Stridhan law in IPC: ಅಮೂಲ್ಯವಾದ ಸ್ತ್ರೀಧನ ಮಹಿಳೆಯರಿಗೆ ಆಪತ್ಬಾಂಧವ -ಏನೆಲ್ಲಾ ಹಕ್ಕುಗಳಿವೆ ತಿಳಿದುಕೊಳ್ಳಿ

ಅಮೂಲ್ಯವಾದ ಸ್ತ್ರೀಧನ ಎಂಬುದು ಆಕೆಯ ವಿಶೇಷ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅವಳ ವೈವಾಹಿಕ ಸಂಬಂಧದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಹಿಳೆಯು ತನ್ನ ಗಂಡನಿಗೆ ಯಾವುದೇ ಕೊಡುಗೆಯನ್ನು ನೀಡಿದರೂ ಅದನ್ನು ಸಾಲದ ರೂಪದಲ್ಲಿ ಹಿಂದಿರುಗಿಸಬೇಕು ಎಂದೂ ಪ್ರತಿಪಾದಿಸುತ್ತದೆ. ಅಷ್ಟರಮಟ್ಟಿಗೆ ಸ್ತ್ರೀಧನಕ್ಕೆ ಕೋರ್ಟ್​ ಮಾನ್ಯತೆ ಕಲ್ಪಿಸಿದೆ.

Stridhan law in IPC: ಅಮೂಲ್ಯವಾದ ಸ್ತ್ರೀಧನ ಮಹಿಳೆಯರಿಗೆ ಆಪತ್ಬಾಂಧವ -ಏನೆಲ್ಲಾ ಹಕ್ಕುಗಳಿವೆ ತಿಳಿದುಕೊಳ್ಳಿ
ಮಹಿಳೆಯರಿಗೆ ಆಪದ್ಭಾಂದವ ವಾಗುವ ಸ್ತ್ರಿಧನ ಹಕ್ಕುಗಳು
Follow us
|

Updated on:May 25, 2024 | 1:17 PM

ಸ್ತ್ರೀಧನ ಎಂಬುದು ಮಹಿಳೆಯು ತನ್ನ ಮದುವೆಯ ಮೊದಲು, ಮದುವೆಯ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ವಿಧವೆಯಾದ ಸಮಯದಲ್ಲಿ, ಪ್ರಾಥಮಿಕವಾಗಿ ಆಕೆಯ ಪೋಷಕರು, ಸಂಬಂಧಿಕರು ಅಥವಾ ಅತ್ತೆ-ಮಾವನ ಕಡೆಯಿಂದ ಪಡೆಯುವ ಆಭರಣ, ಉಡುಗೊರೆಗಳು, ಹಣ, ಹೂಡಿಕೆಗಳು, ಉತ್ತರಾಧಿಕಾರ, ಗಳಿಕೆಗಳು ಮತ್ತು ಅಥವಾ ಆಸ್ತಿಯನ್ನು ಉಲ್ಲೇಖಿಸುತ್ತದೆ. ಮದುವೆಯಾದ ಮೇಲೆ ವಧು ತನ್ನ ಗಂಡನ ಕುಟುಂಬದ ಚರಾಸ್ತಿಯನ್ನು ಪಡೆದರೆ, ಅದು ಅವಳ ಸ್ತ್ರೀಧನವಾಗುತ್ತದೆ. ಗಂಡನಾದವನಿಗೆ ತನ್ನ ಹೆಂಡತಿಯ ಸ್ತ್ರೀಧನದ (ಮಹಿಳೆಯ ಆಸ್ತಿ) ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಮಹಿಳೆಗೆ ಕಲ್ಪಿಸಿರುವ ಆಸ್ತಿಯ ಮೇಲಿನ ಹಕ್ಕು ವಿಷಯದಲ್ಲಿ ದೃಢವಾಗಿ ಗುರುತಿಸಿದೆ. ಇದು ಆಕೆಯ ವಿಶೇಷ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅವಳ ವೈವಾಹಿಕ ಸಂಬಂಧದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಉಲ್ಲೇಖಸಲಾಗಿದೆ. ಈ ತೀರ್ಪು ಮಹಿಳೆಯ ವಿವಾಹದ ಮೊದಲು ಮತ್ತು ನಂತರದ ಆಸ್ತಿಯ ಮೇಲೆ ಆಕೆಯ ಸಂಪೂರ್ಣ ಅಧಿಕಾರವನ್ನು ಬಲಪಡಿಸುತ್ತದೆ. ಮಹಿಳೆಯು ತನ್ನ ಗಂಡನಿಗೆ ಯಾವುದೇ ಕೊಡುಗೆಯನ್ನು ನೀಡಿದರೂ ಅದನ್ನು ಸಾಲದ ರೂಪದಲ್ಲಿ ಹಿಂದಿರುಗಿಸಬೇಕು ಎಂದೂ ಪ್ರತಿಪಾದಿಸುತ್ತದೆ. ಅಷ್ಟರಮಟ್ಟಿಗೆ ಸ್ತ್ರೀಧನಕ್ಕೆ ಕೋರ್ಟ್​ ಮಾನ್ಯತೆ ಕಲ್ಪಿಸಿದೆ.

