ದೆಹಲಿಯಲ್ಲಿ ಏರಿಕೆಯಾಗುತ್ತಿರುವ ಕೊವಿಡ್​ 19; ಹಳದಿ ಅಲರ್ಟ್ ಘೋಷಣೆ, ಶಾಲೆ-ಕಾಲೇಜು ಬಂದ್​

ನಿರ್ಮಾಣ ಕಾಮಗಾರಿ ನಡೆಯುತ್ತದೆ. ಪಬ್ಲಿಕ್​ ಪಾರ್ಕ್​ಗಳು, ಹೊರವಲಯದಲ್ಲಿ ನಡೆಯುವ ಯೋಗ, ಸಲೂನ್​ ಮತ್ತು ಬ್ಯೂಟಿಪಾರ್ಲರ್​ಗಳು ಒಪನ್​ ಇರುತ್ತವೆ.

ದೆಹಲಿಯಲ್ಲಿ ಏರಿಕೆಯಾಗುತ್ತಿರುವ ಕೊವಿಡ್​ 19; ಹಳದಿ ಅಲರ್ಟ್ ಘೋಷಣೆ, ಶಾಲೆ-ಕಾಲೇಜು ಬಂದ್​
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Dec 28, 2021 | 5:25 PM

ದೆಹಲಿಯಲ್ಲಿ ಕೊವಿಡ್​ 19 ಮತ್ತು ಒಮಿಕ್ರಾನ್ ವೈರಾಣುಗಳ ಸೋಂಕಿತರ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ, ನಗರದಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ(Graded Response Action Plan)ಯಲ್ಲಿ ಹಳದಿ ಅಲರ್ಟ್​ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಈ ಹಳದಿ ಅಲರ್ಟ್​ ಘೋಷಣೆಯಾಗಲಿದ್ದು, ಶಾಲೆ, ಕಾಲೇಜುಗಳು, ಜಿಲ್​, ಸ್ಪಾಗಳು ಬಂದ್ ಆಗಲಿವೆ. ಹಾಗೇ, ಮೆಟ್ರೋ, ಬಸ್​ಗಳೆಲ್ಲ ಶೇ.50ರಷ್ಟು ಸಾಮರ್ಥ್ಯದಲ್ಲಿ ಸಂಚರಿಸಲಿವೆ. ದೆಹಲಿಯಲ್ಲಿ 24 ಗಂಟೆಯಲ್ಲಿ 331 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ಹೀಗಾಗಿ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದೆ. 

ನಾಳೆಯಿಂದ ದೆಹಲಿಯಲ್ಲಿ ಯಾವುದೆಲ್ಲ ಕ್ಲೋಸ್? 1. ಸಿನಿಮಾ ಹಾಲ್​, ಮಲ್ಟಿಪ್ಲೆಕ್ಸ್​ಗಳು, ಅಡಿಟೋರಿಯಂಗಳು ಬಂದ್​ 2. ಸ್ಪಾಗಳು, ಜಿಮ್​, ಯೋಗಾ ಸಂಸ್ಥೆಗಳು, ಮನರಂಜನಾ ಪಾರ್ಕ್​ಗಳೂ ಕ್ಲೋಸ್​. 3. ಶಾಲೆ-ಕಾಲೇಜುಗಳು, ತರಬೇತಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳೂ ಕಾರ್ಯನಿರ್ವಹಿಸುವುದಿಲ್ಲ 4. ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು, ಮನರಂಜನಾ ಕಾರ್ಯಕ್ರಮಗಳು, ಸಾರ್ವಜನಿಕ ಹಬ್ಬ ಆಚರಣೆಗಳು ನಿಷಿದ್ಧ.

