AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವರಾಜ ಸ್ಟಾರ್ಟ್ ಆಗಲೇ ಇಲ್ಲ: ರಾಹುಲ್ ಗಾಂಧಿ ವಿರುದ್ಧ ಮತ್ತೊಮ್ಮೆ ಮೋದಿ ವಾಗ್ದಾಳಿ

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ವಿರುದ್ಧ ವಾಗ್ದಾಳಿ ಮಾಡಿದ್ದು ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಸ್ಟಾರ್ಟ್​​ಅಪ್ ರೀತಿಯಲ್ಲಿ ಪ್ರಸ್ತುತ ಪಡಿಸಿತು, ಆದರೆ ಅವರು ಸ್ಟಾರ್ಟ್ ಆಗಲೇ ಇಲ್ಲ ಎಂದು ಮೋದಿ ಹೇಳಿದ್ದಾರೆ.

ಯುವರಾಜ ಸ್ಟಾರ್ಟ್ ಆಗಲೇ ಇಲ್ಲ: ರಾಹುಲ್ ಗಾಂಧಿ ವಿರುದ್ಧ ಮತ್ತೊಮ್ಮೆ ಮೋದಿ ವಾಗ್ದಾಳಿ
ರಾಜ್ಯಸಭೆಯಲ್ಲಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 07, 2024 | 4:52 PM

ದೆಹಲಿ ಫೆಬ್ರುವರಿ 07: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ರಾಜ್ಯಸಭೆಯಲ್ಲಿ (Rajya Sabha) ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯನ್ನು  ಕಾಂಗ್ರೆಸ್ “ಸ್ಟಾರ್ಟ್-ಅಪ್” ಎಂದು ತೋರಿಸಿದ್ದು, ಆದರೆ ಅವರು ನಾನ್ ಸ್ಟಾರ್ಟರ್ ಎಂದಿದ್ದಾರೆ ಮೋದಿ. ರಾಹುಲ್ ಗಾಂಧಿಯನ್ನು ‘ಯುವರಾಜ್’ (ರಾಜಕುಮಾರ) ಎಂದು ಉಲ್ಲೇಖಿಸಿದ ಮೋದಿ, “ಯುವರಾಜನನ್ನು ಸ್ಟಾರ್ಟ್-ಅಪ್ ಎಂದು ಪ್ರಸ್ತುತಪಡಿಸಲಾಗಿದೆ, ಆದರೆ ಅವರು ನಾನ್-ಸ್ಟಾರ್ಟರ್ ಆಗಿಬಿಟ್ಟರು. ಅವರು ಮೇಲೆತ್ತುವುದೂ ಇಲ್ಲ ಪ್ರಾರಂಭಿಸುವುದೂ ಇಲ್ಲ ಎಂದು ಹೇಳಿದ್ದಾರೆ. ಬುಧವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ‘ಧನ್ಯವಾದಗಳ ನಿರ್ಣಯ’ಕ್ಕೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ್ದಾರೆ.

ಸೋಮವಾರ, ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದ ಪ್ರಧಾನಿ, “ಏಕ್ ಹೈ ಪ್ರಾಡಕ್ಟ್ ಬಾರ್-ಬಾರ್ ಲಾಂಚ್ ಕರ್​​ನೇಕೇ ಕೆ ಚಕ್ಕರ್ ಮೇ, ಕಾಂಗ್ರೆಸ್ ಕಿ ದುಕಾನ್ ತಾಲಾ ಲಗ್ನೆ ಕಿ ನೌಬತ್ ಆ ಗಯಿ ಹೈ ( ಅದೇ ಉತ್ಪನ್ನವನ್ನು ಮತ್ತೆ ಮತ್ತೆ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಅಂಗಡಿ ಮುಚ್ಚುವ ಸ್ಥಿತಿಯಲ್ಲಿದೆ)” ಎಂದಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ, ವಿರೋಧ ಪಕ್ಷವು ಹಳೆಯದಾಗಿದ್ದು, ಯಾವುದೇ ರೀತಿಯ ಮೀಸಲಾತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.ಕಾಂಗ್ರೆಸ್‌ನ ಚಿಂತನೆಯು ಹಳೆಯದಾಗಿದೆಯ ಅದು ತನ್ನ ಕೆಲಸವನ್ನು ಹೊರಗುತ್ತಿಗೆ ನೀಡಿದೆ. ಪಕ್ಷದ ಇಂತಹ ಅವನತಿಯಿಂದ ನಾವು ಸಂತೋಷವಾಗಿಲ್ಲ. ಅದಕ್ಕಾಗಿ ನಾವು ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.