ಸುಪ್ರೀಂಕೋರ್ಟ್​ ಇಂತಹ ತೀರ್ಪು ನೀಡುವುದಕ್ಕೆ ಕಾರಣೀಭೂತವಾದ ಪ್ರಕರಣವಾದರೂ ಏನು ಎಂಬುದನ್ನು ನೋಡಿದಾಗ… ಕೇರಳದ ಹಿಂದೂ ವಿವಾಹಿತ ಮಹಿಳೆಯೊಬ್ಬರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ತನ್ನ ಪತಿ ಮಾಡಿದ್ದ ಸಾಲವನ್ನು ತೀರಿಸಲು 89 ಪವನ್ ಚಿನ್ನ ಮತ್ತು 2 ಲಕ್ಷ ರೂ. ನೀಡಿದ್ದೆ. ಅದನ್ನು ವಾಪಸ್​ ಕೊಡಿಸಬೇಕು ಎಂದು ಕೋರಿದ್ದರು. ಅದರಂತೆ ಕೌಟುಂಬಿಕ ನ್ಯಾಯಾಲಯವು ಆಕೆಯ ಪರವಾಗಿ ತೀರ್ಪು ನೀಡಿದ್ದರೂ, ಕೇರಳ ಹೈಕೋರ್ಟ್ ಆಕೆಗೆ ತನ್ನ ಪತಿಯಿಂದ 2 ಲಕ್ಷ ರೂ ಹಣ ಮಾತ್ರವೇ ವಾಪಸ್​ ಪಡೆಯಬಹುದು ಎಂದು ಸೂಚಿಸಿತು.

ಮುಂದೆ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ ತಲುಪಿದಾಗ ಸಂಜೀವ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಸ್ತ್ರೀಧನ ಆಸ್ತಿಯ ಮೇಲೆ ವಿವಾಹಿತ ಮಹಿಳೆಯ ಹಕ್ಕುಗಳನ್ನು ಪುನರ್​​ಸ್ಥಾಪಿಸಿತು. ಸ್ತ್ರೀಧನವು ಮಹಿಳೆಗೆ ಮಾತ್ರವೇ ಸೇರಿದ್ದು ಎಂದು ತೀರ್ಪು ದೃಢಪಡಿಸಿದೆ.

