ಜೇನುತುಪ್ಪಕೊಂದು ಆಡಿಟ್ ಬೇಕೆ ?; ಡಾ ರವಿಕಿರಣ ಪಟವರ್ಧನ ಶಿರಸಿ
ಜೇನು ಹುಳಗಳಿಂದ ನೈಸರ್ಗಿಕವಾಗಿ ತಯಾರಾದಂತಹ ಜೇನು ಹಾಗೂ ಪೇಟೆಯಲ್ಲಿ ಲಭ್ಯವಿರುವ ಜೇನು ಇವುಗಳ ಬಗ್ಗೆ ವಿಸ್ತೃತವಾದ ಅಂತಹ ಒಂದು ಆಡಿಟ್ ಕೇಂದ್ರ ಸರ್ಕಾರ ಯೋಚಿಸಬೇಕಿದೆ.
ಆಡಿಟ್ ಹೇಳುವ ಶಬ್ದ ಇತ್ತೀಚಿಗೆ ಜನಸಾಮಾನ್ಯರಲ್ಲಿ ಹೆಚ್ಚು ಪ್ರಚಲಿತವಾಗಿದೆ. ಜೇನು ಹುಳಗಳಿಂದ ನೈಸರ್ಗಿಕವಾಗಿ ತಯಾರಾದಂತಹ ಜೇನು ಹಾಗೂ ಪೇಟೆಯಲ್ಲಿ ಲಭ್ಯವಿರುವ ಜೇನು ಇವುಗಳ ಬಗ್ಗೆ ವಿಸ್ತೃತವಾದ ಅಂತಹ ಒಂದು ಆಡಿಟ್ ಕೇಂದ್ರ ಸರ್ಕಾರ ಯೋಚಿಸಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಜೇನುತುಪ್ಪದ ಬಗ್ಗೆ ನನಗೆ ಯಾಕೋ ಅನುಮಾನ ಹೆಚ್ಚಾಗಿದೆ ವರ್ಷವೊಂದಕ್ಕೆ ಜೇನು ಹುಳ ಎಷ್ಟು ಜೇನುತುಪ್ಪ ತಯಾರಿಸುತ್ತದೆಯೋ ಅದರ ಸಾವಿರಾರು ಪಟ್ಟು ಹೆಚ್ಚು ಜೇನುತುಪ್ಪ ವಿಕ್ರಿಯಾಗುತ್ತದೆ ಎಂದು ನನಗೆ ಅನುಮಾನ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೇನುತುಪ್ಪ ,ಜೇನು ತಯಾರಿಸುತ್ತದೆ ಎಂದಾದರೆ ಈ ಬಗ್ಗೆ ಕೇಂದ್ರ ಸರ್ಕಾರ ವಿಸ್ತೃತ ಅಭ್ಯಾಸ ಮಾಡುವಂತಹ ಒಂದು ಆಯೋಗದ ರಚನೆ ಮಾಡಿ ಅದನ್ನೇ ಭಾರತೀಯ ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಳ್ಳುವಂತಹ ವಿಚಾರ ಮಾಡಬೇಕು.
ಇತರ ಜಿಲ್ಲೆಗಳಲ್ಲಿ ನನಗೆ ಮಾಹಿತಿ ಇಲ್ಲ ಉತ್ತರ ಕನ್ನಡದಲ್ಲಿಂತು ಹಲವರು ಜೇನು ನಾಶದತ್ತ ಜೇನು ನಾಶದತ್ತ ಅಂತ ಸಾಮಾನ್ಯ ಜನರು ಹೇಳಿದ್ದು ಕೇಳಿದ್ದೇನೆ ಜೇನು ಪೆಟ್ಟಿಗೆ ಜೇನುಗೂಡ ಎಲ್ಲೋ ನೋಡಲಿಕ್ಕೆ ಸಿಗದು ಎಂದು ಜನ ಸಾಮಾನ್ಯ ಜನರು ಆಡಿಕೊಳ್ಳುವುದು ಕೇಳಿದ್ದೇನೆ ಆದರೆ ಜೇನುತುಪ್ಪ ಮಾತ್ರ ವಿಕ್ರಿ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಆಗುತ್ತಿದೆ . ಕೇಂದ್ರ ಸರ್ಕಾರದ ಆಹಾರ ಸುರಕ್ಷತಾ ವ್ಯವಸ್ಥೆಯ ವಿಭಾಗ, ಸಿಬಿಐ ಹಾಗೂ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಯುಗಳ ಸಮನ್ವಯತೆಯೊಂದಿಗೆ ಜೇನು ಹುಳಗಳ ಸಂಖ್ಯೆ ಜೇನು ಗೂಡುಗಳ ಸಂಖ್ಯೆ ಹಾಗೂ ಪೇಟೆಯಲ್ಲಿ ಲಭ್ಯವಿರುವ ಹಾಗೂ ಮಾರಾಟವಾಗುವ ಜೇನುತುಪ್ಪದ ಬಗ್ಗೆ ಒಂದು ವಿಸ್ತೃತವಾದ ಅಂತಹ ತನಿಖೆ ಅವಶ್ಯಕ.