ಯಾವುದೆಲ್ಲ ಕಾರ್ಯ ನಿರ್ವಹಿಸುತ್ತವೆ? 1.ಹೋಟೆಲ್​ಗಳು ಕಾರ್ಯನಿರ್ವಹಿಸುತ್ತವೆ. ಆದರೆ ಹೋಟೆಲ್​ ಒಳಗೆ ಔತಣಕೂಟದ ಹಾಲ್​, ಕಾನ್ಫರೆನ್ಸ್ ಹಾಲ್​ಗಳು ಕ್ಲೋಸ್ ಇರುತ್ತವೆ. 2. ರೆಸ್ಟೋರೆಂಟ್​ಗಳು ಬೆಳಗ್ಗೆ 8ಗಂಟೆಯಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ ಶೇ.50ರಷ್ಟು ಸಾಮರ್ಥ್ಯಕ್ಕೆ ಅವಕಾಶ. ಹಾಗೇ, ಬಾರ್​ಗೂ ಇದೇ ಅನ್ವಯ ಆಗುತ್ತವೆ. ಆದರೆ ಬಾರ್​ಗಳು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಮಾತ್ರ ತೆರೆದಿರುತ್ತವೆ. 3. ದೆಹಲಿ ಮೆಟ್ರೋ ಕೂಡ ಶೇ.50ರಷ್ಟು ಸೀಟ್​ಗಳ ಸಾಮರ್ಥ್ಯದಲ್ಲಿ ಸಂಚಾರ ಮಾಡುತ್ತದೆ. ಇನ್ನು ದೆಹಲಿಯಿಂದ ಬೇರೆ ರಾಜ್ಯಗಳಿಗೆ ಸಂಚರಿಸುವ ಬಸ್​ಗಳಿಗೂ ಇದೇ ನಿಯಮ ಅನ್ವಯ ಆಗುತ್ತದೆ. 4. ಆಟೋ, ಇ ರಿಕ್ಷಾ, ಟ್ಯಾಕ್ಸಿ, ಸೈಕಲ್​ ರಿಕ್ಷಾಗಳಲ್ಲಿ ಇಬ್ಬರು ಮಾತ್ರ ಪ್ರಯಾಣ ಮಾಡಬಹುದು. 5. ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಈಜುಕೊಳಗಳು ಬಂದ್ ಇರುತ್ತವೆ. ಆದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಬಹುದು. 6. ಖಾಸಗಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5ವರೆಗೆ ಕೆಲಸ ಮಾಡಬಹುದು. ಆದರೆ ಅರ್ಧದಷ್ಟು ಮಾತ್ರ ಉದ್ಯೋಗಿಗಳು ಆಫೀಸ್​ಗೆ ಬರಬೇಕು.

ಇನ್ನುಳಿದಂತೆ ನಿರ್ಮಾಣ ಕಾಮಗಾರಿ ನಡೆಯುತ್ತದೆ. ಪಬ್ಲಿಕ್​ ಪಾರ್ಕ್​ಗಳು, ಹೊರವಲಯದಲ್ಲಿ ನಡೆಯುವ ಯೋಗ, ಸಲೂನ್​ ಮತ್ತು ಬ್ಯೂಟಿಪಾರ್ಲರ್​ಗಳು ಒಪನ್​ ಇರುತ್ತವೆ. ದೆಹಲಿಯಲ್ಲಿ ಇತ್ತೀಚೆಗಷ್ಟೇ ನೈಟ್​ ಕರ್ಫ್ಯೂ ಹೇರಲಾಗಿದೆ. ಹಿಂದೊಮ್ಮೆ ಕರೊನಾ ಭೀಕರತೆ ಕಂಡಿದ್ದ ದೆಹಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮಲ್ಲಿ ಆಕ್ಸಿಜನ್​, ಬೆಡ್​ ವ್ಯವಸ್ಥೆ ಮಾಡಿಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ: Konkani : ಅಚ್ಚಿಗೂ ಮೊದಲು ; ಮಹಾಬಳೇಶ್ವರ ಸೈಲ್ ಅವರ ‘ಅದೃಷ್ಟ’ ಕಾದಂಬರಿ ಇಂದಿನಿಂದ ಲಭ್ಯ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