‘ಸ್ತ್ರೀಧನ ಆಸ್ತಿಯು ಹೆಂಡತಿ ಮತ್ತು ಗಂಡನ ಜಂಟಿ ಆಸ್ತಿಯಾಗುವುದಿಲ್ಲ, ಮತ್ತು ಪತಿಯು ಸ್ತ್ರೀಧನದ ಮಾಲೀಕನಾಗಿ ಆ ಆಸ್ತಿಯ ಮೇಲೆ ಯಾವುದೇ ಹಕ್ಕು ಅಥವಾ ಸ್ವತಂತ್ರ ಪ್ರಭುತ್ವವನ್ನು ಹೊಂದುವುದಿಲ್ಲ. ಅಷ್ಟೂ ಸ್ತ್ರೀಧನ ಆಕೆಗಷ್ಟೇ ಸಲ್ಲುತ್ತದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‘ಆಕೆ ತನ್ನ ಸ್ವಂತ ಸಂತೋಷದಿಂದ ಅದನ್ನು ವಿಲೇವಾರಿ ಮಾಡುವ ಹಕ್ಕು ಹೊಂದಿರುತ್ತಾಳೆ’ ಎಂದು ಸೇರಿಸಲಾಗಿದೆ.

ಸಾಮಾನ್ಯವಾಗಿ, ನವ ವಧುವಿನ ಆಭರಣಗಳು ಮತ್ತು ಇತರ ಸ್ತ್ರೀಧನ ವಸ್ತುಗಳನ್ನು ಭದ್ರತಾ ಕಾರಣಗಳಿಗಾಗಿ ಬ್ಯಾಂಕ್ ಲಾಕರ್‌ಗಳಲ್ಲಿ ಇರಿಸಲಾಗುತ್ತದೆ. ವಧು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಆ ಆಭರಣಗಳನ್ನು ಧರಿಸುತ್ತಾರೆ.

ಅನೇಕ ಬಾರಿ, ಪತಿ ಮತ್ತು ಅವರ ಕುಟುಂಬದವರು ಆ ಆಭರಣಗಳು ಮತ್ತು ಇತರ ಸ್ತ್ರೀಧನಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಈ ಎಲ್ಲ ಪರಿಸ್ಥಿತಿಗಳ ಸಮ್ಮುಖದಲ್ಲಿ ಸ್ತ್ರೀಧನದ ಮೇಲಿನ ತಮ್ಮ ಹಕ್ಕುಗಳನ್ನು ಮತ್ತು ಅದರ ಮೇಲೆ ಅವರು ಹೇಗೆ ನಿಯಂತ್ರಣವನ್ನು ಉಳಿಸಿಕೊಳ್ಳಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮಹಿಳೆಯರಿಗೆ ಮುಖ್ಯವಾಗಿದೆ.

Stridhan law for Women- ಸ್ತ್ರೀಧನನ್ನು ಸಂರಕ್ಷಿಸಿಕೊಳ್ಳುವುದು ಹೇಗೆ

ವಿವಾಹಿತ ಮಹಿಳೆಯರು ಸ್ತ್ರೀಧನ ಸ್ವತ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಮತ್ತು ಅದರ ಜೊತೆಗೆ ಸ್ವೀಕರಿಸಿದ ಅಥವಾ ಸ್ವಾಧೀನಕ್ಕೆ ಬಂದ ಸ್ತ್ರೀಧನದ ಲೆಕ್ಕವನ್ನು ನಿರ್ವಹಿಸಬೇಕಾಗುತ್ತದೆ.

ಮಹಿಳೆಯರು ಸ್ತ್ರೀಧನವನ್ನು ತಮ್ಮ ಕಸ್ಟಡಿಯಲ್ಲೇ ಇರಿಸಿಕೊಂಡು, ಪಾಲನೆ ಮಾಡಬೇಕು. ಇಲ್ಲದಿದ್ದರೆ, ಅದನ್ನು ಎಲ್ಲಿ ಸಂಗ್ರಹಿಸಲಾಗಿದೆ ಅಥವಾ ಯಾರ ಸುಪರ್ದಿಗೆ ನೀಡಲಾಗಿದೆ ಎಂಬುದು ತಿಳಿದುಕೊಂಡಿರಬೇಕು. ಯಾರಿಂದಲೂ ದುರುಪಯೋಗ ಆಗದಂತೆ ಅದನ್ನು ತಡೆಯಲು ಅವರು ಅರಿತುಕೊಂಡಿರಬೇಕು.

