ಮತಾಂತರಗೊಂಡು ಪಿಯು ವಿದ್ಯಾರ್ಥಿಯನ್ನು ಮೂರನೇ ಮದುವೆಯಾದ 3 ಮಕ್ಕಳ ತಾಯಿ

ಮಹಿಳೆಯೊಬ್ಬರು ಪಿಯು ವಿದ್ಯಾರ್ಥಿಯನ್ನು ಮೂರನೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದು ಆಕೆಗೆ ಮೂರನೇ ಮದುವೆಯಾಗಿದ್ದು, ಈಗಾಗಲೇ ಮೂವರು ಮಕ್ಕಳಿದ್ದಾರೆ. ಪತಿಗೆ ವಿಚ್ಛೇದನ ನೀಡಿ ಮೂವರು ಮಕ್ಕಳನ್ನು ಬಿಟ್ಟು ಆಕೆ ಬಾಲಕನ ಮನೆಗೆ ಬಂದಿದ್ದಾಳೆ. ಆಕೆ ಬೇರೆ ಧರ್ಮದವಳಾಗಿದ್ದು, ಮತಾಂತರಗೊಂಡು ಆತನನ್ನು ಮದುವೆಯಾಗಿದ್ದಾಳೆ.

ಮತಾಂತರಗೊಂಡು ಪಿಯು ವಿದ್ಯಾರ್ಥಿಯನ್ನು ಮೂರನೇ ಮದುವೆಯಾದ 3 ಮಕ್ಕಳ ತಾಯಿ
ಮದುವೆ -ಸಾಂದರ್ಭಿಕ ಚಿತ್ರ
Image Credit source: Business Standard

Updated on: Apr 10, 2025 | 8:58 AM

ಉತ್ತರ ಪ್ರದೇಶ, ಏಪ್ರಿಲ್ 10: ಮಹಿಳೆಯೊಬ್ಬಳು ಮತಾಂತರ(Conversion)ಗೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಮೂರನೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶ ಅಮ್ರೋಹಾದಲ್ಲಿ ನಡೆದಿದೆ. ಆಕೆಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಮೊದಲು ಶಬ್ನಮ್ ಎಂದು ಕರೆಯಲ್ಪಡುತ್ತಿದ್ದ ಆ ಮಹಿಳೆ ಈಗ ಶಿವಾನಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾಳೆ. ಇದು ಆಕೆಗೆ ಮೂರನೇ ಮದುವೆ.

ಶಿವಾನಿಯು ಪಕ್ಕದ ಮನೆಯ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು, ಆಕೆ ಎರಡನೇ ಗಂಡನಿಗೆ ವಿಚ್ಛೇದನ ನೀಡಿ ಮೂವರು ಹೆಣ್ಣುಮಕ್ಕಳನ್ನು ಆತನ ಕಸ್ಟಡಿಯಲ್ಲಿ ಬಿಟ್ಟು, ಸ್ಥಳೀಯ ದೇವಸ್ಥಾನವೊಂದರಲ್ಲಿ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ.

ಕೆಲವು ದಿನಗಳ ಹಿಂದೆ ಎರಡೂ ಕುಟುಂಬಗಳ ನಡುವೆ ಪಂಚಾಯಿತಿ ನಡೆದಿತ್ತು, ಮಹಿಳೆ ವಯಸ್ಕಳಾಗಿರುವುದರಿಂದ ಅವಳು ಬಯಸಿದ ಸ್ಥಳದಲ್ಲಿ ವಾಸಿಸಲು ಸ್ವತಂತ್ರಳು ಎಂದು ನಿರ್ಧರಿಸಲಾಯಿತು.
ಶಿವಾನಿ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದು, ತನ್ನ ನಿರ್ಧಾರದಿಂದ ತೃಪ್ತಳಾಗಿದ್ದಾಳೆ ಎಂದು ಹೇಳಿದರು. ವಿದ್ಯಾರ್ಥಿ ಕೂಡ ಅದನ್ನೇ ಹೇಳಿದ್ದು, ತಾವು ಸಂತೋಷವಾಗಿದ್ದೇವೆ ಮತ್ತು ಹಸ್ತಕ್ಷೇಪ ಬಯಸುವುದಿಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ
ಆಗಾಗ ಅಜ್ಜಿ ಮನೆಗೆ ಬರುತ್ತಿದ್ದವ ಯುವತಿಯನ್ನೇ ಪಟಾಯಿಸಿ ಮದ್ವೆಯಾದ!
ಅನ್ಯಧರ್ಮದ ಯುವತಿಯರ ಪ್ರೀತಿಸಿ ಮದುವೆಯಾಗಿ: ಹೇಳಿಕೆಗೆ ಬದ್ಧವೆಂದ ಸೂಲಿಬೆಲೆ
ಹುಡುಗಿಯ ಗಂಡನ ಕಥೆಯನ್ನೇ ಮುಗಿಸಿದ ಕಿರಾತಕ ಪ್ರೇಮಿ!
ತುಮಕೂರು: ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಮಹಿಳೆ

ಮತ್ತಷ್ಟು ಓದಿ: ಹುಬ್ಬಳ್ಳಿ: ಮದುವೆ ಬಳಿಕ ಮತಾಂತರಕ್ಕೆ ಒತ್ತಾಯ, ಪತಿ ವಿರುದ್ಧ ಪತ್ನಿ ದೂರು

ಇದಕ್ಕೂ ಮೊದಲು, ಶಬ್ನಮ್ ಅಲಿಗಢದಲ್ಲಿ ವಿವಾಹವಾಗಿದ್ದರು, ಆದರೆ ನಂತರ ದಂಪತಿ ವಿಚ್ಛೇದನ ಪಡೆದರು. ಅವರ ಎರಡನೇ ಮದುವೆ ಸುಮಾರು ಎಂಟು ವರ್ಷಗಳ ಹಿಂದೆ ನಡೆದಿತ್ತು. ಒಂದು ವರ್ಷದ ಹಿಂದೆ, ಅವರ ಪತಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಂಗವಿಕಲರಾದರು, ನಂತರ ಆಕೆಯ ಸಂಬಂಧ ಬಾಲಕನೊಂದಿಗೆ ಶುರುವಾಗಿತ್ತು ಸಂಬಂಧ ಪ್ರಾರಂಭವಾಯಿತು.

ಇಬ್ಬರೂ ಶಾಂತಿಯುತವಾಗಿ ಒಟ್ಟಿಗೆ ಬದುಕಬೇಕೆಂದು ನಾವು ಆಶಿಸುತ್ತೇವೆ ಎಂದು ಬಾಲಕನ ತಂದೆ ತಮ್ಮ ಮಗನ ನಿರ್ಧಾರವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