“ಕಾಂಗ್ರೆಸ್ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಕತ್ತು ಹಿಸುಕಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿತು. ಕಾಂಗ್ರೆಸ್ ದಲಿತರು, ಹಿಂದುಳಿದವರು, ಬುಡಕಟ್ಟುಗಳ ವಿರುದ್ಧವಾಗಿದೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಅವರಿಗೆ ಯಾವುದೇ ಮೀಸಲಾತಿ ಸಿಗುತ್ತಿರಲಿಲ್ಲ ಎಂದಿದ್ದಾರೆ ಮೋದಿ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸುದೀರ್ಘ ಭಾಷಣದ ಬಗ್ಗೆ ವಾಗ್ದಾಳಿ ನಡೆಸಿದ ಮೋದಿ, ಇಷ್ಟು ಮಾತನಾಡುವ ಸ್ವಾತಂತ್ರ್ಯ ಖರ್ಗೆ ಹೇಗೆ ಬಂತು ಎಂದು ಆಶ್ಚರ್ಯ ಪಡುತ್ತಿದ್ದೇನೆ ಎಂದಿದ್ದಾರೆ. ಆಗ ಇಲ್ಲಿ ಸಾಮಾನ್ಯವಾಗಿ ಬರುವ ಇಬ್ಬರು ಕಮಾಂಡೋಗಳು ಇರುವುದಿಲ್ಲ ಎಂಬುದು ನನಗೆ ಅರಿವಾಯಿತು. ಅಂಪೈರ್‌ಗಳು ಅಥವಾ ಕಮಾಂಡೋಗಳು ಇಲ್ಲದಿರುವುದನ್ನು ಮನಗಂಡ ಖರ್ಗೆ ಜೀ ಅವರು ಫೋರ್, ಸಿಕ್ಸ್ ಬಾರಿಸುತ್ತಲೇ ಇದ್ದರು ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ:ಕಮಾಂಡೋಗಳಿಲ್ಲದೆ ಸದನದಲ್ಲಿ ಖರ್ಗೆ ಸ್ವತಂತ್ರ ಹಕ್ಕಿಯಾಗಿದ್ದಾರೆಂದು ಕಾಲೆಳೆದ ಮೋದಿ

ಬಿಜೆಪಿ ನೀತಿಗಳನ್ನು ಏಕೆ ಪ್ರಶ್ನಿಸುತ್ತಿದ್ದೀರಿ?

ಅಧಿಕಾರದಲ್ಲಿದ್ದಾಗ ಭಾರತದ ಆರ್ಥಿಕತೆಯನ್ನು ಬಲಪಡಿಸುವ ನಿರ್ಧಾರವನ್ನು ತಾವೇ ತೆಗೆದುಕೊಳ್ಳದೇ ಇರುವಾಗ ಬಿಜೆಪಿ ಮತ್ತು ಅದರ ನೀತಿಗಳನ್ನು ಏಕೆ ಪ್ರಶ್ನಿಸುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ತೀವ್ರ ವಾಗ್ದಾಳಿ ನಡೆಸಿದರು. “10 ವರ್ಷಗಳಲ್ಲಿ ನಾವು ದೇಶವನ್ನು 5 ನೇ ಸ್ಥಾನಕ್ಕೆ ತಂದಿದ್ದೇವೆ. ಹೀಗಿರುವಾಗ  ಕಾಂಗ್ರೆಸ್ ಆರ್ಥಿಕತೆಯ ಬಗ್ಗೆ ಬೋಧಿಸಲು ಬಯಸುತ್ತದೆ”ಎಂದಿದ್ದಾರೆ.

“ನಮಗೆ ಪಾಠ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆಯೇ? ಕಾಂಗ್ರೆಸ್ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ತನ್ನದೇ ಉದ್ದೇಶಕ್ಕಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿತು, ನ್ಯಾಯಾಲಯದ ಹೆಚ್ಚಿನ ಭಾಗವನ್ನು ಬಿಟ್ಟುಕೊಟ್ಟ ಕಾಂಗ್ರೆಸ್ … ಸೇನೆಯ ಆಧುನೀಕರಣಕ್ಕೆ ಅವಕಾಶ ನೀಡಲಿಲ್ಲ … ಈಗ ನಮಗೆ ಭದ್ರತೆಯ ಕುರಿತು ಉಪನ್ಯಾಸಗಳನ್ನು ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ‘ದಕ್ಷಿಣ ಭಾರತಕ್ಕೆ ಪ್ರತ್ಯೇಕ ದೇಶ’ ಹೇಳಿಕೆ ಬಗ್ಗೆಯೂ ಉಲ್ಲೇಖಿಸಿದ ಪ್ರಧಾನಿ ಮೋದಿ, “ಉತ್ತರ-ದಕ್ಷಿಣ ವಿಭಜನೆಯನ್ನು” ರಚಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. “ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವವನ್ನು ಕೊಂದಿದೆ. ಚುನಾಯಿತ ಸರ್ಕಾರಗಳನ್ನು ವಿಸರ್ಜಿಸಿದ ಪಕ್ಷವು ದೇಶವನ್ನು ವಿಭಜಿಸಲು ನಿರೂಪಣೆಗಳನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್ ದೇಶವನ್ನು ಒಡೆಯಲು ಪ್ರಯತ್ನಿಸುವವರ ಜೊತೆ ಸೇರಿಕೊಂಡಿದೆ. ಈಗ ದಕ್ಷಿಣವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದೆ” ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Wed, 7 February 24