Also Read: ಮದರಸಾದಲ್ಲಿ ಓದಿದ ವಿದ್ಯಾರ್ಥಿಗೆ IAS ನಲ್ಲಿ 751ನೇ ರ‍್ಯಾಂಕ್‌​​! UPSC ನಲ್ಲಿ ಹೆಚ್ಚು ಹೆಚ್ಚು ಯಶಸ್ಸು ಕಾಣುತ್ತಿರುವ ಯುವ ಮುಸಲ್ಮಾನರು!

ಮಹಿಳೆಯರು ತಮ್ಮ ಸ್ತ್ರೀಧನ ಆಭರಣ ಸ್ವತ್ತುಗಳನ್ನು ಧರಿಸಿರುವ ಛಾಯಾಚಿತ್ರಗಳನ್ನು ಸಾಕ್ಷಿಯಾಗಿ ಬಳಸಬಹುದು. ವಿವಾಹ ಸಂಬಂಧಿ ಚಿತ್ರಗಳು ಮತ್ತು ರಶೀದಿಗಳಂತಹ ಡಿಜಿಟಲ್ ಪುರಾವೆಗಳನ್ನು ಸಂರಕ್ಷಿಸಿಟ್ಟುಕೊಂಡರೆ ಕ್ಷೇಮ ಎಂದು ವಕೀಲರು ಕೋರ್ಟ್​ ತೀರ್ಪನ್ನು ವ್ಯಾಖ್ಯಾನಿಸಿದ್ದಾರೆ.

ಸ್ತ್ರೀಧನದ ಭಾಗವಾಗಿರುವ ಯಾವುದೇ ಆಸ್ತಿಯ ಅಧಿಕಾರ ಪತ್ರವು ಮಹಿಳೆಯ ಹೆಸರಿನಲ್ಲಿರಬೇಕು ಎಂದೂ ವಕೀಲರು ಸೇರಿಸುತ್ತಾರೆ. ಅವರು ತಮ್ಮ ಹೆಸರಿನಲ್ಲಿ ತೆರೆದಿರುವ ಬ್ಯಾಂಕ್ ಲಾಕರ್‌ಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವುದರಿಂದ ಹಿತಾಸಕ್ತಿಗಳನ್ನು ಮತ್ತಷ್ಟು ಕಾಪಾಡಬಹುದು. ಜೊತೆಗೆ, ಸ್ತ್ರೀಧನ ಮತ್ತು ಅದರ ನಿರ್ವಹಣೆಯ ಅಂಶಗಳನ್ನು ವಿವರಿಸುವ ಕಾನೂನು ಮಾನ್ಯತೆಯ ಒಪ್ಪಂದ ಅಥವಾ ಪ್ರತ್ಯೇಕ ಕಾನೂನು ದಾಖಲೆಯನ್ನು ರಚಿಸಿಟ್ಟುಕೊಳ್ಳುವುದು ಕ್ಷೇಮ. ಸ್ತ್ರೀಧನದ ಕುರಿತು ಮಹಿಳೆಯರಿಗೆ ತಮ್ಮ ಕಾನೂನು ಹಕ್ಕುಗಳ ಬಗ್ಗೆ ಅರಿವು ಇರಬೆಕು ಮತ್ತು ಅಗತ್ಯವಿದ್ದರೆ ಕಾನೂನು ಸಲಹೆಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.

