೇ ಇದ್ದಾರೆ. ಇವರು ಕಾಣೆಯಾದ ಬೆನ್ನಲ್ಲೇ ಆತಂಕಗೊಂಡಿರುವ ಅವರನ್ನು ಸಿಆರ್​ಪಿಎಫ್​ ಸಿಬ್ಬಂದಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

ಕಾಣೆಯಾದ 35ವರ್ಷದ ಯೋಧ ನಕ್ಸಲರ ಬಂಧನದಲ್ಲಿ; ‘ನನ್ನ ಪತಿಯನ್ನು ಬಿಡಿಸಿಕೊಡಿ’ ಎಂದು ಕಣ್ಣೀರು ಹಾಕುತ್ತಿರುವ ಪತ್ನಿ
ಯೋಧ ರಾಕೇಶ್ವರ್​ ಸಿಂಗ್
Lakshmi Hegde
|

Updated on: Apr 05, 2021 | 6:27 PM

Share

ಚತ್ತೀಸ್​ಗಡ್​ನಲ್ಲಿ ಕೆಂಪು ಉಗ್ರರ ಗುಂಡಿಗೆ 22 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ. ಅದರಲ್ಲಿ 35ವರ್ಷದ ಸಿಆರ್​ಪಿಎಫ್​​ ಕಾನ್​ಸ್ಟೆಬಲ್​ ರಾಕೇಶ್ವರ್​ ಸಿಂಗ್​ ಮ್ಯಾನ್ಹಾಸ್ ಕೂಡ ಒಬ್ಬರು. ಶನಿವಾರ ಬಿಜಾಪುರದಲ್ಲಿ ನಡೆದ ಎನ್​ಕೌಂಟರ್​ ಬಳಿಕ ಇವರು ಎಲ್ಲಿಯೂ ಕಾಣಿಸುತ್ತಿಲ್ಲ. ಕಾಣೆಯಾದವರನ್ನು ಹುಡುಕಲು ಭದ್ರತಾ ಪಡೆ ಸಿಬ್ಬಂದಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ.

ಕಾಣೆಯಾದ ಯೋಧ ರಾಕೇಶ್ವರ್​ ಸಿಂಗ್​ ಮ್ಯಾನ್ಹಾಸ್ ಸಿಪಿಐ-ಮಾವೋವಾದಿಗಳ ಬಂಧನದಲ್ಲಿ ಇದ್ದಾರೆಂದು ರಕ್ಷಣಾ ಪಡೆಗೆ ಮಾಹಿತಿ ಸಿಕ್ಕಿದೆ. ಇದನ್ನು ಹೇಳಿದ್ದು ಸ್ಥಳೀಯ ಪತ್ರಕರ್ತ ಎಂದು ಹೇಳಲಾಗಿದೆ. ರಾಕೇಶ್ವರ್​ ಸಿಂಗ್​ ನಕ್ಸಲರಿಂದ ಬಂಧಿತರಾಗಿದ್ದಾರೆಂಬ ಮಾಹಿತಿ ಸಿಕ್ಕಿದ್ದು ನಿಜ. ಆದರೆ ಈ ಬಗ್ಗೆ ಏನೂ ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ನಕ್ಸಲರು ಯಾರನ್ನಾದರೂ ಬಂಧಿಸಿದರೆ, ಅವರ ಬಿಡುಗಡೆಗೆ ಕೆಲವು ಬೇಡಿಕೆಗಳನ್ನು ಮುಂದಿಡುತ್ತಾರೆ. ಆದರೆ ಈ ವರೆಗೆ ನಕ್ಸಲರು ಅಂಥ ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ. ಹಾಗಾಗಿ ರಾಕೇಶ್ವರ್​ ಸಿಂಗ್​ರನ್ನು ಅವರು ಬಂಧಿಸಿದ್ದಾರೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಬೇಕು ಎಂದು ಹೇಳಿವೆ. ಅಷ್ಟೇ ಅಲ್ಲ, ಸ್ಥಳೀಯ ಪತ್ರಕರ್ತರಿಗೆ ಅಪರಿಚಿತ ಕರೆಗಳು ಬರುತ್ತಿದ್ದು, ನಮಗೆ ಯಾರೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ರಕ್ಷಣಾ ಪಡೆಗಳು ಹೇಳಿಕೊಂಡಿವೆ.

ರಾಕೇಶ್ವರ್​ ಸಿಂಗ್​ ನಕ್ಸಲರ ಒತ್ತೆಯಾಳಾಗಿದ್ದಾರೆ ಎಂದು ಕರೆಮಾಡಿದ ಅಪರಿಚಿತ ತನ್ನನ್ನು ತಾನು ಪೀಪಲ್ಸ್ ಲಿಬರೇಶನ್​ ಗ್ವೆರಿಲ್ಲಾ ಆರ್ಮಿಯ ಬೆಟಾಲಿನ್​ 1ರ ಕಮಾಂಡರ್​ ಹಿದ್ಮಾ ಎಂದು ಹೇಳಿಕೊಂಡಿದ್ದಾನೆ. ಆದರೆ ಅದೂ ಕೂಡ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ರಾಕೇಶ್ವರ್​ ಸಿಂಗ್ ಪತ್ನಿಗೆ ಸಿಆರ್​ಪಿಎಫ್​  ಭರವಸೆ ರಾಕೇಶ್ವರ್​ ಸಿಂಗ್​ ಮೂಲತಃ ಜಮ್ಮುದವರಾಗಿದ್ದು, ಅವರ ಪತ್ನಿ ಅಲ್ಲಿಯೇ ಇದ್ದಾರೆ. ಇವರು ಕಾಣೆಯಾದ ಬೆನ್ನಲ್ಲೇ ಆತಂಕಗೊಂಡಿರುವ ಅವರನ್ನು ಸಿಆರ್​ಪಿಎಫ್​ ಸಿಬ್ಬಂದಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಅಲ್ಲದೆ, ಕಾಣೆಯಾದ ಯೋಧ ನಕ್ಸಲರ ಬಂಧನದಲ್ಲಿ ಇದ್ದಾರೆಂದು ಚತ್ತೀಸ್​ಗಡ್​ ಮೂಲದ ಪತ್ರಕರ್ತ ಹೇಳುತ್ತಿದ್ದಾರೆ. ಆದರೆ ನಾವಿದನ್ನು ಖಚಿತಪಡಿಸಿಕೊಳ್ಳುತ್ತೇವೆ. ಅವರಿಗೆ ಏನೂ ತೊಂದರೆ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ತುಂಬಿದ್ದಾರೆ. ನಾಪತ್ತೆಯಾಗಿರುವ ಯೋಧನ ಪತ್ನಿ ಕಣ್ಣೀರು ಹಾಕುತ್ತಿದ್ದು, ತನ್ನ ಪತಿಯನ್ನು ಹುಡುಕಿಕೊಡಲು ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದಾರೆ. ನಕ್ಸಲರು ಅವರನ್ನು ಬಂಧಿಸಿದ್ದರೆ ದಯವಿಟ್ಟು ಬಿಡಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರೀಯ ಮಾಧ್ಯಮವೊಂದರ ಮೂಲಕ ಕೋರಿದ್ದಾರೆ.

ಇದನ್ನೂ ಓದಿ:ಚತ್ತೀಸ್​ಗಡ್​ನಲ್ಲಿ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮ

Chhattisgarh Maoist Attack: ಛತ್ತೀಸ್​ಗಢಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