ಇನ್ನು ಒಂದು ಅಂಬೋಣದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಜೇನುಪೆಟ್ಟಿಗೆ ಹಾಗೂ ಅದರ ಇನ್ನಿತರ ಪರಿಕರಗಳನ್ನು ರೈತರಿಗೆ ವಿಶೇಷ ಯೋಜನೆ ಅಡಿಯಲ್ಲಿ ನೀಡುತ್ತಾ ಬಂದಿದೆ ಎಂದು ಕೇಳಿದ್ದೇನೆ ಕಳೆದ ಹತ್ತು ವರ್ಷದಿಂದ ಈ ನೀಡಿರುವ ಸಂಖ್ಯೆಯನ್ನು ಒಮ್ಮೆ ಪರಿಶೀಲಿಸಿದರೆ ಜೇನು ಹುಳ ಹಾಗೂ ಜೇನುಪೆಟ್ಟಿಗೆಗಳಿಂದಲೇ ಕಾಡಿನಲ್ಲಿ ಟ್ರಾಫಿಕ್ ಜಾಮ್ ಆಗಬೇಕಿತ್ತು. ಆದರೆ ಜೇನುಪೆಟ್ಟಿಗೆ ಜೇನು ಹುಳಗಳ ಸಂಖ್ಯೆಯಲ್ಲಿ ಹೆಚ್ಚಾಗದೆ ಮಾರಾಟ ಮಾಡುವ ಬಾಟಲಿಗಳಲ್ಲಿಯ ಜೇನುತುಪ್ಪದ ಪ್ರಮಾಣ ಮಾತ್ರ ಗಣನೀಯವಾಗಿ ಏರಿಕೆಯಾಗಿದೆ.ಈಗ ಕಾಣುವ ಜೇನು ಪೆಟ್ಟಿಗೆಗಳು ಎಷ್ಟು ಎನ್ನುವ ಅನುಮಾನ ನನಗಿಂತ ನಿಮಗೆ ಎದ್ದು ಕಾಣುತ್ತದೆ.
ಜೇನು ಕೃಷಿಕರು ಅಸಲಿ ನಕಲಿ ಎಂಬುದು ಜನಸಾಮಾನ್ಯರಿಗೆ ಈಗಾಗಲೇ ತಿಳಿದಿದೆ ಆದರೆ ಜೇನಿನಿಂದ ಬಂದಂತ ಕೀರ್ತಿ ಪ್ರಶಸ್ತಿ ಹೆಗ್ಗಳಿಕೆ ಇದು ಯಾರ್ಯಾರಿಗೋ ಹೋಗುತ್ತದೆ ಎಂದು ಪ್ರಾಮಾಣಿಕ ಜೇನು ಕೃಷಿಕ ರೈತ ರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ .
ಒಂದು ಅನುಮಾನದಂತೆ ಮನುಷ್ಯ ನಿರ್ಮಿತ ಜೇನು ಹಾಗೂ ಜೇನು ನಿರ್ಮಿತ ಜೇನು ಎಂಬ ಎರಡು ವರ್ಗಗಳನ್ನು ಕೇಂದ್ರ ಆಹಾರ ಸುರಕ್ಷತಾ ಸಂಸ್ಥೆ ಮಾಡಬೇಕಿದೆ ಅಲ್ಲದೆ ಈ ಜೇನಿನ ಬಗ್ಗೆ ವಿಶೇಷ ಟಾಸ್ಕ್ ಫೋರ್ಸ್ ಒಂದನ್ನು ತಯಾರಿಸಿ ಜೇನಿನ ಗುಣಮಟ್ಟದ ಬಗ್ಗೆ ತಾಲೂಕ ಮಟ್ಟದಲ್ಲಿ ಪ್ರಯೋಗಾಲಯಗಳಲ್ಲಿ ಅನಿಶ್ಚಿತ ರೀತಿಯಲ್ಲಿ ಮಾದರಿ ತೆಗೆಯುವ ಮೂಲಕ ಪ್ರತಿ ಮಾರಾಟಕ್ಕೆ ಲಭ್ಯವಿರುವ ಜೇನಿನ ಪರೀಕ್ಷೆ ಆಗಬೇಕಿದೆ.
ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ವಿಶೇಷವಾದಂತಹ ಒಂದು ಸ್ಥಾನ ಇದೆ ಅದರಂತೆ ಯೋಗವಾಹಿ ಎಂಬ ಗುಣವನ್ನು ಜೇನುತುಪ್ಪ ಹೊಂದಿದೆ. ಆದರೆ ಜೇನು ಹುಳದಿಂದ ತಯಾರು ಆಗದಂತಹ ಜೇನುತುಪ್ಪ ರೋಗವಾಹಿ ಗುಣ ಹೊಂದಿದೆ ಎಂದು ನನ್ನ ಅನಿಸಿಕೆ. ಕೊನೆಯದಾಗಿ ನಿಮ್ಮ ನಿಮ್ಮ ವಿಶ್ವಾಸದ ಖಾತ್ರಿಯ ಜೇನು ಕೃಷಿಕರಿಂದಲೇ ನೇರವಾಗಿ ಜೇನನ್ನ ಖರೀದಿಸಿ ಉಪಯೋಗಿಸಿ.
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