Stridhan law for Women -ಕುಟುಂಬದವರೂ ಜಾಗೃತರಾಗಿರಬೇಕು

ಗಂಡನ ಕುಟುಂಬವೂ ಸ್ತ್ರೀಧನ ವಿಷಯದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗಿದೆ. ಮಹಿಳೆಗೆ ಆಭರಣಗಳನ್ನು ಉಡುಗೊರೆಯಾಗಿ ನೀಡುವಾಗ, ಖರೀದಿಸಿದ ವಸ್ತುಗಳ ವಿವರಣೆಗಳು ಮತ್ತು ಅದರ ತೂಕ ಸೇರಿದಂತೆ ಬಿಲ್‌ಗಳು ಮತ್ತು ರಸೀದಿಗಳನ್ನು ಒದಗಿಸಬೇಕು. ಇದು ಪತಿ ಮತ್ತು ಕುಟುಂಬ ಇಬ್ಬರಿಗೂ ಉದ್ದೇಶದ ಸ್ಪಷ್ಟತೆಯನ್ನು ಖಾತ್ರಿಗೊಳಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ವಕೀಲರಾದ ಪ್ರತಿಭಾ ಬಂಗೇರಾ ಅವರು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಹೇಳುತ್ತಾರೆ. ಇದೇ ವೇಳೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಬೆದರಿಸಿ ಪತಿಯಿಂದ ಕಿರುಕುಳ ಮತ್ತು ಸುಲಿಗೆ ಮಾಡಲು ನಕಲಿ ಆಭರಣ ಪಟ್ಟಿಯನ್ನು ಬಳಸಲಾಗುತ್ತದೆ ಎಂದು ಬಂಗೇರ ಎಚ್ಚರಿಸುತ್ತಾರೆ.

Stridhan law for Women- ಮಹಿಳೆಯರಿಗೆ ಕಾನೂನಿನ ಆಶ್ರಯ

ಪತಿ ಅಥವಾ ಆತನ ಕುಟುಂಬದವರು ಮಹಿಳೆಯ ಸ್ತ್ರೀಧನವನ್ನು ಆಕ್ರಮಿಸಿಕೊಂಡರೆ, ಆಕೆಯ ಹಿತಾಸಕ್ತಿಗಳನ್ನು ರಕ್ಷಿಸಲು ಕಾನೂನು ನಿಬಂಧನೆಗಳು ನೆರವಾಗಬಲ್ಲವು. ಒಂದು ವೇಳೆ ಮಹಿಳೆಯು ತನ್ನ ಪತಿ ಅಥವಾ ಕುಟುಂಬದ ಯಾವುದೇ ಸದಸ್ಯರಿಗೆ ತನ್ನ ಸ್ತ್ರೀಧನ ಆಸ್ತಿಯ ಮೇಲೆ ಪ್ರಭುತ್ವವನ್ನು ವಹಿಸಿಕೊಟ್ಟರೆ ಮತ್ತು ಅದನ್ನು ಅವಳಿಗೆ ಹಿಂತಿರುಗಿಸದಿದ್ದರೆ, ಮಹಿಳೆಯು ಭಾರತೀಯ ದಂಡ ಸಂಹಿತೆ 1860 ಸೆಕ್ಷನ್ 406 ರ ಅಡಿಯಲ್ಲಿ ‘ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್’ ಎಂಬ ಅಪರಾಧ ಸಂಹಿತೆಯನ್ನು ಪ್ರಯೋಗಿಸಬಹುದು. ಈ ಅಪರಾಧದಡಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು.

Stridhan law for Women – ನ್ಯಾಯಾಲಯದಲ್ಲಿ ಏನಾಗುತ್ತದೆ?

ಭಿನ್ನಾಭಿಪ್ರಾಯಗಳಿದ್ದಲ್ಲಿ, ಹೆಂಡತಿ ಆಸ್ತಿಯನ್ನು ಸ್ತ್ರೀಧನ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಪತಿ ಸಾಬೀತುಪಡಿಸಬೇಕಾಗಬಹುದು. ಸಾಮಾನ್ಯವಾಗಿ, ಸ್ತ್ರೀಧನದ ಮಾಲೀಕತ್ವವನ್ನು ಸಾಬೀತುಪಡಿಸುವ ಜವಾಬ್ದಾರಿಯು ಸಾಮಾನ್ಯವಾಗಿ ಆ ಹಕ್ಕನ್ನು ಪ್ರತಿಪಾದಿಸುವ ಮಹಿಳೆಯ ಮೇಲೆಯೇ ಇರುತ್ತದೆ

ಇತರ ಧರ್ಮಗಳಲ್ಲಿಯೂ ಸಹ, ಇದೇ ರೀತಿಯ ನಿಬಂಧನೆಗಳು ಮಹಿಳೆಯರ ಸ್ವತ್ತುಗಳನ್ನು ಅಥವಾ ಮದುವೆಯ ಸಮಯದಲ್ಲಿ ಸ್ವೀಕರಿಸಿದ ಉಡುಗೊರೆಗಳನ್ನು ರಕ್ಷಿಸಲು ಅಸ್ತಿತ್ವದಲ್ಲಿವೆ.

“ಇಸ್ಲಾಮಿಕ್ ಕಾನೂನಿನಲ್ಲಿ, ಮದುವೆಯ ಸಮಯದಲ್ಲಿ ಪತಿಯು ಹೆಂಡತಿಗೆ ನೀಡುವ ಮೆಹರ್ (ವರದಕ್ಷಿಣೆ) ಗೆ ನಿಬಂಧನೆಗಳಿವೆ, ಅದು ಅವಳ ಆರ್ಥಿಕ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ವಕೀಲರು ಹೇಳುತ್ತಾರೆ.

Stridhan law for Women -ಮಹಿಳೆ ಸಮಾಜದ ಸಮಾನ ಭಾಗ, ಆದರೆ…

ಮಹಿಳೆಯನ್ನು ಸಮಾಜದ ಸಮಾನ ಭಾಗವೆಂದು ಪರಿಗಣಿಸುವವರೆಗೆ ಮಹಿಳೆ ಯಾವುದೇ ಆಸ್ತಿಗೆ ಅರ್ಹರಲ್ಲ ಎಂಬ ಸಿದ್ಧಾಂತವನ್ನು ಅನುಸರಿಸಲಾಯಿತು. ಕಾಲಾನಂತರದಲ್ಲಿ ಪ್ರಗತಿಯೊಂದಿಗೆ, ಮಹಿಳೆಯರು ಪ್ರತಿಷ್ಠಿತ ಸ್ಥಾನಮಾನವನ್ನು ಪಡೆಯಲು ಪ್ರಾರಂಭಿಸಿದಾಗ, ಸ್ತ್ರೀಧನ ಹಿಂದೂ ಕಾನೂನಿನಲ್ಲಿ ಗುರುತಿಸಲ್ಪಟ್ಟಿತು. ಆರಂಭದಲ್ಲಿ, ಇದನ್ನು ಗುರುತಿಸಿದಂತೆ, ಮಹಿಳೆಯರಿಗೆ ಆಸ್ತಿಯ ಮೇಲೆ ಸಂಪೂರ್ಣ ಮಾಲೀಕತ್ವವಿರಲಿಲ್ಲ ಮತ್ತು ಆಸ್ತಿಯನ್ನು ಅನ್ಯಗೊಳಿಸಲು/ವಿಲೇವಾರಿ ಮಾಡಲು ಪತಿಯಿಂದ ಒಪ್ಪಿಗೆ ಅಗತ್ಯವಾಗಿತ್ತು. ಹಿಂದೂ ಉತ್ತರಾಧಿಕಾರ ಕಾಯಿದೆ, 1956 ರ ಶಾಸನವು ಹಿಂದೂ ಕಾನೂನಿನ ಅಡಿಯಲ್ಲಿ ಮಹಿಳೆಯರನ್ನು ಆಸ್ತಿಗಳ ಸಂಪೂರ್ಣ ಮಾಲೀಕರೆಂದು ಪರಿಗಣಿಸಲು ಕಾರಣವಾಯಿತು ಮತ್ತು ಅವರಿಗೆ ಅದರ ಸಂಪೂರ್ಣ ಹಕ್ಕನ್ನು ನೀಡಿತು.

Stridhan law for Women -ಮಹಿಳಾ ಸಬಲೀಕರಣಕ್ಕೆ ಅಸ್ತ್ರ…

ಸ್ತ್ರೀಧನವು ಮಹಿಳೆಯರಿಗೆ ತಮ್ಮ ಸ್ವಂತ ಆಸ್ತಿಯನ್ನು ಹೊಂದಲು ಮತ್ತು ಸ್ವಾತಂತ್ರ್ಯದ ಭಾವನೆಯನ್ನು ಪಡೆಯಲು ಅಧಿಕಾರ ನೀಡಿದಂತಾಗಿದೆ. ಈ ಹಿಂದೆ ಮಹಿಳೆಯರು ತಮ್ಮ ಗಂಡಂದಿರ ನೆರಳಿನಲ್ಲಿಯೇ ಎಲ್ಲವನ್ನೂ ನಿಭಾಯಿಸಬೇಕಿತ್ತು. ಮಹಿಳೆಯರಿಗೆ ಭದ್ರತೆಯ ಪ್ರಜ್ಞೆಯನ್ನು ಒದಗಿಸುವ ಶಾಸಕಾಂಗದ ಏಕೈಕ ಉದ್ದೇಶದಿಂದ ಜಾರಿಗೆ ಬಂದ ಭಾರತದಲ್ಲಿ ಸ್ತ್ರೀಧನ ಕಾನೂನು ಜಾರಿ ನಂತರ, ಅದು ಮಹಿಳೆಯರಿಗೆ ಅಧಿಕಾರ ಮತ್ತು ಆಸ್ತಿಯ ಮಾಲೀಕತ್ವದ ಪ್ರಜ್ಞೆಯನ್ನು ಒದಗಿಸಿದೆ. ಆಸ್ತಿಯನ್ನು ಹೊಂದುವುದು ಸಮಾಜದಲ್ಲಿ ಸ್ಥಾನಮಾನದ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ.

ಶರಣಾಗತಿಯನ್ನು ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಸ್ವಯಂಪ್ರೇರಣೆಯಿಂದ ನಡೆಸಬಹುದು ಅಥವಾ ಆಕೆಯ ಮರಣದ ನಂತರ ಮಾಡಬಹುದು. ತನ್ನ ಹತ್ತಿರದ ಉತ್ತರಾಧಿಕಾರಿಯ ಪರವಾಗಿ, ಮಹಿಳೆಯು ತನ್ನ ಆಸ್ತಿಯನ್ನು ತ್ಯಜಿಸುವ ಹಕ್ಕನ್ನು ಹೊಂದಿದ್ದಾಳೆ.

Also Read: ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ?

ಹಿಂದೂ ಉತ್ತರಾಧಿಕಾರ ಕಾಯಿದೆಯ ಜಾರಿಯು ಹಿಂದೂ ಮಹಿಳೆಯರ ಆಸ್ತಿ ಹಕ್ಕುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ಕಾಯಿದೆಯ ಭಾಗವಾಗಿ, ಮಹಿಳೆಯರಿಗೆ ಕೆಲವು ಸವಲತ್ತುಗಳನ್ನು ನೀಡಲಾಗುತ್ತದೆ, ಅದು ದಶಕಗಳಿಂದ ನಿರಾಕರಿಸಲ್ಪಟ್ಟಿದ್ದಾಗಿದೆ. ಇದು ಮಹಿಳೆಯರ ಹಕ್ಕುಗಳ ರಕ್ಷಣೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.

Stridhan law for Women -ಸ್ತ್ರೀಧನ ಮತ್ತು ವರದಕ್ಷಿಣೆ ನಡುವಣ ಸೂಕ್ಷ್ಮ ವ್ಯತ್ಯಾಸ

‘ಸ್ತ್ರೀಧನ’ ಮತ್ತು ‘ವರದಕ್ಷಿಣೆ’ ಸಂಪೂರ್ಣವಾಗಿ ವಿಭಿನ್ನ ಪದಗಳಾಗಿದ್ದರೂ, ಅವು ಕೆಲವೊಮ್ಮೆ ಒಂದೇ ವಿಷಯವನ್ನು ಅರ್ಥೈಸಲು ಗೊಂದಲಕ್ಕೊಳಗಾಗುತ್ತವೆ. ವರದಕ್ಷಿಣೆಯು ದೇಶೀಯ ಕಾನೂನಿನ ಅಡಿಯಲ್ಲಿ ಮದುವೆಯ ಮೊದಲು, ನಂತರ ಅಥವಾ ಮದುವೆಯ ಸಮಯದಲ್ಲಿ ವಧುವಿನ ಕುಟುಂಬವು ವರನ ಕುಟುಂಬಕ್ಕೆ ನೀಡಿದ ಅಥವಾ ನೀಡಲು ಒಪ್ಪಿದ ಯಾವುದೇ ಆಸ್ತಿ ಅಥವಾ ಮೌಲ್ಯಯುತ ಭದ್ರತೆ ಎಂದು ವ್ಯಾಖ್ಯಾನಿಸಲಾಗಿದೆ.

‘ವರದಕ್ಷಿಣೆ’ dowry ಮತ್ತು ‘ಸ್ತ್ರೀಧನ’ Stridhan ನಡುವಿನ ಅತ್ಯಂತ ಗಮನಾರ್ಹವಾದ ವ್ಯತ್ಯಾಸವೆಂದರೆ “ಬೇಡಿಕೆ, ಅನಗತ್ಯ ಪ್ರಭಾವ ಅಥವಾ ಬಲವಂತದ” ಉಪಸ್ಥಿತಿಯು ವರದಕ್ಷಿಣೆ ವಿಷಯದಲ್ಲಿ ಕಂಡುಬರುತ್ತದೆ ಆದರೆ ಅದು ಸ್ತ್ರೀಧನ ರೂಪದಲ್ಲಿ ಇರುವುದಿಲ್ಲ.

ಸ್ತ್ರೀಧನ ಎನ್ನುವುದು ಮಹಿಳೆಯರಿಗೆ ಸ್ವಯಂಪ್ರೇರಣೆಯಿಂದ ನೀಡಲಾಗುವ ಉಡುಗೊರೆಯಾಗಿದೆ. ಅದೇ ವರದಕ್ಷಿಣೆ ಎಂಬುದು ಒತ್ತಡ, ಅನಗತ್ಯ ಪ್ರಭಾವ ಅಥವಾ ಬಲವಂತದ ಪರಿಣಾಮವಾಗಿ ನೀಡಲಾಗುತ್ತದೆ. ಭಾರತೀಯ ನ್ಯಾಯಾಲಯಗಳು ಸ್ತ್ರೀಧನ ಮತ್ತು ವರದಕ್ಷಿಣೆ ನಡುವೆ ವ್ಯತ್ಯಾಸವನ್ನು ಸ್ಪಷ್ಟವಾಗಿ ಸ್ಥಾಪಿಸಿವೆ. ಅಂತಹ ವ್ಯತ್ಯಾಸದ ಹಿಂದಿನ ಮೂಲಭೂತ ಕಾರಣವೆಂದರೆ ಭವಿಷ್ಯದಲ್ಲಿ ಯಾವುದೇ ವಿವಾಹವು ಮುರಿದುಹೋದರೆ, ಮಹಿಳೆಯು ಸ್ತ್ರೀಧನವಾಗಿ ಸ್ವೀಕರಿಸಿದ ಸರಕುಗಳನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಆದರೆ ಅದು ವರದಕ್ಷಿಣೆ ಉಡುಗೊರೆಗಳೊಂದಿಗೆ ಇರುವುದಿಲ್ಲ.

Published On - 11:27 am, Sat, 25 May 24

ತಾಜಾ ಸುದ್ದಿ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..